SIDBI Jobs: ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI)ವು ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ಸ್ (DE) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

SIDBI Jobs: ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI)
TV9kannada Web Team

| Edited By: Rakesh Nayak

Jun 10, 2022 | 4:24 PM

ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI)ವು ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ಸ್ (DE) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ಗುತ್ತಿಗೆ ಆಧಾರದಲ್ಲಿ ನೇಮಕಾತಿ (Recruitment) ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳನ್ನು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ. ಸಂದರ್ಶನವು ಆನ್‌ಲೈನ್‌ನಲ್ಲಿ ನಡೆಯುತ್ತದೆ. ಈ ನಿಟ್ಟಿನಲ್ಲಿ ಕರೆ ಪತ್ರದಲ್ಲಿ ನಿರ್ದಿಷ್ಟಪಡಿಸಿದಂತೆ ಅಗತ್ಯ ಮೂಲಸೌಕರ್ಯಗಳ ಲಭ್ಯತೆಯನ್ನು ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ: TCS And INFOSYS Jobs: 90,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಚಿಂತನೆ, ವರ್ಕ್​ ಫ್ರಂ ಹೋಮ್ ಅವಕಾಶ

SIDBI ಬ್ಯಾಂಕ್ ಹುದ್ದೆಯ ವಿವರಗಳು

ಉತ್ತರ ಪ್ರದೇಶ – 2, ಬಿಹಾರ – 1, ಜಾರ್ಖಂಡ್ – 1, ಒಡಿಶಾ – 1, ತೆಲಂಗಾಣ – 1, ಎಂಪಿ – 1, ಛತ್ತೀಸ್‌ಗಢ -1, ಪಶ್ಚಿಮ ಬಂಗಾಳ – 2, ತಮಿಳುನಾಡು – 1, ಉತ್ತರ ಖಂಡ – 1, ರಾಜಸ್ಥಾನ – 1, ಆಂಧ್ರ ಪ್ರದೇಶ – 1, ಅಸ್ಸಾಂ ಸೇರಿ NER – 3, ಜಮ್ಮು ಕಾಶ್ಮೀರ – 2, ಲಡಾಖ್ – 1, ಹಿಮಾಚಲ ಪ್ರದೇಶ – 1, ಅಂಡಮಾನ್ ಮತ್ತು ನಿಕೋಬಾರ್ – 1, ಮಹಾರಾಷ್ಟ್ರ -2, ಪಂಜಾಬ್ – 1 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಇದನ್ನೂ ಓದಿ: BSF Recruitment 2022: ಗಡಿ ಭದ್ರತಾ ಪಡೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 1 ಲಕ್ಷ ರೂ.

ಅರ್ಜಿ ಸಲ್ಲಿಸಲು ಜು.17 ಕೊನೆಯ ದಿನವಾಗಿದೆ. ಉದ್ಯಮಶೀಲತೆಯ ಮನಸ್ಥಿತಿಯನ್ನು ಹೊಂದಿರುವ ಅಭಿವೃದ್ಧಿ ವೃತ್ತಿಪರರು ಮತ್ತು ಪ್ರತಿಷ್ಠಿತ ಸಂಸ್ಥೆಗಳಾದ IRMA, XIMB, TISS, IIFM, DMI, ISDM, APU ಅಥವಾ ಅಂತಹ ಇತರ ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ / ರೂರಲ್ ಮ್ಯಾನೇಜ್‌ಮೆಂಟ್ / ಸೋಶಿಯಲ್ ವರ್ಕ್‌ನಲ್ಲಿ PG ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಅನುಭವ: ಮೈಕ್ರೋ ಎಂಟರ್‌ಪ್ರೈಸ್ ಪ್ರಚಾರ, ಮೈಕ್ರೋಫೈನಾನ್ಸ್, ಗ್ರಾಮೀಣ ಜೀವನೋಪಾಯ, ಸಾಮಾಜಿಕ ಸಂಶೋಧನೆ, ಗ್ರಾಮೀಣ ಮಾರುಕಟ್ಟೆ, ಮಾನಿಟರಿಂಗ್ ಮತ್ತು ಮೌಲ್ಯಮಾಪನ ಇತ್ಯಾದಿಗಳಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವವರ ಅರ್ಜಿ ಸಲ್ಲಿಸಬಹದು. Also Read: Jobs: 400 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಸಿಡ್ ದಾಳಿ ಸಂತ್ರಸ್ತರಿಂದ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada