BSF Recruitment 2022: ಭಾರತೀಯ ಸೇನೆಯ ಗಡಿ ಭದ್ರತಾ ಪಡೆ (BSF) ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ SI (ವಾಹನ ಮೆಕ್ಯಾನಿಕ್), SI (ಆಟೋ ಎಲೆಕ್ಟ್ರಿಷಿಯನ್), SI (ಸ್ಟೋರ್ ಕೀಪರ್), ಕಾನ್ಸ್‌ಟೇಬಲ್ (SKT), ಕಾನ್ಸ್‌ಟೇಬಲ್ (ಫಿಟ್ಟರ್), ಕಾನ್ಸ್‌ಟೇಬಲ್ (ಕಾರ್ಪೆಂಟರ್), ಕಾನ್ಸ್‌ಟೇಬಲ್ (ಆಟೋ ಎಲೆಕ್ಟ್ರಿಷಿಯನ್) ಕಾನ್ಸ್‌ಟೇಬಲ್ (ವಾಹನ ಮೆಕ್ಯಾನಿಕ್), ಕಾನ್ಸ್‌ಟೇಬಲ್ (ಬಿಎಸ್‌ಟಿಎಸ್), ಕಾನ್ಸ್‌ಟೇಬಲ್ (ವೆಲ್ಡರ್), ಕಾನ್ಸ್‌ಟೇಬಲ್ (ಪೇಂಟರ್) ಸೇರಿದಂತೆ ಹಲವು ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಬಿಎಸ್ಎಫ್ ನೀಡಿದ ನೇಮಕಾತಿ ಜಾಹೀರಾತಿನ ಪ್ರಕಾರ, ಅಧಿಸೂಚನೆಯ ದಿನಾಂಕದಿಂದ 30 ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅದರಂತೆ ಜೂನ್ 22 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ವೇತನ:
ಎಸ್‌ಐ – ರೂ 35,000 ರಿಂದ 1,12,400/-
ಕಾನ್ಸ್‌ಟೇಬಲ್ – ರೂ 21,700 ರಿಂದ 69,100/-
ಶೈಕ್ಷಣಿಕ ಅರ್ಹತೆ:
SI- ಆಟೋ ಮೊಬೈಲ್ ಎಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ಆಟೋ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು.
ಕಾನ್ಸ್‌ಟೇಬಲ್ – ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಜೊತೆ 10ನೇ ತರಗತಿ ಪಾಸ್ ಆಗಿರಬೇಕು. ಅಲ್ಲದೆ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
SI – 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಾನ್ಸ್‌ಟೇಬಲ್ – 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.