Employment: ಸ್ನಾತಕೋತ್ತರ ಪದವೀಧರರಿಗೆ ಸುಪ್ರೀಂ ಕೋರ್ಟ್ನಲ್ಲಿನ ಉದ್ಯೋಗಾವಕಾಶ, 210 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಭಾರತದ ಸುಪ್ರೀಂ ಕೋರ್ಟ್ (SCI) ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, ಖಾಲಿ ಇರುವ 210 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (ಗ್ರೂಪ್ 'ಬಿ' ನಾನ್-ಗೆಜೆಟೆಡ್) ಹುದ್ದೆಗಳಿಗೆ ಭಾರತೀಯ ನಾಗರಿಕರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಭಾರತದ ಸುಪ್ರೀಂ ಕೋರ್ಟ್ (SCI) ನೇಮಕಾತಿ 2022: ಭಾರತದ ಸುಪ್ರೀಂ ಕೋರ್ಟ್ (SCI) ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, ಖಾಲಿ ಇರುವ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (ಗ್ರೂಪ್ ‘ಬಿ‘ ನಾನ್–ಗೆಜೆಟೆಡ್) ಹುದ್ದೆಗಳ ಭರ್ತಿಗಾಗಿ ಭಾರತೀಯ ನಾಗರಿಕರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಮೂಲಕ ಒಟ್ಟು 210 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಖಾಲಿ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದ್ದು, ಬದಲಾವಣೆಗೆ ಒಳಪಟ್ಟಿರುತ್ತದೆ. ಅಂದರೆ ಆಡಳಿತಾತ್ಮಕ ಕಾರಣಗಳಿಂದಾಗಿ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಇಳಿಕೆಯಾಗಬಹುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Indian Air Force (IAF) Recruitment: ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಹುದ್ದೆಯ ವಿವರಗಳು ಮತ್ತು ಪ್ರಮುಖ ದಿನಾಂಕಗಳು:
- ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (ಗ್ರೂಪ್ ‘ಬಿ‘ ನಾನ್ ಗೆಜೆಟೆಡ್): 210 ಹುದ್ದೆಗಳು
- ಆನ್‌ಲೈನ್ ನೋಂದಣಿ ಪ್ರಾರಂಭ: ಜೂನ್ 18, 2022
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 10, 2022
ವೇತನ ಶ್ರೇಣಿ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಪೇ ಮ್ಯಾಟ್ರಿಕ್ಸ್‌ನ ಹಂತ 6ರಲ್ಲಿ ಆರಂಭಿಕ ಮೂಲ ವೇತನ 35,400ರೂ., HRA ಸೇರಿದಂತೆ ಭತ್ಯೆಗಳ ಅಸ್ತಿತ್ವದಲ್ಲಿರುವ ದರದ ಪ್ರಕಾರ ಅಂದಾಜು ಒಟ್ಟು ವೇತನವು ತಿಂಗಳಿಗೆ 63068 ರೂ. ಸಿಗಲಿದೆ.
ಇದನ್ನೂ ಓದಿ: AAI Recruitment 2022: ಏರ್‌ಪೋರ್ಟ್ ಅಥಾರಿಟಿಯಲ್ಲಿ ಉದ್ಯೋಗಾವಕಾಶ: ಆರಂಭಿಕ ವೇತನ 40 ಸಾವಿರ ರೂ.
ಅರ್ಹತಾ ಮಾನದಂಡಗಳು:
ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಇಂಗ್ಲಿಷ್ ಟೈಪಿಂಗ್ನಲ್ಲಿ ಕನಿಷ್ಠ ವೇಗ 35 w.p.m. ಇರಬೇಕು.
ಆಯ್ಕೆ ಪ್ರಕ್ರಿಯೆ:
- 100 ಪ್ರಶ್ನೆಗಳನ್ನು ಒಳಗೊಂಡ ಬಹು ಆಯ್ಕೆಯ ಉತ್ತರಗಳೊಂದಿಗೆ ಆಬ್ಜೆಕ್ಟಿವ್ ಟೈಪ್ ಪ್ರಶ್ನೆ ಪತ್ರಿಕೆ ಪರೀಕ್ಷೆ.
- 25 ಪ್ರಶ್ನೆಗಳನ್ನು ಒಳಗೊಂಡ ಆಬ್ಜೆಕ್ಟಿವ್ ಟೈಪ್ ಕಂಪ್ಯೂಟರ್ ಜ್ಞಾನ ಪರೀಕ್ಷೆ
- ಕಂಪ್ಯೂಟರ್‌ನಲ್ಲಿ ಟೈಪಿಂಗ್ (ಇಂಗ್ಲಿಷ್) ಪರೀಕ್ಷೆ (ಕನಿಷ್ಠ ವೇಗ 35 w.p.m., 3% ತಪ್ಪುಗಳನ್ನು ಅನುಮತಿಸಲಾಗಿದೆ)
- ವಿವರಣಾತ್ಮಕ ಪರೀಕ್ಷೆ (ಇಂಗ್ಲಿಷ್ ಭಾಷೆಯಲ್ಲಿ) ಕಾಂಪ್ರೆಹೆನ್ಷನ್ ಪ್ಯಾಸೇಜ್, ನಿಖರ ಬರವಣಿಗೆ ಮತ್ತು ಪ್ರಬಂಧ ಬರವಣಿಗೆಯನ್ನು ಒಳಗೊಂಡಿರುತ್ತದೆ.
- ಸಂದರ್ಶನ.
ಇದನ್ನೂ ಓದಿ: BHEL Recruitment 2022: ಐಟಿಐ ಪಾಸಾದವರಿಗೆ BHEL ನಲ್ಲಿದೆ ಉದ್ಯೋಗಾವಕಾಶ
ಅರ್ಜಿ ಶುಲ್ಕ
ಸಾಮಾನ್ಯ, ಮತ್ತು OBC ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, SC/ST, ಮಾಜಿ ಸೈನಿಕರು PH/ಸ್ವಾತಂತ್ರ್ಯ ಹೋರಾಟಗಾರರ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ sci.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ