BSF Recruitment 2022: ಭಾರತೀಯ ಗಡಿ ಭದ್ರತಾ ಪಡೆ, ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ ಮತ್ತು ಎಚ್‌ಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್ bsf.gov.in ಭೇಟಿ ನೀಡಿ ಅರ್ಜಿ ಸಲ್ಲಿಸಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 281 ಹುದ್ದೆಗಳು.
ಎಸ್‌ಐ ಮಾಸ್ಟರ್- 8 ಹುದ್ದೆಗಳು
ಎಸ್‌ಐ ಇಂಜಿನ್ ಡ್ರೈವರ್- 6 ಹುದ್ದೆಗಳು
ಎಸ್‌ಐ ವರ್ಕ್‌ಶಾಪ್- 2 ಹುದ್ದೆಗಳು
ಎಚ್‌ಸಿ ಮಾಸ್ಟರ್- 52 ಹುದ್ದೆಗಳು
ಎಚ್‌ಸಿ ಇಂಜಿನ್ ಡ್ರೈವರ್- 64 ಹುದ್ದೆಗಳು
ಎಚ್‌ಸಿ ವರ್ಕ್‌ಶಾಪ್- 19 ಹುದ್ದೆಗಳು
ಸಿಟಿ ಕ್ರ್ಯೂ- 130 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
10ನೇ ಮತ್ತು 12ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಎಸ್‌ಐ ಇಂಜಿನ್ ಡ್ರೈವರ್ ಹುದ್ದೆಗಳಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ 22 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಲ್ಲದೆ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಪ್ರಕ್ರಿಯೆ:
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bsf.gov.in ಗೆ ಭೇಟಿ ನೀಡುವ ಮೂಲಕ ನೇಮಕಾತಿಗಾಗಿ ಜಾಹೀರಾತು ನೀಡಿದ ದಿನಾಂಕದಿಂದ 30 ದಿನಗಳಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು.
ಈ ನೇಮಕಾತಿ ಸಂಬಂಧಿತ ಮಾಹಿತಿಗಾಗಿ ಹಾಗೂ ಅಧಿಸೂಚನೆಯನ್ನು ಪರಿಶೀಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.