Jobs: 2023ರಲ್ಲಿ ಪ್ರತಿ ಐವರಲ್ಲಿ ಒಬ್ಬರು ಹೊಸ ಕೆಲಸ ಹುಡುಕುವ ಸಾಧ್ಯತೆ ಎನ್ನುತ್ತಿದೆ ಈ ಸಮೀಕ್ಷೆ

ಪಿಡಬ್ಲ್ಯುಸಿ ಜಾಗತಿಕ ಸಮೀಕ್ಷೆ ಪ್ರಕಾರ ಪ್ರತಿ ನಾಲ್ವರಲ್ಲಿ ಒಬ್ಬರು ಮುಂದಿನ ವರ್ಷ ಹೊಸ ಕೆಲಸ ಹುಡುಕಲಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿವೆ.

Jobs: 2023ರಲ್ಲಿ ಪ್ರತಿ ಐವರಲ್ಲಿ ಒಬ್ಬರು ಹೊಸ ಕೆಲಸ ಹುಡುಕುವ ಸಾಧ್ಯತೆ ಎನ್ನುತ್ತಿದೆ ಈ ಸಮೀಕ್ಷೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 25, 2022 | 7:32 AM

ಕೊವಿಡ್​-19 ನಂತರದಲ್ಲಿ ಉದ್ಯೋಗಿಗಳ ರಾಜೀನಾಮೆ (Resignation) ಪರ್ವ ಮುಂದುವರಿಯಲಿದೆ ಎಂಬುದು PwC ಹೊಸ ಜಾಗತಿಕ ಸಮೀಕ್ಷೆಯಿಂದ (survey) ತಿಳಿದುಬಂದಿದೆ. ಮುಂದಿನ 12 ತಿಂಗಳಲ್ಲಿ ಹೊಸ ಕೆಲಸ ಹುಡುಕಿಕೊಳ್ಳುವುದಾಗಿ ಪ್ರತಿ ಐದು ಮಂದಿಯಲ್ಲಿ ಒಬ್ಬರು ವಿಶ್ವದಾದ್ಯಂತ ಹೇಳಿಕೊಂಡಿದ್ದಾರೆ. PwCಯಿಂದ “ಗ್ಲೋಬಲ್ ವರ್ಕ್​ಫೋರ್ಸ್ ಹೋಪ್ಸ್ ಅಂಡ್ ಫಿಯರ್ಸ್ ಸರ್ವೇ 2022” ಅನ್ನು ವಿಶ್ವ ಆರ್ಥಿಕ ಫೋರಂನಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು. 44 ದೇಶಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ 52,195 ಮಂದಿ ಇದರಲ್ಲಿ ಭಾಗಿ ಆಗಿದ್ದರು. ಸಮೀಕ್ಷೆಯಲ್ಲಿ ಕಂಡುಬಂದಿರುವ ಪ್ರಕಾರ, ಹೆಚ್ಚಿನ ಸಂಬಳಕ್ಕಾಗಿ ಹೊಸ ಹುದ್ದೆಯನ್ನು ಹುಡುಕುವುದಾಗಿ ಹೇಳಿಕೊಂಡಿರುವವರ ಪ್ರಮಾಣ ಅತಿ ಹೆಚ್ಚು, ಅಂದರೆ ಶೇ 71ರಷ್ಟಿದೆ. ಈ ಮಧ್ಯೆ ಈಗಿನ ಉದ್ಯೋಗದಾತರನ್ನೇ ಸಂಬಳ ಹೆಚ್ಚಿಸುವಂತೆ ಕೇಳುವುದಾಗಿ ಶೇ 35ರಷ್ಟು ಮಂದಿ ಯೋಜನೆ ಇರಿಸಿಕೊಂಡಿದ್ದಾರೆ.

“ಈಗ ಕಂಡುಬದಿರುವುದರಲ್ಲಿ ಬಹಳ ಸ್ಪಷ್ಟವಾಗುವುದು ಏನೆಂದರೆ… ಬಹಳ ದೊಡ್ಡ ಸಂಖ್ಯೆಯ ಉದ್ಯೋಗಿಗಳು ತಮ್ಮ ಭವಿಷ್ಯದ ಉದ್ಯೋಗ ಮತ್ತು ಉದ್ಯೋಗ ಭದ್ರತೆ ಬಗ್ಗೆ ಆಲೋಚಿಸುತ್ತಿದ್ದಾರೆ,” ಎಂದು PwC ಜಾಗತಿಕ ಅಧ್ಯಕ್ಷ ಬಾಬ್ ಮೊರಿಟ್ಜ್ ವಿಶ್ವ ಆರ್ಥಿಕ ಫೋರಂನಲ್ಲಿ ಹೇಳಿದ್ದಾರೆ. ಆದರೆ “ಅಧಿಕಾರವು ಈಗ, ನಾವು ವಾದಿಸುವಂತೆ ಯಾರು ಉದ್ಯೋಗದಲ್ಲಿ ಇರುತ್ತಾರೋ ಅವರ ಕೈಯಲ್ಲಿದೆ.”

ದಶಕದಲ್ಲೇ ಹೆಚ್ಚುತ್ತಿರುವ ಹಣದುಬ್ಬರ, ಬಿಗಿಯಾದ ಕಾರ್ಮಿಕ ಮಾರುಕಟ್ಟೆಯ ಕಾರಣಕ್ಕೆ ಕಾರ್ಮಿಕರು ಹೆಚ್ಚಿನ ವೇತನವನ್ನು ಕೇಳುವಂತೆ ಮಾಡುತ್ತಿದೆ ಎಂಬುದು ಅಭಿಪ್ರಾಯ ಸಂಗ್ರಹ ವೇಳೆಯಲ್ಲಿ ಗೊತ್ತಾಗಿದೆ. ಇದು ಜಾಗತಿಕ ಕೇಂದ್ರ ಬ್ಯಾಂಕ್​ಗಳಿಗೂ ಆತಂಕಕ್ಕೆ ಕಾರಣ ಆಗಬಹುದು. ಇತ್ತೀಚಿನ ಎರಡನೇ ಸುತ್ತಿನ ಬೆಲೆ ಏರಿಕೆಯು ನೀತಿಯನ್ನು ಮತ್ತಷ್ಟು ವೇಹವಾಗಿ ಬಲಗೊಳಿಸುವಂತೆ ಒತ್ತಡ ಹಾಕಬಹುದು.

ಸಮೀಕ್ಷೆಯಲ್ಲಿ ತೋರಿಸಿರುವಂತೆ, ವೇತನದ ಒತ್ತಡ ತಂತ್ರಜ್ಞಾನ ವಲಯದಲ್ಲಿ ಹೆಚ್ಚಾಗಿದೆ. ಅಲ್ಲಿ ಶೇ 44ರಷ್ಟು ಸಿಬ್ಬಂದಿ ವೇತನ ಹೆಚ್ಚಳಕ್ಕೆ ಕೇಳುವ ಯೋಜನೆಯಲ್ಲಿ ಇದ್ದಾರೆ. ಸಾಋ್ವಜನಿಕ ವಲಯದಲ್ಲಿ ಈ ಸಂಖ್ಯೆ ಕೇವಲ ಶೇ 25ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Local Circles Survey: ಕಳೆದ ಮೂರು ತಿಂಗಳಲ್ಲಿ ಕುಟುಂಬಗಳ ವೆಚ್ಚ ಶೇ 10ರಷ್ಟು ಹೆಚ್ಚಳ ಎನ್ನುತ್ತಿದೆ ಈ ಸಮೀಕ್ಷೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ