AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ED Officer: ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರುವುದು ಹೇಗೆ? ಸಂಬಳ, ಸವಲತ್ತು ಹೇಗೆ?

Enforcement Directorate Officer: ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದಲ್ಲಿ ಇ.ಡಿ. ಅಧಿಕಾರಿಯಾಗುವುದು ಹೇಗೆ? ಸಹಾಯಕ ಜಾರಿ ಅಧಿಕಾರಿಯಾಗುವುದು ಹೇಗೆ? ಎಂಬುದನ್ನು ತಿಳಿಯಿರಿ. ಮಾಸಿಕ ಸಂಬಳ, ಸವಲತ್ತುಗಳು, ಕೆಲಸದ ಜವಾಬ್ದಾರಿಗಳನ್ನು ಪರಿಶೀಲಿಸಿ. ಪೋಸ್ಟಿಂಗ್, ವೇತನ ಶ್ರೇಣಿ ಅಲ್ಲದೆ, ಸ್ಟಾಫ್​ ಸೆಲೆಕ್ಷನ್ ಕಮೀಷನ್​​​ ಮೂಲಕ AEO ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ, ತಿಳಿಯಿರಿ.

ED Officer: ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರುವುದು ಹೇಗೆ? ಸಂಬಳ, ಸವಲತ್ತು ಹೇಗೆ?
ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರುವುದು ಹೇಗೆ? ಸಂಬಳ, ಸವಲತ್ತುಗಳು ಹೇಗೆ? ಲೇಖನ ಓದಿ
TV9 Web
| Updated By: Digi Tech Desk|

Updated on: Oct 17, 2022 | 1:23 PM

Share

ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದಲ್ಲಿ ( Enforcement Directorate) ಇ.ಡಿ. ಅಧಿಕಾರಿಯಾಗುವುದು ಹೇಗೆ? ಸಹಾಯಕ ಜಾರಿ ಅಧಿಕಾರಿಯಾಗುವುದು (Assistant Enforcement Officer -ED Officer) ಹೇಗೆ? ಎಂಬುದನ್ನು ತಿಳಿಯಿರಿ. ಮಾಸಿಕ ಸಂಬಳ, ಸವಲತ್ತುಗಳು, ಕೆಲಸದ ಜವಾಬ್ದಾರಿಗಳನ್ನು ಪರಿಶೀಲಿಸಿ. ಪೋಸ್ಟಿಂಗ್, ವೇತನ ಶ್ರೇಣಿ ಅಲ್ಲದೆ, ಸ್ಟಾಫ್​ ಸೆಲೆಕ್ಷನ್ ಕಮೀಷನ್​​​ (Staff Selection Commission- SSC) ಮೂಲಕ AEO ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ, ತಿಳಿಯಿರಿ. ಜಾರಿ ನಿರ್ದೇಶನಾಲಯವು ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯ ಮೂಲಕ ಪ್ರತಿ ವರ್ಷ ಅಸಿಸ್ಟೆಂಟ್ ಎನ್‌ಫೋರ್ಸ್‌ಮೆಂಟ್ ಆಫೀಸರ್ ಹುದ್ದೆಗಾಗಿ ನೇಮಕಾತಿ ನಡೆಸುತ್ತದೆ.

ಸಹಾಯಕ ಜಾರಿ ಅಧಿಕಾರಿಯಾಗಿ ಕೆಲಸ ಮಾಡುವುದು ಪ್ರತಿಷ್ಠಿತ ಮತ್ತು ಸುರಕ್ಷಿತ ವೃತ್ತಿಜೀವನ ಮಾತ್ರವಲ್ಲದೆ ಆಕರ್ಷಕ ಸಂಬಳದ ಪ್ಯಾಕೇಜ್ ಅನ್ನು ಸಹ ನೀಡುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಇದು ಅತ್ಯುತ್ತಮ ಉದ್ಯೋಗಾವಕಾಶಗಳಲ್ಲಿ ಒಂದಾಗಿದೆ.

ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯ ಮೂಲಕ ಸಹಾಯಕ ಜಾರಿ ಅಧಿಕಾರಿ ನೇಮಕ:

SSC ಆಯೋಗವು ಆಯ್ಕೆ ಪ್ರಕ್ರಿಯೆಯನ್ನು ಪರಿಷ್ಕರಿಸಿದ್ದು, ಈಗ ಎರಡು ಹಂತಗಳಲ್ಲಿ ಆಯ್ಕೆ ನಡೆಸಲಾಗುವುದು. ಶ್ರೇಣಿ 1 ಮತ್ತು 2. ಅಂತಿಮ ಆಯ್ಕೆಯು ಹೆಚ್ಚಿನ ಅಂಕಗಳು ಮತ್ತು ಉತ್ತಮ ಶ್ರೇಣಿಯೊಂದಿಗೆ ಪ್ರವೇಶ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಸಹಾಯಕ ಜಾರಿ ಅಧಿಕಾರಿಯ ವೇತನ ಶ್ರೇಣಿ-7 (ರೂ. 44,900 ರಿಂದ 1,42,400) ನಲ್ಲಿ ವೇತನ ಪಡೆಯುತ್ತಾರೆ.

ಆಯ್ಕೆಯ ನಂತರ, ಅಸಿಸ್ಟೆಂಟ್ ಎನ್‌ಫೋರ್ಸ್‌ಮೆಂಟ್ ಆಫೀಸರ್ ಹುದ್ದೆಯಲ್ಲಿ ಜಾರಿ ನಿರ್ದೇಶನಾಲಯ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಛೇರಿ, ವಲಯ ಕಚೇರಿ ಅಥವಾ ಉಪವಿಭಾಗದ ಕಚೇರಿಯಲ್ಲಿ ಪೋಸ್ಟ್ ಮಾಡಲಾಗುತ್ತದೆ. AEO ಹುದ್ದೆ ಭಾರತ ಸರ್ಕಾರದ ಅಡಿಯಲ್ಲಿ ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿ ಸ್ಥಾನಮಾನ ಹೊಂದಿದೆ. ಸಹಾಯಕ ಜಾರಿ ಅಧಿಕಾರಿಯು ಮೂಲ ವೇತನದ ಜೊತೆಗೆ ಬಹಳಷ್ಟು ಸವಲತ್ತುಗಳು ಮತ್ತು ಭತ್ಯೆಗಳನ್ನು ಪಡೆಯುತ್ತಾರೆ.

ಜಾರಿ ನಿರ್ದೇಶನಾಲಯ (ED) ಕಾನೂನು ಜಾರಿ ಸಂಸ್ಥೆ ಮತ್ತು ಆರ್ಥಿಕ ಗುಪ್ತಚರ ಸಂಸ್ಥೆಯಾಗಿದ್ದು, ಭಾರತದಲ್ಲಿ ಆರ್ಥಿಕ ಕಾನೂನುಗಳನ್ನು ಜಾರಿಗೊಳಿಸಲು ಮತ್ತು ಆರ್ಥಿಕ ಅಪರಾಧದ (economic crime) ವಿರುದ್ಧ ಹೋರಾಡಲು ಕಾರಣವಾಗಿದೆ. ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಭಾಗವಾಗಿದೆ. ಇದು UPSC ಯಿಂದ ನೇಮಕವಾಗುವ ಭಾರತೀಯ ಕಂದಾಯ ಸೇವೆ (IRS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿಗಳು ಮತ್ತು ತನ್ನದೇ ಆದ ಕೇಡರ್‌ನಿಂದ ಅಧಿಕಾರಿಗಳಿಗೆ ಬಡ್ತಿ ನೀಡಿ ನೇಮಕಮಾಡಿಕೊಳ್ಳುತ್ತದೆ.

ಜಾರಿ ನಿರ್ದೇಶನಾಲಯವು 1956 ರ ಮೇ ಒಂದರಂದು ಆರಂಭ ಪಡೆಯಿತು. 1957 ರಲ್ಲಿ ಘಟಕವನ್ನು ‘ಜಾರಿ ನಿರ್ದೇಶನಾಲಯ’ ಎಂದು ಮರುನಾಮಕರಣ ಮಾಡಲಾಯಿತು. ಜಾರಿ ನಿರ್ದೇಶನಾಲಯವು ನವದೆಹಲಿಯಲ್ಲಿ ಪ್ರಧಾನ ಕಛೇರಿ ಹೊಂದಿದೆ. ಜಾರಿ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ಐದು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಮುಂಬೈ, ಚೆನ್ನೈ, ಚಂಡೀಗಢ, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಕಾರ್ಯಗತವಾಗಿದೆ.

ಇನ್ನು, ಜಾರಿ ನಿರ್ದೇಶನಾಲಯದ ವಲಯ ಕಚೇರಿಗಳು ಪುಣೆ, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಚ್ಚಿ, ದೆಹಲಿ, ಪಣಜಿ, ಗುವಾಹಟಿ, ಹೈದರಾಬಾದ್, ಜೈಪುರ, ಜಲಂಧರ್‌ನಲ್ಲಿವೆ. ಕೋಲ್ಕತ್ತಾ, ಲಕ್ನೋ, ಮುಂಬೈ, ಪಾಟ್ನಾ ಮತ್ತು ಶ್ರೀನಗರ ಕಚೇರಿಗಳ ನೇತೃತ್ವವನ್ನು ಜಂಟಿ ನಿರ್ದೇಶಕರು ವಹಿಸುತ್ತಾರೆ.

ನಿರ್ದೇಶನಾಲಯವು ಉಪ-ವಲಯ ಕಚೇರಿಗಳನ್ನು ಮಂಗಳೂರು, ಭುವನೇಶ್ವರ, ಕೋಯಿಕ್ಕೋಡ್‌, ಇಂದೋರ್, ಮಧುರೈ, ನಾಗ್ಪುರ, ಅಲಹಾಬಾದ್, ರಾಯಪುರ, ಡೆಹ್ರಾಡೂನ್, ರಾಂಚಿ, ಸೂರತ್, ಶಿಮ್ಲಾ, ವಿಶಾಖಪಟ್ಟಣಂ ಮತ್ತು ಜಮ್ಮು ನಗರಗಳಲ್ಲಿ ಉಪ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ.

ಸಹಾಯಕ ಜಾರಿ ಅಧಿಕಾರಿ ಉದ್ಯೋಗದ ಪರಿಚಯ:

ಜಾರಿ ನಿರ್ದೇಶನಾಲಯ ಮತ್ತು ಕಂದಾಯ ಇಲಾಖೆಗೆ ಸಹಾಯಕ ಜಾರಿ ಅಧಿಕಾರಿಯಾಗಿ ಸೇರಿದ ನಂತರ ನಿರ್ದಿಷ್ಟ ಅವಧಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ, ಅಭ್ಯರ್ಥಿಯು AEO ಆಗಿ ಕೆಲಸ ಮಾಡುವಾಗ ಅನುಸರಿಸಬೇಕಾದ ರೀತಿ ನೀತಿಗಳು ಮತ್ತು ಕೆಲಸದ ರಿವಾಜುಗಳನ್ನು ಕಲಿಸಲಾಗುತ್ತದೆ. ಉದ್ಯೋಗ ಪ್ರೊಫೈಲ್ ಕೆಳಗಿನಂತೆ ಇರುತ್ತದೆ:

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ)ಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನು ಸಹಾಯಕ ಜಾರಿ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು. ಈ ಎರಡು ಕಾನೂನುಗಳನ್ನು ಉಲ್ಲಂಘಿಸುವ ಯಾರಾದರೂ ತನಿಖೆ/ಶಿಕ್ಷೆಗೆ ಗುರಿಯಾಗುತ್ತಾರೆ.

ಯಾವುದೇ ದುಷ್ಕೃತ್ಯದ ಸಂದರ್ಭದಲ್ಲಿ ಅಧಿಕಾರಿಯು ಶಂಕಿತ ವ್ಯಕ್ತಿಗಳು, ವಾಹನಗಳು ಮತ್ತು ಆವರಣಗಳನ್ನು ಶೋಧಿಸಬಹುದು.

ಸಹಾಯಕ ಜಾರಿ ಅಧಿಕಾರಿಗಳು ಬ್ಯಾಂಕ್‌ಗಳು ಅಥವಾ ಇತರ ಹಣಕಾಸು ಸಂಸ್ಥೆಗಳ ಮೇಲೆಯೂ ದಾಳಿ ನಡೆಸಬಹುದು. ಅವರು ಅಕ್ರಮ ಕರೆನ್ಸಿ ಅಥವಾ ನಿಗದಿತ ಮಿತಿಗಿಂತ ಹೆಚ್ಚಾಗಿ ಹಣವನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ.

ಸಹಾಯಕ ಜಾರಿ ಅಧಿಕಾರಿಯು ಅವರ ಮೇಲಿನ ಹಿರಿಯ ಅಧಿಕಾರಿ ಕೈಕೆಳಗೆ ಕೆಲಸ ಮಾಡುತ್ತಾರೆ. ಶೋಧ ಕಾರ್ಯಾಚರಣೆಗಳಲ್ಲಿಯೂ ಭಾಗವಹಿಸುತ್ತಾರೆ. ಆ ವೇಳೆ ವಶಪಡಿಸಿಕೊಳ್ಳುವ ಮೆಮೊಗಳು, ರೆಕಾರ್ಡಿಂಗ್ ಹೇಳಿಕೆಗಳು ಮತ್ತು ದೂರುಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. FEMA ಅಡಿ ತೀರ್ಪಿನ ಆದೇಶಗಳ ಕರಡು ಸಿದ್ಧಪಡಿಸಲು ಮತ್ತು ತಾತ್ಕಾಲಿಕ ಆದೇಶಗಳು, ಮೂಲ ದೂರುಗಳು ಮತ್ತು ಪ್ರಾಸಿಕ್ಯೂಷನ್ ದೂರುಗಳ ಕರಡು ಮಾಡಲು ಸಹ ಅವರಿಗೆ ವಹಿಸಲಾಗುತ್ತದೆ.

ಸಹಾಯಕ ಜಾರಿ ಅಧಿಕಾರಿಗೆ ಬಡ್ತಿ ನೀತಿ:

ಸಹಾಯಕ ಜಾರಿ ಅಧಿಕಾರಿ ಸಾಮಾನ್ಯವಾಗಿ ಬಿ ಗುಂಪಿನ ಅಡಿಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿರುತ್ತಾರೆ. ಅಧಿಕಾರಿಯನ್ನು ಜಾರಿ ನಿರ್ದೇಶನಾಲಯದ ಅಡಿಯಲ್ಲಿ ನೇಮಕ ಮಾಡಲಾಗುತ್ತದೆ. ಮೂರು ವರ್ಷಗಳ ಆರಂಭಿಕ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಯು ಬಡ್ತಿಗೆ ಅರ್ಹರಾಗುತ್ತಾರೆ. ಸಹಾಯಕ ಜಾರಿ ಅಧಿಕಾರಿ (AEO) ಗೆ ಬಡ್ತಿಯು ಇಲಾಖಾ ಪರೀಕ್ಷೆ ಮತ್ತು ಹಿರಿತನಕ್ಕೆ ಒಳಪಟ್ಟಿರುತ್ತದೆ ಎಂದು jagranjosh.com ವರದಿ ಮಾಡಿದೆ.

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್