ಕೋಲ್ ಇಂಡಿಯಾ ಲಿಮಿಟೆಡ್ (Coal India Limited) ಸಂಸ್ಥೆ ಚೀಪ್ ಮ್ಯಾನೇಜರ್ (Chief Manager) ಮತ್ತು ಜನರಲ್ ಮ್ಯಾನೇಜರ್ (General Manager) ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಿದೆ. ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ. 14 ಹುದ್ದೆಗಳಿಗೆ ಅಭ್ಯರ್ಥಿಯನ್ನು ಹುಡುಕುತ್ತಿದ್ದು, ಮಾರ್ಚ್ 1, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ನಿರಪೇಕ್ಷಣಾ ಪ್ರಮಾಣಪತ್ರವನ್ನು (No Objection Certificate (NOC) )ಸಲ್ಲಿಸಬೇಕು ಎಂದು ಹೇಳಿದೆ. ಆಯ್ಕೆ ಪ್ರಕ್ರಿಯೆ ಮತ್ತು ಉಳಿದ ಮಾಹಿತಿ ಇಲ್ಲಿದೆ.
ಖಾಲಿ ಇರುವ ಹುದ್ದೆಗಳು:
ಮುಖ್ಯ ವ್ಯವಸ್ಥಾಪಕ -10 ಹುದ್ದೆಗಳು
ಪ್ರಧಾನ ವ್ಯವಸ್ಥಾಪಕ ಹುದ್ದೆಗಳು-4
ಅರ್ಹತೆ:
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಶೈಕ್ಷಣಿಕ ಅರ್ಹತೆ, ವಯಸ್ಸು ಮತ್ತು ಅನುಭವದ ಅರ್ಹತೆ ಬಗ್ಗೆ ತಿಳಿದುಕೊಳ್ಳಬಹುದು ಎಂದು ತಿಳಿಸಿದೆ. ಇಲ್ಲಿದೆ ಲಿಂಕ್ <strong>Detailed Notification available here</strong>
ಆಯ್ಕೆ ಪ್ರಕ್ರಿಯೆ:
ಅರ್ಹತೆಯ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಗುವುದು. ಅರ್ಹತೆಯನ್ನು ಪರಿಗಣಿಸಿ ಸಂದರ್ಶನ ನಡೆಸಿ, ಶಾರ್ಟ್ ಲಿಸ್ಟ್ ಮಾಡಲಾಗುವುದು. ಆಬಳಿಕ ಮತ್ತೊಂದ ಹಂತದ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕಾಗಿ ಶಾರ್ಟ್ ಲಿಸ್ಟ್ ಮಾಡುವುದು ತಾತ್ಕಾಲಿವಾಗಿರುತ್ತದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ತಿಳಿಸಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಹುದ್ದೆಗೆ ಅರ್ಜಿ ಸಲ್ಲಿಸುವವರು, ಮಾಹಿತಿಯನ್ನು ತುಂಬಿದ ಅರ್ಜಿಯನ್ನು ಡಿ. ಜನರಲ್ ಮ್ಯಾನೇಜರ್ (ಪರ್ಸನಲ್/ರೆಕ್ಟ್.) ಕೋಲ್ ಇಂಡಿಯಾ ಲಿಮಿಟೆಡ್, “ಕೋಲ್ ಭವನ್”, ಆವರಣ ಸಂಖ್ಯೆ-04, MAR ಪ್ಲಾಟ್ ನಂ.AF-III, ಆಕ್ಷನ್ ಏರಿಯಾ-1A, ನ್ಯೂ ಟೌನ್, ರಾಜರ್‌ಹತ್, ಕೋಲ್ಕತ್ತಾ-700156 ಕ್ಕೆ ಕಳುಹಿಸಬಹುದು ಅಥವಾ ಕೋಲ್ ಇಂಡಿಯಾ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿಯು ಅರ್ಜಿ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದೊಳಗೆ ಸಲ್ಲಿಸಲು ಕೋರಿದೆ.
ಇದನ್ನೂ ಓದಿ:
SBI Fixed Deposits: ಎಸ್ಬಿಐನಿಂದ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿ ದರ ಹೆಚ್ಚಳ; ಇಲ್ಲಿದೆ ಸಂಪೂರ್ಣ ಮಾಹಿತಿ