TCS And INFOSYS Jobs: 90,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಚಿಂತನೆ, ವರ್ಕ್​ ಫ್ರಂ ಹೋಮ್ ಅವಕಾಶ

ಮುಂಬರುವ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ 50 ಸಾವಿರ ಮತ್ತು ಐಟಿಸಿ ಕಂಪನಿಯು 40ಸಾವಿರ ಫ್ರೆಶರ್​ಗಳನ್ನು ನೇಮಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

TCS And INFOSYS Jobs: 90,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಚಿಂತನೆ, ವರ್ಕ್​ ಫ್ರಂ ಹೋಮ್ ಅವಕಾಶ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jun 10, 2022 | 4:08 PM

ಮುಂಬರುವ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಮತ್ತು ಟಿಸಿಎಸ್​ ಕಂಪನಿಯು ಒಟ್ಟು 90ಸಾವಿರ ಫ್ರೆಶರ್​ಗಳನ್ನು ನೇಮಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ. 2023 ರಲ್ಲಿ 50,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಕ ಮಾಡಲು ಇನ್ಫೋಸಿಸ್ ಯೋಜನೆ ನಡೆಸುತ್ತಿದ್ದರೆ, ಟಿಸಿಎಸ್ 40 ಸಾವಿರ ಫ್ರೆಶರ್​ಗಳನ್ನು ನೇಮಿಸಲು ಚಿಂತನೆ ನಡೆಸುತ್ತಿದೆ. ವರದಿಗಳ ಪ್ರಕಾರ, ಇನ್ಫೋಸಿಸ್ ಮತ್ತು ಟಿಸಿಎಸ್ 2021 ರ ಹಣಕಾಸು ವರ್ಷದಲ್ಲಿ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ವಿಷಯದಲ್ಲಿ 61,000 ಜನರನ್ನು ಕ್ಯಾಂಪಸ್ ನೇಮಕ ಮಾಡಿಕೊಂಡಿವೆ. TCS ಮತ್ತು Infosys 2022ರ ಹಣಕಾಸು ವರ್ಷದಲ್ಲಿ ಕ್ರಮವಾಗಿ 1,00,000 ಮತ್ತು 85,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿವೆ.

ಇದನ್ನೂ ಓದಿ: Jobs: 400 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಸಿಡ್ ದಾಳಿ ಸಂತ್ರಸ್ತರಿಂದ ಅರ್ಜಿ ಆಹ್ವಾನ

2022ರ ಮಾರ್ಚ್​ನಲ್ಲಿ ಇನ್ಫೋಸಿಸ್ ಉದ್ಯೋಗ ನಷ್ಟದ ಪ್ರಮಾಣವು ಶೇಕಡಾ 25.5 ರಿಂದ ಶೇಕಡಾ 27.7 ಕ್ಕೆ ಏರಿದೆ ಎಂದು ವರದಿಯಾಗಿದೆ. “ನಾವು ಕಳೆದ ಹಣಕಾಸು ವರ್ಷದಲ್ಲಿ ಭಾರತದಾದ್ಯಂತ ಮತ್ತು ಜಾಗತಿಕವಾಗಿ 85,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದ್ದೇವೆ ಮತ್ತು ಈ ವರ್ಷ ನಾವು ಕನಿಷ್ಠ 50,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದ್ದೇವೆ” ಎಂದು ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್ ಹೇಳಿದರು.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನೇಮಕಾತಿಯ ವೇಗವು ಕಳೆದ ಹಣಕಾಸು ವರ್ಷದಂತೆಯೇ ಇರುತ್ತದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ ಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಜಿ.ಸುಬ್ರಮಣ್ಯಂ, ಈ ವರ್ಷ ಕಂಪನಿಯು 40,000 ಜನರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ ಮತ್ತು ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Jobs: 2023ರಲ್ಲಿ ಪ್ರತಿ ಐವರಲ್ಲಿ ಒಬ್ಬರು ಹೊಸ ಕೆಲಸ ಹುಡುಕುವ ಸಾಧ್ಯತೆ ಎನ್ನುತ್ತಿದೆ ಈ ಸಮೀಕ್ಷೆ

ವರ್ಕ್​ ಫ್ರಂ ಹೋಮ್

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 25X25 ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಇದು ಜನರನ್ನು ಮತ್ತೆ ಕಚೇರಿಗೆ ಕರೆತರುವ ಮತ್ತು ಕ್ರಮೇಣ ಹೈಬ್ರಿಡ್ ಕೆಲಸದ ಮಾದರಿಗೆ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ 25X25 ಮಾದರಿಯ ಅಡಿಯಲ್ಲಿ ಕಂಪನಿಯ ಶೇಕಡಾ 25 ರಷ್ಟು ಉದ್ಯೋಗಿಗಳು 2025ರ ವೇಳೆಗೆ ಕಚೇರಿಯಿಂದಲೇ ಕೆಲಸ ಮಾಡಬೇಕಾಗುತ್ತದೆ. ಅಂದರೆ ಮನೆಯಿಂದ ಕೆಲಸ ಮುಂದುವರಿಯುತ್ತದೆ. ಭಾರತ ಮತ್ತು ವಿದೇಶಗಳಲ್ಲಿನ ಅನೇಕ ಕಂಪನಿಗಳು ಈ ಹೈಬ್ರಿಡ್ ವರ್ಕ್ ಕಲ್ಚರ್ ಮಾದರಿಯನ್ನು ಅನ್ವೇಷಿಸುತ್ತಿವೆ. ಇದರಲ್ಲಿ ಕಂಪನಿಯ ಉದ್ಯೋಗಿಗಳು ವಾರದಲ್ಲಿ ಕೆಲವು ದಿನಗಳವರೆಗೆ ಕಚೇರಿಯಿಂದ ಮತ್ತು ಇತರರು ಮನೆಯಿಂದ ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಓದಿ: BEL Recruitment 2022: ಬಿಇಎಲ್​ ನೇಮಕಾತಿ: ವೇತನ 40 ಸಾವಿರ ರೂ.

ಹೆಚ್‌ಸಿಎಲ್ ಹೈಬ್ರಿಡ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ವರದಿಯಾಗಿದೆ. ಇದು ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಪ್ರಮುಖ ಆದ್ಯತೆಯಾಗಿ ಇರಿಸುತ್ತದೆ. ಮತ್ತೊಂದೆಡೆ ಐಟಿ ಕಂಪನಿ ಇನ್ಫೋಸಿಸ್ ಬ್ಯಾಕ್ ಆಫೀಸ್‌ಗಳನ್ನು ಯೋಜಿತ ರೀತಿಯಲ್ಲಿ ತೆರೆಯಲಾಗುವುದು ಎಂದು ಹೇಳಿದೆ. ಆದಾಗ್ಯೂ ಇಲ್ಲಿಯೂ ಸಹ ಹೈಬ್ರಿಡ್ ಮೋಡ್​ನಲ್ಲಿ ಕೆಲಸವನ್ನು ನಡೆಸಲಾಗುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Fri, 10 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ