CISF Head Constable Recruitment 2022: ಪಿಯುಸಿ ಅಥವಾ 12ನೇ ತರಗತಿ ಪಾಸಾದವರು ಉದ್ಯೋಗ ಹುಡುಕುತ್ತಿದ್ದರೆ, ನಿಮಗೆ ಅರೆಸೈನಿಕ ಪಡೆಯಲ್ಲಿ ಸೇರುವ ಸುರ್ವಣಾವಕಾಶವಿದೆ. ಏಕೆಂದರೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಹೆಡ್ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು CISF ನ ಅಧಿಕೃತ ವೆಬ್‌ಸೈಟ್ cisf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 ಆಗಿದೆ. ಈ ನೇಮಕಾತಿ ಕುರಿತಾದ ಇನ್ನಿತರ ಮಾಹಿತಿಗಳು ಈ ಕೆಳಗಿನಂತಿವೆ.
CISF Head Constable Recruitment 2022: ಹುದ್ದೆಗಳ ವಿವರ:
ಹೆಡ್ ಕಾನ್ಸ್ಟೇಬಲ್ (ಜಿಡಿ) – 249 ಹುದ್ದೆಗಳು
CISF Head Constable Recruitment 2022: ಅರ್ಹತಾ ಮಾನದಂಡಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ/ಮಂಡಳಿಯಿಂದ 12ನೇ ತರಗತಿ ಪಾಸಾಗಿರಬೇಕು. ಹಾಗೆಯೇ ಕ್ರೀಡೆಯಲ್ಲಿ ಅಥವಾ ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಅಥವಾ ರಾಷ್ಟ್ರೀಯ/ಅಂತರರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರಬೇಕು.
CISF Head Constable Recruitment 2022: ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 23 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
CISF Head Constable Recruitment 2022: ಅರ್ಜಿ ಶುಲ್ಕ:
ಅರ್ಜಿದಾರರು 100 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು ಮಹಿಳಾ ಮತ್ತು SC/ST ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.
CISF Head Constable Recruitment 2022: ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 25,500 ರಿಂದ 81,100/ ವರೆಗೆ ವೇತನ ನೀಡಲಾಗುತ್ತದೆ.
CISF Head Constable Recruitment 2022: ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2022
CISF Head Constable Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು https://www.cisf.gov.in/ .
ಈ ಹುದ್ದೆಗಳ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. http://www.davp.nic.in/WriteReadData/ADS/eng_19113_5_2122b.pdf
ಈ ನೇಮಕಾತಿ ಕುರಿತಾದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: India Squad For Sri Lanka: ಭಾರತ ತಂಡದಲ್ಲಿ ಹೊಸಮುಖ: ಯಾರು ಈ ಸೌರಭ್?
(CISF Head Constable Recruitment 2022)