IAF Group C Recruitment 2022: ಭಾರತೀಯ ವಾಯುಪಡೆಯು ಗ್ರೂಪ್ C ವರ್ಗದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಕುಕ್, ಏರ್‌ಕ್ರಾಫ್ಟ್ ಮೆಕ್ಯಾನಿಕ್, ಮೆಸ್ ಸ್ಟಾಫ್, ಕಾರ್ಪೆಂಟರ್, ಸ್ಟೆನೋ, ಗ್ರೇಡ್-2, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೋರ್ ಕೀಪರ್, ಎಲ್‌ಡಿಸಿ, ಸಿಎಮ್‌ಟಿಡಿ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಶೈಕ್ಷಣಿಕ ಅರ್ಹತೆ:
ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆಯ ನಂತರ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಪ್ರಶ್ನೆಗಳು ಇರಲಿದೆ.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಅರ್ಜಿಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಭರ್ತಿ ಮಾಡಬೇಕು. ಇದರೊಂದಿಗೆ ಇತ್ತೀಚಿನ ಸ್ವಯಂ ದೃಢೀಕರಿಸಿದ ಪಾಸ್‌ಪೋರ್ಟ್ ಫೋಟೋ ಜೊತೆಗೆ, ಅರ್ಜಿಯೊಂದಿಗೆ ವಿನಂತಿಸಿದ ದಾಖಲೆಗಳ ಸ್ವಯಂ ದೃಢೀಕರಿಸಿದ ಫೋಟೊಕಾಪಿಗಳನ್ನು ಸಹ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ನೇಮಕಾತಿ ಜಾಹೀರಾತು ಪ್ರಕಟವಾದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಅರ್ಜಿ ಕಳುಹಿಸಬೇಕಾದ ವಿಳಾಸ?
ಆಯಾ ಕೆಲಸಕ್ಕೆ ಆಯಾ ಕಮಾಂಡಿಂಗ್ ವಿಭಾಗದಲ್ಲಿ ನೇಮಕಾತಿ ನಡೆಯಲಿದೆ. ಅರ್ಜಿದಾರನು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೊ, ಅದೇ ಹುದ್ದೆಯ ನೇಮಕಾತಿ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು. ಅರ್ಜಿ ಕಳುಹಿಸಬೇಕಾದ ಎಲ್ಲಾ ವಿಳಾಸಗಳು ಇಲ್ಲಿದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.