Central Bank of India Recruitment 2023: ಸೆಂಟ್ರಲ್​ ಬ್ಯಾಂಕ್​ನ 250 ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Feb 01, 2023 | 2:34 PM

Central Bank of India Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್​ಸೈಟ್​ centralbankofindia.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

Central Bank of India Recruitment 2023: ಸೆಂಟ್ರಲ್​ ಬ್ಯಾಂಕ್​ನ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Central Bank of India Recruitment 2023
Follow us on

Central Bank of India Recruitment 2023: ಮುಂಬೈ ಮೂಲದ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಚೀಫ್ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್​ಸೈಟ್​ centralbankofindia.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಮುಖ್ಯ ವ್ಯವಸ್ಥಾಪಕರು (ಚೀಫ್ ಮ್ಯಾನೇಜರ್)- 50 ಹುದ್ದೆಗಳು
  • ಹಿರಿಯ ವ್ಯವಸ್ಥಾಪಕರು (ಸೀನಿಯರ್ ಮ್ಯಾನೇಜರ್)- 200 ಹುದ್ದೆಗಳು
  • ಒಟ್ಟು ಹುದ್ದೆಗಳ ಸಂಖ್ಯೆ- 250

ಅರ್ಹತಾ ಮಾನದಂಡಗಳು:

ಇದನ್ನೂ ಓದಿ
Income Tax Recruitment 2023: ಸರ್ಕಾರಿ ಉದ್ಯೋಗ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
AIASL Recruitment 2023: ಏರ್​ ಇಂಡಿಯಾ ನೇಮಕಾತಿ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
Karnataka Post Office Recruitment 2023: ಕರ್ನಾಟಕ ಅಂಚೆ ಇಲಾಖೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
SBI Recruitment 2023: ಎಸ್​ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಮುಖ್ಯ ವ್ಯವಸ್ಥಾಪಕರು- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು (ಯಾವುದೇ ವಿಭಾಗದಲ್ಲಿ). ಹಾಗೆಯೇ ಪಿಎಸ್‌ಬಿ/ಖಾಸಗಿ ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳಲ್ಲಿ ಅಧಿಕಾರಿಯಾಗಿ ಕನಿಷ್ಠ 7 ವರ್ಷಗಳ ಅನುಭವವನ್ನು ಹೊಂದಿರಬೇಕು. ಶಾಖೆ ವ್ಯವಸ್ಥಾಪಕ/ಕ್ರೆಡಿಟ್/ವಿದೇಶಿ ವಿನಿಮಯದ ಹುದ್ದೆಗಳನ್ನು ಅಲಂಕರಿಸಿದ ಅಭ್ಯರ್ಥಿಗಳ ಅನುಭವಕ್ಕೆ ತಕ್ಕಂತೆ ಆದ್ಯತೆ ನೀಡಲಾಗುತ್ತದೆ.
  • ಹಿರಿಯ ವ್ಯವಸ್ಥಾಪಕರು- ಈ ಹುದ್ದೆಗಳಿಗೆ ಪದವಿ (ಯಾವುದೇ ವಿಭಾಗದಲ್ಲಿ) ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಪಿಎಸ್‌ಬಿ/ಖಾಸಗಿ ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳಲ್ಲಿ ಅಧಿಕಾರಿಯಾಗಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕಾಗುತ್ತದೆ.

ವಯೋಮಿತಿ:

  • ಮುಖ್ಯ ವ್ಯವಸ್ಥಾಪಕರು (ಚೀಫ್ ಮ್ಯಾನೇಜರ್)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.
  • ಹಿರಿಯ ವ್ಯವಸ್ಥಾಪಕರು (ಸೀನಿಯರ್ ಮ್ಯಾನೇಜರ್)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ- 850 ರೂ.
  • ST/SC/PWBD/ಮಹಿಳಾ ಅಭ್ಯರ್ಥಿಗಳಿಗೆ- ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾಗಿರುವ ಅಭ್ಯರ್ಥಿಗಳನ್ನು ಶಾರ್ಟ್ ಲೀಸ್ಟ್​ ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

Also Read: Karnataka Post Office Recruitment 2023: ಕರ್ನಾಟಕ ಅಂಚೆ ಇಲಾಖೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

ಪ್ರಮುಖ ದಿನಾಂಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 11, 2023

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.