Railway Recruitment 2022: ಈಶಾನ್ಯ ರೈಲ್ವೆ ನೇಮಕಾತಿ: ಇಂಜಿನಿಯರ್ ಪದವೀಧರರಿಗೆ ಅವಕಾಶ
Railway Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ner.indianrailways.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
Railway Recruitment 2022: ಈಶಾನ್ಯ ರೈಲ್ವೆ ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ner.indianrailways.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು 22 ಜೂನ್ 2022 ರಂದು ಪ್ರಾರಂಭವಾಗಿದ್ದು, 5 ಜುಲೈ 2022 ರವರೆಗೆ ಅರ್ಜಿ ಹಾಕಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು: ಒಟ್ಟು 20 ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. -ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ವರ್ಕ್ಸ್) – 15 ಖಾಲಿ ಹುದ್ದೆಗಳು -ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ಚುನಾಯಿತ/ಟಿಆರ್‌ಡಿ) – 2 ಖಾಲಿ ಹುದ್ದೆಗಳು -ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್ (ಸಿಗ್ನಲ್) – 3 ಖಾಲಿ ಹುದ್ದೆಗಳು
ಶೈಕ್ಷಣಿಕ ಅರ್ಹತೆ: ವಿವಿಧ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ ಮತ್ತು ವಿವಿಧ ವಿಭಾಗಗಳಲ್ಲಿ ಡಿಪ್ಲೊಮಾ ಪದವಿಯನ್ನು ಕಡ್ಡಾಯ ಶೈಕ್ಷಣಿಕ ಅರ್ಹತೆಯಾಗಿ ನಿಗದಿ ಮಾಡಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಅಧಿಸೂಚನೆಯಲ್ಲಿರುವ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ.
ಆಯ್ಕೆ ಪ್ರಕ್ರಿಯೆ: ಗೇಟ್ ಸ್ಕೋರ್ ಕಾರ್ಡ್, ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಮೇಲಿನ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಗೇಟ್ ಅಂಕಪಟ್ಟಿಗೆ 55 ಮಾರ್ಕ್ಸ್, ಅನುಭವಕ್ಕೆ 30 ಮಾರ್ಕ್ಸ್ ಮತ್ತು ಸಂದರ್ಶನಕ್ಕೆ 15 ಮಾರ್ಕ್ಸ್ ನಿಗದಿಪಡಿಸಲಾಗಿದೆ. ಅದರಂತೆ ಆಯಾ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಮಾರ್ಕ್ಸ್ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ₹ 500 ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 5, 2022.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.