IOCL Recruitment 2022: ಪಿಯುಸಿ ಪಾಸಾದವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಲ್ಲಿ ಉದ್ಯೋಗಾವಕಾಶ

| Updated By: ಝಾಹಿರ್ ಯೂಸುಫ್

Updated on: Feb 07, 2022 | 6:25 PM

IOCL Recruitment 2022: ಟ್ರೇಡ್ ಅಪ್ರೆಂಟಿಸ್-ರೀಟೇಲ್ ಸೇಲ್ಸ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು.

IOCL Recruitment 2022: ಪಿಯುಸಿ ಪಾಸಾದವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಲ್ಲಿ ಉದ್ಯೋಗಾವಕಾಶ
IOCL Recruitment 2022
Follow us on

IOCL Recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. IOCLನ ಪಶ್ಚಿಮ ವಲಯದ ಮಾರ್ಕೆಟಿಂಗ್ ವಿಭಾಗದ ಅಡಿಯಲ್ಲಿ 570 ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್‌ಗಳ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರ:
ಒಟ್ಟು ಹುದ್ದೆಗಳ ಸಂಖ್ಯೆ – 570

ವಿದ್ಯಾರ್ಹತೆ:
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NCVT/SCVT ಯಿಂದ ಗುರುತಿಸಲ್ಪಟ್ಟ ನಿಯಮಿತ ಪೂರ್ಣ ಸಮಯದ ITI ಪ್ರಮಾಣ ಪತ್ರ ಹೊಂದಿರಬೇಕು.
ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ 3 ವರ್ಷಗಳ ಡಿಪ್ಲೊಮಾ (SC/ST ಅಭ್ಯರ್ಥಿಗಳು 45% ಅಂಕ ಹೊಂದಿದರೆ ಸಾಕು) ಮಾಡಿರಬೇಕು.
ಟ್ರೇಡ್ ಅಪ್ರೆಂಟಿಸ್-ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವೀಧರರು ಆಗಿರಬೇಕು. (SC/ST/PWBD ಅಭ್ಯರ್ಥಿಗಳು 45% ಅಂಕ ಹೊಂದಿದರೆ ಸಾಕು).
ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿ ಪಾಸ್ ಅಥವಾ ‘ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್’ ನಲ್ಲಿ ಕೌಶಲ್ಯದ ಪ್ರಮಾಣಪತ್ರ ಹೊಂದಿರಬೇಕು.
ಟ್ರೇಡ್ ಅಪ್ರೆಂಟಿಸ್-ರೀಟೇಲ್ ಸೇಲ್ಸ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 24 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 15, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಈ ನೇಮಕಾತಿಯ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!