IISc Recruitment 2023: ಭಾರತೀಯ ವಿಜ್ಞಾನ ಸಂಸ್ಥೆಯು (IISc) ಹಿರಿಯ ಸಂಪಾದಕೀಯ ವ್ಯವಸ್ಥಾಪಕ ಮತ್ತು ಹಿರಿಯ ಸಂಪಾದಕೀಯ ಸಹಾಯಕ (OoC) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನ ಅಧಿಕೃತ ವೆಬ್ಸೈಟ್ iisc.ac.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಹಿರಿಯ ಸಂಪಾದಕೀಯ ವ್ಯವಸ್ಥಾಪಕರು- 2 ಹುದ್ದೆಗಳು
ಹಿರಿಯ ಸಂಪಾದಕೀಯ ಸಹಾಯಕ- 2 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 4
ಉದ್ಯೋಗದ ಸ್ಥಳ:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)- ಬೆಂಗಳೂರು
ಅರ್ಹತಾ ಮಾನದಂಡಗಳು:
ಇದನ್ನೂ ಓದಿ: Karnataka Bank Recruitment 2023: ಪದವೀಧರರಿಗೆ ಕರ್ನಾಟಕ ಬ್ಯಾಂಕ್ನಲ್ಲಿದೆ ಉದ್ಯೋಗಾವಕಾಶ
ಮಾಸಿಕ ವೇತನ:
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿಲ್ಲ. ಹೀಗಾಗಿ ಹಿರಿಯ ಮತ್ತು ಅನುಭವಿ ಅಭ್ಯರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ಲೀಸ್ಟ್ ಮಾಡಲಾಗುತ್ತದೆ. ಇದಾದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 19, 2023. ಇನ್ನು 10.01.2023 ರವರೆಗೆ ಈ ಮೇಲ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ:
ಹಿರಿಯ ಸಂಪಾದಕೀಯ ವ್ಯವಸ್ಥಾಪಕರು ಮತ್ತು ಹಿರಿಯ ಸಂಪಾದಕೀಯ ಸಹಾಯಕ ಹುದ್ದೆಗಳಿಗೆ ಒಪ್ಪಂದದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಒಂದು ವರ್ಷದ ಒಪ್ಪಂದ ಇರಲಿದ್ದು, ಇದಾದ ಬಳಿಕ ತೃಪ್ತಿದಾಯಕ ಕಾರ್ಯಕ್ಷಮತೆಯನ್ನು 04 ವರ್ಷಗಳವರೆಗೆ ಒಪ್ಪಂದವನ್ನು ವಿಸ್ತರಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Sun, 8 January 23