IFFCO Trainee Recruitment 2022 : IFFCO ಲಿಮಿಟೆಡ್ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: 70 ಸಾವಿರ ರೂ. ವೇತನ
IFFCO TRAINEE RECRUITMENT 2022: ಅಗ್ರಿಕಲ್ಚರ್ ಗ್ರಾಜುಯೇಟ್ ಟ್ರೈನಿ ಮತ್ತು ಟ್ರೈನಿ ಖಾತೆಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15.
IFFCO Trainee Recruitment 2022 : ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್ (IFFCO) ಅಗ್ರಿಕಲ್ಚರ್ ಗ್ರಾಜುಯೇಟ್ ಟ್ರೈನಿ, ಟ್ರೈನಿ ಲೀಗಲ್ ಮತ್ತು ಟ್ರೈನಿ ಅಕೌಂಟ್ಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸೂಚನೆಯ ಪ್ರಕಾರ, IFFCO ಟ್ರೈನಿ ನೇಮಕಾತಿ 2022 ಗಾಗಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾಡಬೇಕಾಗಿದೆ. ಅಗ್ರಿಕಲ್ಚರ್ ಗ್ರಾಜುಯೇಟ್ ಟ್ರೈನಿ ಮತ್ತು ಟ್ರೈನಿ ಖಾತೆಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15. ಆದರೆ ಟ್ರೈನಿ ಲೀಗಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 3 ಮಾತ್ರ.
ಟ್ರೈನಿ ಹುದ್ದೆಗಳಿಗೆ ಆಯ್ಕೆಯಾದ ನಂತರ ದೇಶ ಮತ್ತು ವಿದೇಶಗಳಲ್ಲಿ ಎಲ್ಲಿ ಬೇಕಾದರೂ ಇಫ್ಕೋ ಸಂಸ್ಥೆಗಳು, ಜಂಟಿ ಉದ್ಯಮಗಳು ಮತ್ತು ಭವಿಷ್ಯದ ಯೋಜನೆಗಳಲ್ಲಿ ನೇಮಕ ಮಾಡಿಕೊಳ್ಳಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಪದವೀಧರ ಫ್ರೆಶರ್‌ಗಳು ಮತ್ತು ಸಿಎ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
IFFCO Trainee Recruitment 2022 : ವೇತನ ಟ್ರೈನಿ ಹುದ್ದೆಗಳಿಗೆ ನೇಮಕಗೊಂಡ ನಂತರ ಪ್ರತಿ ತಿಂಗಳು 37000 ರಿಂದ 70000 ರೂ. ವೇತನ ನೀಡಲಾಗುತ್ತದೆ.
IFFCO Trainee Recruitment 2022 : ಆಯ್ಕೆ ಪ್ರಕ್ರಿಯೆ ಹೇಗೆ? IFFCO ನಲ್ಲಿ ಅಗ್ರಿಕಲ್ಚರ್ ಗ್ರಾಜುಯೇಟ್ ಟ್ರೈನಿ ಹುದ್ದೆಗಳಿಗೆ ನೇಮಕಾತಿಯನ್ನು ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆ ಮತ್ತು ಇನ್ನಿತರ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
IFFCO Trainee Recruitment 2022 : ಶೈಕ್ಷಣಿಕ ಅರ್ಹತೆ: ಕೃಷಿ ಪದವೀಧರ ಟ್ರೈನಿ– ನಾಲ್ಕು ವರ್ಷದ ಬಿ.ಎಸ್ಸಿ ಅಗ್ರಿಕಲ್ಚರ್ ಪದವಿ ಮಾಡಿರಬೇಕು. ಹಾಗೆಯೇ ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಆದರೆ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇಕಡಾ 55 ಅಂಕಗಳನ್ನು ಪಡೆದಿದ್ದರೆ ಸಾಕು. B.Sc ಅಗ್ರಿಕಲ್ಚರ್ 2019 ಅಥವಾ ನಂತರದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಟ್ರೈನಿ ಅಕೌಂಟ್ಸ್- ಕನಿಷ್ಠ 60% ಅಂಕಗಳೊಂದಿಗೆ CA ಮಾಡಿರಬೇಕು. ಹಾಗೆಯೇ ವಾಣಿಜ್ಯ ವಿಷಯದಲ್ಲಿ ಪದವಿ ಹೊಂದಿರಬೇಕು.
ಟ್ರೈನಿ ಲೀಗಲ್- ಪೂರ್ಣಾವಧಿ ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್ ಅಥವಾ ಐದು ವರ್ಷಗಳ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಕೋರ್ಸ್‌ನಲ್ಲಿ ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.