ಉದ್ಯೋಗಾಂಕ್ಷಿಗಳೇ ಗಮನಿಸಿ: ಜೂನ್​ 15 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ವತಿಯಿಂದ ಜೂನ್​ 15 ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ.

ಉದ್ಯೋಗಾಂಕ್ಷಿಗಳೇ ಗಮನಿಸಿ: ಜೂನ್​ 15 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 12, 2023 | 10:14 PM

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Bangalore Hotel Association) ವತಿಯಿಂದ ಜೂನ್​ 15 ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಈ ಕುರಿತಾಗಿ ಪ್ರಕಟಣೆ ಹೊರಡಿಸಲಾಗಿದೆ. ಕೆಎಸ್​ಡಿಸಿ ಕಛೇರಿಯ ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ಸರ್ಕಲ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29 ಬೆಳಗ್ಗೆ 09.30 ರಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಹುದ್ದೆಯ ವಿವರ:  

ಸ್ಟೀವರ್ಡ್​​, ಕ್ಯಾಪ್ಟನ್​​, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಸೇರಿದಂತೆ ಇತರೆ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.

ಇದನ್ನೂ ಓದಿ: Indian Navy Agniveer Recruitment 2023: ನೌಕಾಪಡೆಯಲ್ಲಿ ಅಗ್ನಿವೀರರ ನೇಮಕ -ಭಾರತೀಯ ನೌಕಾಪಡೆಯಲ್ಲಿ 1365 ಅಗ್ನಿವೀರ್ ಉದ್ಯೋಗಗಳಿಗೆ ಅಧಿಸೂಚನೆ ಬಿಡುಗಡೆ

ಅರ್ಹತಾ ವಿವರಗಳು ಹೀಗಿದೆ: 

10ನೇ ತರಗತಿ, ಪಿಯುಸಿ, ಡಿಪ್ಲೊಮಾದಲ್ಲಿ ಪಾಸ್​ ಅಥವಾ ಅನುತ್ತೀರ್ಣ ಮತ್ತು ಆಸಕ್ತರು ಯಾರೂಬೇಕಾದರು ಭಾಗವಹಿಸಬಹುದಾಗಿದೆ.

ಸಂಬಳ:

ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ದರಿರುವ ವ್ಯಕ್ತಿಗಳನ್ನು ನೇಮಿಸಿಕೋಳ್ಳಲಾಗುತ್ತಿದ್ದು, ಇಎಸ್​​ಐ, ಪಿಎಫ್​​ ಒದಗಿಸುವುದರೊಂದಿಗೆ 13000 ರೂ. ದಿಂದ 16000 ರೂ. ಸಂಬಳ ನೀಡಲಾಗುತ್ತಿದೆ.

ಇದನ್ನೂ ಓದಿ: RBI Recruitment 2023: 35 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತರು ನಿಮಗದ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು ಅಥವಾ ಜೂನ್​ 15ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಯಾಗಿ 9019485688, 08182-255294ಗೆ ಸಂಪರ್ಕಿಸಬಹುದಾಗಿದೆ.

ಮತ್ತಷ್ಟು ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.