ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು(Department of Women and Child Development) ಜಿಲ್ಲಾ ಬಾಲಭವನದಲ್ಲಿ ಮಕ್ಕಳ ಕಾರ್ಯಕ್ರಮಗಳನ್ನ ನಿರ್ವಹಿಸಲು ಒಂದು ಕಚೇರಿ ಸಹಾಯಕರ ಹುದ್ದೆಯನ್ನ(Office Assistant job) ನಿಗದಿತ ಮಾಸಿಕ ಗೌರವಧನದ ಆಧಾರದ ಮೇಲೆ ನೇರ ಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ನೇಮಕ ಮಾಡಲು ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿನವರಾಗಿದ್ದು, ಪದವಿ ವಿದ್ಯಾರ್ಹತೆಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕಂಪ್ಯೂಟರ್ ಜ್ಞಾನ ಹಾಗೂ ಉತ್ತಮ ಸಂವಹನ ಕ್ಷಮತೆ ಹಾಗೂ ಕನಿಷ್ಠ 2 ವರ್ಷ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿ ಗಳಲ್ಲಿ 1:10 ರಂತೆ ಮೆರಿಟ್ ಹಾಗೂ ಸೇವಾ ಹಿರಿತನದ ಆಧಾರವನ್ನ ಗುರುತಿಸಿ ಆಯ್ಕೆ ಸಮಿತಿ ಮೂಲಕ ಸಂದರ್ಶನ ಹಾಗೂ ಕಂಪ್ಯೂಟರ್ ಜ್ಞಾನ ಪರಿಕ್ಷೇ ನಡೆಸಿ ಆಯ್ಕೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 5 ರೊಳಗೆ ನಿಗದಿತ ಅರ್ಜಿ ನಮೂನೆಯನ್ನ ಪಡೆದು ಭರ್ತಿ ಮಾಡಿದ ಅರ್ಜಿಯನ್ನ ಮಾರ್ಚ್ 7 ರೊಳಗೆ ಖುದ್ದು ಅಥವಾ ಅಂಚೆ ಮೂಲಕ ಸಲ್ಲಿಸಬಹುದು ಎಂದು ಇಲಾಖೆಯ ಉಪನಿರ್ದೆಶಕ ಶ್ರೀದರ್ ತಿಳಿಸಿದ್ದಾರೆ.
KVS Recruitment 2022: ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗಾವಕಾಶ
KVS Recruitment 2022: ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಏಕೆಂದರೆ ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ ಪಿಜಿಟಿ, ಟಿಜಿಟಿ, ಪಿಆರ್‌ಟಿ, ಕಂಪ್ಯೂಟರ್ ಬೋಧಕ, ಡಿಇಒ, ಕ್ರೀಡಾ ಶಿಕ್ಷಕ, ಶೈಕ್ಷಣಿಕ ಸಲಹೆಗಾರ, ಕಲೆ ಮತ್ತು ಕರಕುಶಲ ಶಿಕ್ಷಕ, ಸಂಗೀತ ಶಿಕ್ಷಕ, ನೃತ್ಯ ಶಿಕ್ಷಕ, ನರ್ಸ್, ಯೋಗ ಶಿಕ್ಷಕರಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೇಂದ್ರೀಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ rkpuramsec2.kvs.ac.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
KVS Recruitment 2022 ಹುದ್ದೆಗಳ ವಿವರಗಳು:
PGT, TGT, PRT, ಕಂಪ್ಯೂಟರ್ ಬೋಧಕ, DEO, ಕ್ರೀಡಾ ಶಿಕ್ಷಕ, ಶೈಕ್ಷಣಿಕ ಸಲಹೆಗಾರ, ಕಲೆ ಮತ್ತು ಕರಕುಶಲ ಶಿಕ್ಷಕ, ಸಂಗೀತ ಶಿಕ್ಷಕ, ನೃತ್ಯ ಶಿಕ್ಷಕ, ಯೋಗ ಶಿಕ್ಷಕ ಮತ್ತು ನರ್ಸ್
KVS Recruitment 2022ರ ಅರ್ಹತಾ ಮಾನದಂಡಗಳು:
ಪ್ರಾಥಮಿಕ ಶಿಕ್ಷಕರು – ಅಭ್ಯರ್ಥಿಗಳು 50% ಅಂಕಗಳೊಂದಿಗೆ ಕನಿಷ್ಠ ಹಿರಿಯ ಮಾಧ್ಯಮಿಕ ಶಾಲಾ ಪ್ರಮಾಣಪತ್ರವನ್ನು ಹೊಂದಿರಬೇಕು ಅಲ್ಲದೆ DIET/JBT/B.Ed. ಮಾಡಿರಬೇಕು.
PGT – ಸಂಬಂಧಪಟ್ಟ ವಿಷಯದಲ್ಲಿ NCERT ಯ ಪ್ರಾದೇಶಿಕ ಶಿಕ್ಷಣ ಕಾಲೇಜ್‌ನಿಂದ ಎರಡು ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ MSc ಕೋರ್ಸ್ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯಗಳಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
TGT – ಸಂಬಂಧಪಟ್ಟ ವಿಷಯದಲ್ಲಿ NCERT ಯ ಪ್ರಾದೇಶಿಕ ಶಿಕ್ಷಣ ಕಾಲೇಜ್‌ನಿಂದ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಕೋರ್ಸ್ ಅಥವಾ ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು.
KVS Recruitment 2022 ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ನೇರ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
KVS Recruitment 2022 ಗಾಗಿ ಪ್ರಮುಖ ದಿನಾಂಕಗಳು:
PGT, TGT, DEO ಮತ್ತು ಕಂಪ್ಯೂಟರ್ ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24 ಫೆಬ್ರವರಿ 2022.
PRT ಹುದ್ದೆಗಳಿಗೆ – 25 ಫೆಬ್ರವರಿ 2022
ಇತರೆ ಹುದ್ದೆಗಳಿಗೆ – 26 ಫೆಬ್ರವರಿ 2022.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿ ಹಾಗೂ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: DRDO Recruitment 2022: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ
Published On - 9:07 am, Fri, 18 February 22