India Post GDS Recruitment 2023: 40,000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನಾಂಕ
ಅರ್ಜಿದಾರರು ಭಾರತ ಪೋಸ್ಟ್ GDS ನೇಮಕಾತಿ 2023 ಗೆ https://indiapostgdsonline.gov.in/ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ; ಖಾಲಿ ಹುದ್ದೆಗಳು, ಅರ್ಹತಾ ಮಾನದಂಡಗಳು ಇಲ್ಲಿವೆ.

ಭಾರತೀಯ ಅಂಚೆ ಇಲಾಖೆಯು ಭಾರತ ಪೋಸ್ಟ್ ಜಿಡಿಎಸ್ (GDS) ನೇಮಕಾತಿ 2023 ಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಫೆಬ್ರವರಿ 16 ರೊಳಗೆ ಅಧಿಕೃತ ವೆಬ್‌ಸೈಟ್ indiapostgdsonline.gov.in ನಲ್ಲಿ 40,000 ಕ್ಕೂ ಹೆಚ್ಚು ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಅಂಚೆ ಇಲಾಖೆಯು 40,889 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಗಡುವಿಗೂ ಮುನ್ನ ಭಾರತದ ಪೋಸ್ಟ್ GDS ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಫೆಬ್ರವರಿ 17 ರಿಂದ 19, 2023 ರವರೆಗೆ ಅರ್ಜಿಯನ್ನು ತಿದ್ದುವ ಅವಕಾಶವಿದೆ.
ಜಿಡಿಎಸ್ ಸಿವಿಲ್ ಹುದ್ದೆಗಳನ್ನು ಹೊಂದಿರುವವರು ಭಾರತದ ಒಕ್ಕೂಟದ ಸಾಮಾನ್ಯ ನಾಗರಿಕ ಸೇವೆಗಳ ಹೊರಗಿದ್ದಾರೆ. ಹೊರಡಿಸಿದ ಸೂಚನೆಯ ಪ್ರಕಾರ, ಜಿಡಿಎಸ್ (ಕಂಡಕ್ಟ್ ಮತ್ತು ಎಂಗೇಜ್ಮೆಂಟ್) ನಿಯಮಗಳು 2020 ರ ಪ್ರಕಾರ ಜಿಡಿಎಸ್ ಸಿವಿಲ್ ಹುದ್ದೆಗಳನ್ನ ಜಿಡಿಎಸ್ ನಿರ್ವಹಿಸುತ್ತದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯೋಮಿತಿ 40 ವರ್ಷ. ನೋಟಿಫಿಕೇಶನ್ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದಂದು ವಯಸ್ಸನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಾವಕಾಶ: ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತ ಪೋಸ್ಟ್ GDS ನೇಮಕಾತಿ 2023 : ಅರ್ಜಿ ಸಲ್ಲಿಸಲು ಅರ್ಹತೆ ಮಾನದಂಡಗಳು ಹೀಗಿವೆ:
- ಮಾನ್ಯತೆ ಪಡೆದ ಬೋರ್ಡ್‌ನಿಂದ ಗಣಿತ ಮತ್ತು ಇಂಗ್ಲಿಷ್‌ನಲ್ಲಿ (ಕಡ್ಡಾಯ ಅಥವಾ ಎಲೆಕ್ಟಿವ್ ವಿಷಯ ಓದಿರಬೇಕು) 10 ನೇ ತರಗತಿಯ ಪ್ರೌಢಶಾಲಾ ಪರೀಕ್ಷೆಯ ಪಾಸ್ ಪ್ರಮಾಣಪತ್ರ.
- ಅರ್ಜಿದಾರರು ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿರಬೇಕು. ಕಡ್ಡಾಯ ಅಥವಾ ಎಲೆಕ್ಟಿವ್ ವಿಷಯಗಳಲ್ಲಿ ಕನಿಷ್ಠ ದ್ವಿತೀಯ ದರ್ಜೆಯಾದರು ಮುಗಿಸಿರಬೇಕು.
- ಇತರ ಅರ್ಹತೆಗಳು ಕಂಪ್ಯೂಟರ್ ಜ್ಞಾನ, ಸೈಕ್ಲಿಂಗ್ ಜ್ಞಾನ ಮತ್ತು ಜೀವನೋಪಾಯದ ಸಮರ್ಪಕ ವಿಧಾನಗಳನ್ನು ಒಳಗೊಂಡಿವೆ.




