ತಾಂತ್ರಿಕ ಶಿಕ್ಷಣ ಇಲಾಖೆಯ 372 ಬೋಧಕರ ವರ್ಗಾವಣೆ, ಸ್ಥಳ ನಿಯೋಜನೆ; ವಿವರ ಪ್ರಕಟ

| Updated By: ganapathi bhat

Updated on: Jul 31, 2021 | 10:40 PM

ಸರ್ಕಾರಿ ಪಾಲಿಟೆಕ್ನಿಕ್​ಗಳ 307 ಬೋಧಕರು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಐವರು ಬೋಧಕರು, ಇಂಜಿನಿಯರಿಂಗ್​ ಕಾಲೇಜುಗಳ 60 ಬೋಧಕರು ಹಾಜರಿದ್ದರು. ಕೌನ್ಸೆಲಿಂಗ್​ಗೆ ಹಾಜರಾಗಿದ್ದ ಎಲ್ಲ ಬೋಧಕರಿಂದ ಸ್ಥಳ ಆಯ್ಕೆ ಮಾಡಲಾಗಿದೆ. ಸ್ವತಃ ಸ್ಥಳ ಆಯ್ಕೆ ಮಾಡಿಕೊಂಡು ವರ್ಗಾವಣೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಂತ್ರಿಕ ಶಿಕ್ಷಣ ಇಲಾಖೆಯ 372 ಬೋಧಕರ ವರ್ಗಾವಣೆ, ಸ್ಥಳ ನಿಯೋಜನೆ; ವಿವರ ಪ್ರಕಟ
ಸಾಂದರ್ಭೀಕ ಚಿತ್ರ
Follow us on

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ 372 ಬೋಧಕರ ವರ್ಗಾವಣೆ ಮಾಡಿ, 372 ಬೋಧಕರಿಗೆ ಸ್ಥಳ ನಿಯೋಜಿಸಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್​ ಆದೇಶ ಹೊರಡಿಸಿದ್ದಾರೆ. ಕೌನ್ಸೆಲಿಂಗ್​ ಮೂಲಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಅತ್ಯುತ್ತಮ ತಾಂತ್ರಿಕ ವ್ಯವಸ್ಥೆ ಬಳಸಿ ಕೌನ್ಸೆಲಿಂಗ್ ನಡೆಸಲಾಗಿದೆ. ಜನಸ್ನೇಹಿ, ಪಾರದರ್ಶಕವಾಗಿ ಬೋಧಕರ ವರ್ಗಾವಣೆ ನಡೆದಿದೆ ಎಂದು ವರ್ಗಾವಣೆ ಪ್ರಕ್ರಿಯೆ ಬಗ್ಗೆ ಅವರು ತಿಳಿಸಿದ್ದಾರೆ.

ಜುಲೈ 27 ರಿಂದ 30ರ ವರೆಗೆ ವರ್ಗಾವಣೆಗೆ ಕೌನ್ಸೆಲಿಂಗ್ ನಡೆದಿದೆ. ಕೌನ್ಸೆಲಿಂಗ್ ಪೂರ್ವದಲ್ಲಿ ಶೇಕಡಾ 6 ರಷ್ಟು ಬೋಧಕರ ಪಟ್ಟಿ ಪ್ರಕಟವಾಗಿದೆ. ವರ್ಗಾವಣೆಗೆ ಅರ್ಹರಿದ್ದ ಬೋಧಕರ ಪಟ್ಟಿ ಪ್ರಕಟಿಸಲಾಗಿತ್ತು. ಕೋರಿಕೆ ವರ್ಗಾವಣೆ ಕೇಳಿದ್ದ ಪತಿ-ಪತ್ನಿ ಪ್ರಕರಣ ಶೇಕಡಾ 3ರಷ್ಟಿತ್ತು. ವಿಧವೆ ಅಥವಾ ಏಕ ಪೋಷಕರ ಪ್ರಕರಣಗಳು ಶೇಕಡಾ 1ರಷ್ಟಿತ್ತು. ಶೇಕಡಾ 1ರಷ್ಟು ವಿಕಲಚೇತನ ಬೋಧಕರ ವರ್ಗಾವಣೆ ಪಟ್ಟಿ ಇತ್ತು. ಆರೋಗ್ಯ, ಗಂಭೀರ ಪ್ರಕರಣಗಳು ಸೇರಿ ಶೇಕಡಾ 1ರಷ್ಟಿತ್ತು. ಎಲ್ಲಾ ವಲಯಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆ ಪಟ್ಟಿ ಪ್ರಕಟವಾಗಿದೆ ಎಂದು ಪ್ರದೀಪ್ ಮಾಹಿತಿ ನೀಡಿದ್ದಾರೆ.

ಖಾಲಿ ಹುದ್ದೆಗಳ ಪಟ್ಟಿ ಪ್ರಕಟಿಸಿ ಕೌನ್ಸೆಲಿಂಗ್​ ನಡೆಸಲಾಗಿತ್ತು. ಸರ್ಕಾರಿ ಪಾಲಿಟೆಕ್ನಿಕ್​ಗಳ 307 ಬೋಧಕರು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳ ಐವರು ಬೋಧಕರು, ಇಂಜಿನಿಯರಿಂಗ್​ ಕಾಲೇಜುಗಳ 60 ಬೋಧಕರು ಹಾಜರಿದ್ದರು. ಕೌನ್ಸೆಲಿಂಗ್​ಗೆ ಹಾಜರಾಗಿದ್ದ ಎಲ್ಲ ಬೋಧಕರಿಂದ ಸ್ಥಳ ಆಯ್ಕೆ ಮಾಡಲಾಗಿದೆ. ಸ್ವತಃ ಸ್ಥಳ ಆಯ್ಕೆ ಮಾಡಿಕೊಂಡು ವರ್ಗಾವಣೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿದ್ದವರ ನೇಮಕಾತಿ ರದ್ದು ಮಾಡಲಾಗಿದೆ. 317 ಬೋಧಕರ ನಿಯೋಜನೆ ಆದೇಶವನ್ನು ಇಲಾಖೆ ಹಿಂಪಡೆದಿದೆ. ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು, ಇಂಜಿನಿಯರಿಂಗ್​ ಕಾಲೇಜುಗಳಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ ನಿಯೋಜನೆ ಆದೇಶ ಹಿಂಪಡೆಯಲಾಗಿದೆ. ಈ ಬಗ್ಗೆ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಕೇಂದ್ರ ಸರ್ಕಾರದ ಎಎಸ್​ಜಿಯಾಗಿ ಹೆಚ್. ಶಾಂತಿಭೂಷಣ್ ನೇಮಕ
ಕೇಂದ್ರ ಸರ್ಕಾರದ ಎಎಸ್​ಜಿಯಾಗಿ ಹೆಚ್. ಶಾಂತಿಭೂಷಣ್ ನೇಮಕವಾಗಿದ್ದಾರೆ. ಕಾನೂನು ಮತ್ತು ನ್ಯಾಯ ಇಲಾಖೆಯಿಂದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್​ನಲ್ಲಿ ಕೇಂದ್ರ ಸರ್ಕಾರದ ಪರ ವಾದಿಸಲು ಹೆಚ್. ಶಾಂತಿಭೂಷಣ್ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಯಾವುದೇ ಸೇವೆ, ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡದಂತೆ ಕರ್ನಾಟಕ ಸರ್ಕಾರ ಅಧಿಸೂಚನೆ

ರೌಡಿ ಹಾವಳಿ ಹತ್ತಿಕ್ಕಲು ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಚರಿಸಲಿವೆ ಚೀತಾ, ಹೊಯ್ಸಳ; 999 ಹೆಡ್​ಕಾನ್​ಸ್ಟೆಬಲ್ಸ್​​ ವರ್ಗಾವಣೆ