Jobs: 400 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಸಿಡ್ ದಾಳಿ ಸಂತ್ರಸ್ತರಿಂದ ಅರ್ಜಿ ಆಹ್ವಾನ
ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾವು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಿಡ್ ದಾಳಿ ಸಂತ್ರಸ್ತರು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಿಡ್ ದಾಳಿ ಸಂತ್ರಸ್ತರು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. AAI ನ ಅಧಿಕೃತ ಸೈಟ್ aai.aero ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಅರ್ಹತೆಯ ಮಾನದಂಡ
ಭೌತಶಾಸ್ತ್ರ ಮತ್ತು ಗಣಿತದೊಂದಿಗೆ ವಿಜ್ಞಾನ ವಿಷಯದಲ್ಲಿ ಮೂರು ವರ್ಷಗಳ ಪದವಿ (B.Sc) ಪೂರ್ಣಗೊಳಿಸಿರಬೇಕು ಅಥವಾ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್‌ನಲ್ಲಿ ಪೂರ್ಣ ಸಮಯದ ನಿಯಮಿತ ಬ್ಯಾಚುಲರ್ ಪದವಿ (ಭೌತಶಾಸ್ತ್ರ ಮತ್ತು ಗಣಿತವು ಯಾವುದಾದರೂ ಒಂದು ಸೆಮಿಸ್ಟರ್ ಪಠ್ಯಕ್ರಮದಲ್ಲಿ ವಿಷಯಗಳಾಗಿರಬೇಕು) ಪಡೆದವರು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: BSF Recruitment 2022: ಗಡಿ ಭದ್ರತಾ ಪಡೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 1 ಲಕ್ಷ ರೂ.
ವಯಸ್ಸಿನ ಮಿತಿ
ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸಿನ ಮಿತಿ 27 ವರ್ಷ ಆಗಿದೆ. ಅರ್ಜಿ ಸಲ್ಲಿಸುವ ನೋಂದಣಿ ಪ್ರಕ್ರಿಯೆಯು ಜೂನ್ 15 ರಂದು ಪ್ರಾರಂಭವಾಗಲಿದ್ದು, ಜುಲೈ 14ರಂದು ಅರ್ಜಿ ಸಲ್ಲಿಸಲು ಕೊನೆಯ ದಿವಾಗಿದೆ. ಈ ನೇಮಕಾತಿ ಮೂಲಕ 400 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡುತ್ತದೆ.
ಆಯ್ಕೆ ಪ್ರಕ್ರಿಯೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ಇರಲಿದೆ. ಆನ್‌ಲೈನ್ ಪರೀಕ್ಷೆಯ ನಂತರ ದಾಖಲೆಗಳ ಪರಿಶೀಲನೆ, ಧ್ವನಿ ಪರೀಕ್ಷೆ ಮತ್ತು ಹಿನ್ನೆಲೆ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಯು ಆನ್‌ಲೈನ್ ಪರೀಕ್ಷೆಯಲ್ಲಿನ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ತಯಾರಿಸಲಾದ ಮೆರಿಟ್ ಪಟ್ಟಿಯ ಪ್ರಕಾರ, ಧ್ವನಿ ಪರೀಕ್ಷೆಗೆ ಅರ್ಹತೆ ಮತ್ತು ಮನೋವಿಕೃತ ಪದಾರ್ಥಗಳು ಮತ್ತು ಹಿನ್ನೆಲೆಯ ಪರೀಕ್ಷೆ ಸೇರಿದಂತೆ ಹುದ್ದೆಗೆ ಸೂಚಿಸಲಾದ ಎಲ್ಲಾ ಇತರ ಅರ್ಹತಾ ಮಾನದಂಡಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ಇದನ್ನೂ ಓದಿ: IBPS RRB Recruitment 2022: ಬ್ಯಾಂಕಿಂಗ್ ಕ್ಷೇತ್ರದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು 1000 ರೂ. ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು ಕೇವಲ 81 ರೂ. ಪಾವತಿಸಬೇಕು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು AAI ನ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡ
Published On - 3:12 pm, Fri, 10 June 22