IAF AFCAT Recruitment 2022: ಭಾರತೀಯ ವಾಯುಪಡೆ ನೇಮಕಾತಿ: ಶೀಘ್ರದಲ್ಲೇ ಅರ್ಜಿ ಸಲ್ಲಿಸಿ
IAF AFCAT Recruitment 2022: ಅರ್ಜಿ ಸಲ್ಲಿಸದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು afcat.cdac.in ನಲ್ಲಿ IAF ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
IAF AFCAT Recruitment 2022: ಭಾರತೀಯ ವಾಯುಪಡೆಯಲ್ಲಿನ (IAF) ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ನಾನ್-) ಮತ್ತು ಶಿಕ್ಷಣ ಶಾಖೆಯಲ್ಲಿನ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ 4 ದಿನಗಳು ಮಾತ್ರ ಉಳಿದಿದ್ದು, ಹೀಗಾಗಿ ಶೀಘ್ರದಲ್ಲೇ ಅಪ್ಲಿಕೇಶನ್ ಸಲ್ಲಿಸುವುದು ಉತ್ತಮ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು afcat.cdac.in ನಲ್ಲಿ IAF ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 258
ಅರ್ಹತಾ ಮಾನದಂಡಗಳು:
ಫ್ಲೈಯಿಂಗ್ ಬ್ರಾಂಚ್ ಹುದ್ದೆಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗಣಿತ ಮತ್ತು ಭೌತಶಾಸ್ತ್ರದಲ್ಲಿ ತಲಾ 50% ಅಂಕಗಳೊಂದಿಗೆ 12ನೇ ತರಗತಿ ಮತ್ತು ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅಥವಾ ಕನಿಷ್ಠ 60% ಅಂಕಗಳೊಂದಿಗೆ BE/B ಟೆಕ್ ಪದವಿ ಅಥವಾ ಕನಿಷ್ಠ 60 ರೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಇಂಜಿನಿಯರ್ಸ್ ಸಂಸ್ಥೆ (ಭಾರತ) ಅಥವಾ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯತ್ವದ ವಿಭಾಗ A & B ಪರೀಕ್ಷೆಯನ್ನು ಉತ್ತೀರ್ಣರಾಗಿರಬೇಕು. ಇನ್ನುಳಿದ ಹುದ್ದೆಗಳ ವಿದ್ಯಾರ್ಹತೆಯನ್ನು ಪರಿಶೀಲಿಸಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
ವಯೋಮಿತಿ:
- ಫ್ಲೈಯಿಂಗ್ ಬ್ರಾಂಚ್ – 20 ರಿಂದ 24 ವರ್ಷಗಳು
- ಗ್ರೌಂಡ್ ಡ್ಯೂಟಿ (ತಾಂತ್ರಿಕ/ತಾಂತ್ರಿಕೇತರ) – 20 ರಿಂದ 26 ವರ್ಷಗಳು
ಅರ್ಜಿ ಶುಲ್ಕ:
- AFCAT- ರೂ.250/-
- NCC- ಯಾವುದೇ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳ ಆಯ್ಕೆಯಲ್ಲಿ ಲಿಖಿತ ಪರೀಕ್ಷೆಯನ್ನು ಒಳಗೊಂಡಂತೆ ಮೂರು ಸುತ್ತುಗಳಿರುತ್ತವೆ. ನಂತರ ರೇಟಿಂಗ್ ಪರೀಕ್ಷೆ ಮತ್ತು ಚಿತ್ರ ಗ್ರಹಿಕೆ ಮತ್ತು ಚರ್ಚಾ ಪರೀಕ್ಷೆ, ಮಾನಸಿಕ ಪರೀಕ್ಷೆ ಮತ್ತು ಸಂದರ್ಶನ ಇರಲಿದೆ.
ಇದನ್ನೂ ಓದಿ: ISRO Recruitment 2022: ಇಸ್ರೋ ನೇಮಕಾತಿ: ಪದವೀಧರರು ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 30, 2022
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.