ಅಮೆಜಾನ್​, ಗೂಗಲ್​ ಆಫರ್​ಗಳನ್ನೆಲ್ಲಾ ಬಿಟ್ಟು ಫೇಸ್​ಬುಕ್​ ಸೇರಿದ ಯುವಕ; ಮಾಸಿಕ ವೇತನ ಎಷ್ಟು ಗೊತ್ತಾ?

ಜಾದವ್‌ಪುರ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿರುವ ಬಿಸಾಖ್ ಮೊಂಡಲ್ ಅವರು ಈ ವರ್ಷ 1.8 ಕೋಟಿ ರೂ. ಪ್ಯಾಕೇಜ್ ಹೊಂದಿರುವ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ಅಮೆಜಾನ್​, ಗೂಗಲ್​ ಆಫರ್​ಗಳನ್ನೆಲ್ಲಾ ಬಿಟ್ಟು ಫೇಸ್​ಬುಕ್​ ಸೇರಿದ ಯುವಕ; ಮಾಸಿಕ ವೇತನ ಎಷ್ಟು ಗೊತ್ತಾ?
ಬಿಸಾಖ್ ಮೊಂಡಲ್
TV9kannada Web Team

| Edited By: Rakesh Nayak

Jun 28, 2022 | 11:02 AM

ಕೋಲ್ಕತ್ತಾ: ವಿದ್ಯಾರ್ಥಿಯೋರ್ವ 1.8 ಕೋಟಿ ರೂಪಾಯಿ ವೇತನ ಪ್ಯಾಕೇಜ್ ಹೊಂದಿರುವ ಉದ್ಯೋಗವನ್ನು ಗಿಟ್ಟಿಸಿಕೊಂಡಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಜಾದವ್‌ಪುರ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿರುವ ಬಿಸಾಖ್ ಮೊಂಡಲ್ ಅವರು ಈ ವರ್ಷ 1.8 ಕೋಟಿ ರೂ. ಪ್ಯಾಕೇಜ್ ಹೊಂದಿರುವ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ಫೇಸ್‌ಬುಕ್ ಲಂಡನ್​ನಲ್ಲಿ ಕೆಲಸವನ್ನು ಪಡೆದುಕೊಂಡ ಮೊಂಡಲ್, ಸೆಪ್ಟೆಂಬರ್‌ ತಿಂಗಳಲ್ಲಿ ವಿದೇಶಕ್ಕೆ ತೆರಳಲಿ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ. ಬಿಸಾಖ್ ಮೊಂಡಲ್ ಅವರು ಗೂಗಲ್ ಮತ್ತು ಅಮೆಜಾನ್‌ನಿಂದ ಉದ್ಯೋಗದ ಆಫರ್​ಗಳನ್ನು ಪಡೆದರೂ ಫೇಸ್​ಬುಕ್​ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಮೊಂಡಲ್, “ಮಂಗಳವಾರ ಮಧ್ಯರಾತ್ರಿ ನನಗೆ ಕೆಲಸದ ಪ್ರಸ್ತಾಪ ಸಿಕ್ಕಿತು” ಎಂದಿದ್ದಾರೆ. ಅದಾಗ್ಯೂ ಕಂಪನಿಯೊಂದಿಗೆ ಮಾತುಕತೆ ನಡೆಯುತ್ತಿರುವ ಹಿನ್ನೆಲೆ ಮುಂದಿನ ವಾರದ ವೇಳೆಗೆ ಸಂಬಳ ಹೆಚ್ಚಾಗುವ ನಿರೀಕ್ಷೆಯನ್ನು ಮೊಂಡಲ್ ಹೊಂದಿದ್ದಾರೆ.

ಇದನ್ನೂ ಓದಿ: Agniveer Recruitment 2022: ಅಗ್ನಿವೀರರಾಗಲು ಇಂದೇ ಹೆಸರು ನೋಂದಾಯಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ತನ್ನ ಸಂದರ್ಶನಗಳಕ್ಕೆ ತಯಾರಿ ನಡೆಸಿದ್ದ ಬಗ್ಗೆ ಮಾಹಿತಿ ಹಂಚಿಕೊಂಡ ಮೊಂಡಲ್, “ಸಾಂಕ್ರಾಮಿಕ ರೋಗದ ಎರಡು ವರ್ಷಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಿದ್ದೆ. ಇಲ್ಲಿ ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನನ್ನ ಪಠ್ಯಕ್ರಮದ ಅಧ್ಯಯನದ ಹೊರಗೆ ಜ್ಞಾನವನ್ನು ಸಂಗ್ರಹಿಸಲು ಸಾಕಷ್ಟು ಅವಕಾಶಗಳನ್ನು ನೀಡಿತು. ಇದು ನನಗೆ ಸಂದರ್ಶನಗಳನ್ನು ಭೇದಿಸಲು ಸಹಾಯ ಮಾಡಿತು” ಎಂದು ಹೇಳಿಕೊಂಡಿದ್ದಾರೆ.

ಜೆಯುನಲ್ಲಿ ಪ್ಲೇಸ್‌ಮೆಂಟ್ ಅಧಿಕಾರಿ ಸಮಿತಾ ಭಟ್ಟಾಚಾರ್ಯ ಪ್ರತಿಕ್ರಿಯಿಸಿ, “ಸಾಂಕ್ರಾಮಿಕ ರೋಗದ ನಂತರ ವಿದ್ಯಾರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದೇಶದಲ್ಲಿ ಉದ್ಯೋಗ ಪಡೆದಿರುವುದು ಇದೇ ಮೊದಲು” ಎಂದಿದ್ದಾರೆ. ಇವರು ಹೀಗೆ ಹೇಳಲು ಒಂದು ಕಾರಣ ಇದೆ. ಅದೇನೆಂದರೆ, ಈ ಹಿಂದೆ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಒಂಬತ್ತು ಜೆಯು ವಿದ್ಯಾರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ವೇತನ ಪ್ಯಾಕೇಜ್‌ಗಳೊಂದಿಗೆ ಸಾಗರೋತ್ತರ ಉದ್ಯೋಗಗಳನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ: BRO Recruitment 2022: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನೇಮಕಾತಿ: ವೇತನ 56 ಸಾವಿರ ರೂ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada