IOCL 2021 Recruitment: ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿಂದ 506 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನಿಂದ ದೇಶದ ವಿವಿಧ ಭಾಗಗಳಲ್ಲಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಯಾವ ಹುದ್ದೆಗಳು ಎಂಬುದು ಸೇರಿದಂತೆ ಮತ್ತಿತರ ವಿವರ ಇಲ್ಲಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)ನಿಂದ ಈಚೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಹಲವಾರು ರಾಜ್ಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್, ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್ಸ್ ಮತ್ತು ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಲಿಸ್ಟ್ಸ್ ಇಂಥ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವ್ಯಾವ ಹುದ್ದೆಗಳು ಎಂಬ ಮಾಹಿತಿ ಈ ಕೆಳಕಂಡಂತಿವೆ:
ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್- IV (Production) – 296 ಹುದ್ದೆಗಳು ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ – IV (P&U) – 35 ಹುದ್ದೆಗಳು ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ – IV (ಮೆಕ್ಯಾನಿಕಲ್)/ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- IV – 32 ಹುದ್ದೆಗಳು ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ – IV (ಎಲೆಕ್ಟ್ರಿಕಲ್)/ ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- IV (P&U-O&M) – 65 ಹುದ್ದೆಗಳು ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ – IV (Fire & Safety) – 14 ಹುದ್ದೆಗಳು ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಲಿಸ್ಟ್ಸ್ – IV – 29 ಹುದ್ದೆಗಳು ಜೂನಿಯರ್ ಮಟೀರಿಯರ್ ಅಸಿಸ್ಟೆಂಟ್- IV / ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- IV – 4 ಹುದ್ದೆಗಳು ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್ಸ್ – IV – 1 ಹುದ್ದೆ
ಈ ಹುದ್ದೆಗಳು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ ಘಟಕಗಳಾದ ಹಲ್ದಿಯಾ (ಪಶ್ಚಿಮ ಬಂಗಾಲ), ಪಾಣಿಪತ್ (ಹರ್ಯಾಣ), ಪಾರಾದಿಪ್ (ಒಡಿಶಾ), ಗುವಾಹತಿ ದಿಗ್ಬಾಯ್, ಬೊಂಗೈಗಾಂವ್ (ಅಸ್ಸಾಮ್), ವಡೋದರ (ಗುಜರಾತ್), ಬರೌನಿ (ಬಿಹಾರ) ಮತ್ತು ಮಥುರಾ (ಉತ್ತರಪ್ರದೇಶ)ದಲ್ಲಿವೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 25,000 ಮತ್ತು 1,05,000 ರೂಪಾಯಿ ದೊರೆಯುತ್ತದೆ.
ಇಂಡಿಯನ್ ಆಯಿಲ್ (IOCL) 2021 ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆ? 1. ಐಒಸಿಎಲ್ನ ಅಧಿಕೃತ ವೆಬ್ಸೈಟ್ www.iocl.comಗೆ ಭೇಟಿ ನೀಡಿ 2. Whats New ಆಯ್ಕೆಗೆ ತೆರಳಿ 3. ‘Requirement of Experienced Non-Executive Personnel 2021 in IOCL, Refineries Division’ ಎಂಬ ಆಯ್ಕೆಗೆ ತೆರಳಬೇಕು. 4. “Click here to Apply Online” ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: SBI PO Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2056 ಪ್ರೊಬೆಷನರಿ ಹುದ್ದೆಗೆ ಅರ್ಜಿ ಆಹ್ವಾನ