AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PWD ಎಂಜಿನಿಯರ್​ ಪರೀಕ್ಷೆ ಅಚ್ಚುಕಟ್ಟಾಗಿಯೇ ನಡೆದಿದೆ, ಯಾವುದೇ ಅಕ್ರಮ ಇಲ್ಲ: ಲೋಕೋಪಯೋಗಿ ಸಚಿವ ಪಾಟೀಲ್

ಕುತೂಹಲಕಾರಿ ಬೆಳವಣಿಗೆಯಲ್ಲಿ, ಗೃಹ ಕಚೇರಿ ಕೃಷ್ಣಾದಲ್ಲಿ ಗುತ್ತಿಗೆದಾರರ ಸಂಘದವರು ಇಂದು ಸಿಎಂ ಬೊಮ್ಮಾಯಿ ಆಮಂತ್ರಣದ ಮೇರೆಗೆ ಅವರನ್ನು ಭೇಟಿಯಾದರು. ಭೇಟಿ ವೇಳೆ PWD ಸಚಿವ ಸಿ.ಸಿ. ಪಾಟೀಲ್‌ರನ್ನು ಸಿಎಂ ಬೊಮ್ಮಾಯಿ ಕರೆಸಿದ್ದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ವಿರುದ್ಧ ಆರೋಪ ಕೇಳಿಬಂದಿತ್ತು. ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು.

PWD ಎಂಜಿನಿಯರ್​ ಪರೀಕ್ಷೆ ಅಚ್ಚುಕಟ್ಟಾಗಿಯೇ ನಡೆದಿದೆ, ಯಾವುದೇ ಅಕ್ರಮ ಇಲ್ಲ: ಲೋಕೋಪಯೋಗಿ ಸಚಿವ ಪಾಟೀಲ್
ನನ್ನ ಇಲಾಖೆಯಲ್ಲಿ ಎಂಜಿನಿಯರ್​ ನೇಮಕ ಪರೀಕ್ಷೆ ಅಚ್ಚುಕಟ್ಟಾಗಿಯೇ ನಡೆದಿದೆ, ಯಾವುದೇ ಅಕ್ರಮ ಇಲ್ಲ: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್
TV9 Web
| Edited By: |

Updated on: Apr 25, 2022 | 4:14 PM

Share

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಇತ್ತೀಚೆಗೆ ನಡೆದಿದ್ದ ಜೂನಿಯರ್​ ಎಂಜಿನಿಯರ್​​ (ಜೆಇ) ಆಯ್ಕೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ/ ವಿಚಾರವಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು ನನ್ನ ಇಲಾಖೆಯ ಜೆಇ ಪರೀಕ್ಷೆ ಅಚ್ಚುಕಟ್ಟಾಗಿಯೇ ನಡೆದಿದೆ. ಯಾವುದೇ ಅಕ್ರಮದ ವಾಸನೆ ಇಲ್ಲ. 900 ಹುದ್ದೆಗಳ ನೇಮಕಾತಿ ವಿಚಾರ ಕೋರ್ಟ್​​ನಲ್ಲಿ ಇತ್ತು. ಬಳಿಕ KPSC ಪರೀಕ್ಷೆ ಮೂಲಕ ನೇಮಕಾತಿಗೆ ತೀರ್ಮಾನ ಮಾಡಲಾಯಿತು. ಸೆಂಟ್ ಜಾನ್ಸ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ ಅಂತಾ ಆರೋಪ ಕೇಳಿಬಂದಿದೆ. ಸೆಂಟ್ ಜಾನ್ಸ್ ಕಾಲೇಜು ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದಕ್ಕೂ PWD ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಇದರಲ್ಲಿ ಇಲಾಖೆಯ ಯಾವುದೇ ಪಾತ್ರ ಇಲ್ಲವೆಂದು ಸಿ.ಸಿ. ಪಾಟೀಲ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಇನ್ನೂ ಮಾತನಾಡಿದ ಸಚಿವ ಸಚಿವ ಸಿ.ಸಿ.ಪಾಟೀಲ್ ಅವರು ಮಾಧ್ಯಮಗಳು ತಪ್ಪು ಮಾಹಿತಿ ಇಟ್ಟುಕೊಳ್ಳಬಾರದು. ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 900 ಹುದ್ದೆ ನೇಮಕಾತಿ ವಿಚಾರ ಕೋರ್ಟ್ ನಲ್ಲಿ ಇತ್ತು. ಆ ಬಳಿಕ ಕೆಪಿಎಸ್ ಸಿ ಪರೀಕ್ಷೆ ಮೂಲಕ ನೇಮಕಾತಿ ಮಾಡಲು ತೀರ್ಮಾನ ಆಗಿತ್ತು. ಅಚ್ಚು ಕಟ್ಟಾಗಿ ಪರೀಕ್ಷೆ ಆಗಿದೆ. ಆದರೆ ಸೆಂಟ್ ಜಾನ್ಸ್ ಕೇಂದ್ರದಲ್ಲಿ ಅಕ್ರಮ ಆಗಿದೆ ಅಂತಾ ಒಂದು ಆರೋಪ ಕೇಳಿ ಬಂದಿತ್ತು. ಅದರ ಮೇಲೆ ಎಫ್ ಐಆರ್ ಆಗಿದೆ. ಇದಕ್ಕೂ ಇಲಾಖೆಗೂ ಸಂಬಂಧ ಇಲ್ಲ. ಇಲಾಖೆಯ ಯಾವುದೇ ಪಾತ್ರ ಇದರಲ್ಲಿ ಇರುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ಇನ್ನು, ಗೃಹ ಸಚಿವರಿಗೆ ನೋಟಿಸ್ ನೀಡಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿಕೆ ಪ್ರಸ್ತಾಪಿಸಿದ ಸಚಿವ ಪಾಟೀಲ್ ಅವರು ಜತೆಯಲ್ಲಿ ಫೋಟೋ ಇದ್ದ ಮಾತ್ರಕ್ಕೆ ಆರೋಪ ಸರಿಯಲ್ಲ. ವಿಧಾನಸೌಧದಲ್ಲಿ ಮೀಟಿಂಗ್ ಮುಗಿಸಿ ಬರುವಾಗ ನಮ್ಮ ಜೊತೆಯೂ ಯಾರು ಯಾರೋ ಸೆಲ್ಫಿ ತಗೋತಾರೆ. ಫೋಟೋ ಇದ್ದವರ ಜೊತೆ ಹೋಗಿ ಮೋಜು ಮಸ್ತಿ ಮಾಡಿದರೆ ಅದನ್ನು ವೆಸ್ಟೆಡ್​ ಇಂಟರೆಸ್ಟ್ ಎನ್ನಬಹುದು. ಇಲ್ಲದಿದ್ದರೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಗೃಹ ಸಚಿವರು ಯಾರ ಮನೆಗೆ ಹೋಗಿದ್ದರು ಎಂಬುದು ನನಗಂತೂ ಮಾಹಿತಿ ಇಲ್ಲ ಎಂದು ವಿಧಾನ ಸೌಧದಲ್ಲಿ ಸಚಿವ ಪಾಟೀಲ್ ಮಾರ್ಮಿಕವಾಗಿ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಗುತ್ತಿಗೆದಾರರ ಸಂಘದಿಂದ ಸಿಎಂ ಭೇಟಿ; PWD ಸಚಿವ ಪಾಟೀಲ್‌ ಗೆ ಸಿಎಂ ಬುಲಾವ್ ಕುತೂಹಲಕಾರಿ ಬೆಳವಣಿಗೆಯಲ್ಲಿ, ಗೃಹ ಕಚೇರಿ ಕೃಷ್ಣಾದಲ್ಲಿ ಗುತ್ತಿಗೆದಾರರ ಸಂಘದವರು ಇಂದು ಸಿಎಂ ಬೊಮ್ಮಾಯಿ ಆಮಂತ್ರಣದ ಮೇರೆಗೆ ಅವರನ್ನು ಭೇಟಿಯಾದರು. ಭೇಟಿ ವೇಳೆ PWD ಸಚಿವ ಸಿ.ಸಿ. ಪಾಟೀಲ್‌ರನ್ನು ಸಿಎಂ ಬೊಮ್ಮಾಯಿ ಕರೆಸಿದ್ದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ವಿರುದ್ಧ ಆರೋಪ ಕೇಳಿಬಂದಿತ್ತು. ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ