AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Air Force (IAF) Recruitment: ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ 18 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲೂ ಖಾಲಿ ಹುದ್ದೆಗಳಿವೆ.

Indian Air Force (IAF) Recruitment: ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jun 19, 2022 | 10:55 AM

Share

ಭಾರತೀಯ ವಾಯುಪಡೆ (ಐಎಎಫ್) ಗ್ರೂಪ್ ಸಿ ನೇಮಕಾತಿ 2022: ವಾರ್ಡ್ ಸಹಾಯಕ, ಕುಕ್, ಹೌಸ್ ಕೀಪಿಂಗ್ ಸ್ಟಾಫ್ (ಎಚ್‌ಕೆಎಸ್) ಮತ್ತು ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಡ್ರೈವರ್ (ಆರ್ಡಿನರಿ ಗ್ರೇಡ್) ಹುದ್ದೆಗೆ ನೇಮಕಾತಿ ಪ್ರಕಟಣೆಯನ್ನು ಐಎಎಫ್ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ 18 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಉದ್ಯೋಗ ಸುದ್ದಿ ಅಥವಾ ರೋಜ್‌ಗಾರ್ ಸಮಾಚಾರ್​ನಲ್ಲಿ ಈ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳ ಒಳಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಉದ್ಯೋಗ ಜಾಹೀರಾತು ಜೂ.18ರಂದು ಪ್ರಕಟಗೊಂಡಿದೆ.

ಹುದ್ದೆಗಳ ವಿವರ:

Ayah/ ವಾರ್ಡ್ ಸಹಾಯಕ ಹುದ್ದೆ, ಕಮಾಂಡೆಂಟ್ ಕಮಾಂಡ್ ಆಸ್ಪತ್ರೆ AF, ಬೆಂಗಳೂರು- 2 ಹುದ್ದೆಗಳು

ಕುಕ್ (OG) ಹುದ್ದೆ, ಕಮಾಂಡೆಂಟ್ ಕಮಾಂಡ್ ಆಸ್ಪತ್ರೆ AF, ಬೆಂಗಳೂರು- 1 ಹುದ್ದೆ

ಹೌಸ್ ಕೀಪಿಂಗ್ ಸ್ಟಾಫ್ (HKS) ಹುದ್ದೆ, ಕಮಾಂಡೆಂಟ್ ಕಮಾಂಡ್ ಆಸ್ಪತ್ರೆ AF, ಬೆಂಗಳೂರು- 1 ಹುದ್ದೆ

ಕುಕ್ (OG) ಹುದ್ದೆ, ಏರ್ ಆಫೀಸರ್ ಕಮಾಂಡಿಂಗ್, AF ನಿಲ್ದಾಣ, ಜಾಲಹಳ್ಳಿ, ಪಶ್ಚಿಮ ಬೆಂಗಳೂರು – 1 ಹುದ್ದೆ

ಕುಕ್ (OG) ಹುದ್ದೆ, ಏರ್ ಆಫೀಸರ್ ಕಮಾಂಡಿಂಗ್, AF ನಿಲ್ದಾಣ, ಯಲಹಂಕ, ಬೆಂಗಳೂರು – 2 ಹುದ್ದೆಗಳು

ಕುಕ್ (OG) ಹುದ್ದೆ, ಕಮಾಂಡಿಂಗ್ ಆಫೀಸರ್ ಟ್ರೈನಿಂಗ್ ಕಮಾಂಡ್ (U), ಎಎಫ್ ಜೆಸಿ ನಗರ-ಪೋಸ್ಟ್, ಹೆಬ್ಬಾಳ, ಬೆಂಗಳೂರು – 1 ಹುದ್ದೆ

ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್​ಪೋರ್ಟ್ ಟ್ರೈವರ್ (ಸಾಮಾನ್ಯ ದರ್ಜೆ), ಕಮಾಂಡಿಂಗ್ ಆಫೀಸರ್ ಟ್ರೈನಿಂಗ್ ಕಮಾಂಡ್ (U), ಎಎಫ್ ಜೆಸಿ ನಗರ-ಪೋಸ್ಟ್, ಹೆಬ್ಬಾಳ, ಬೆಂಗಳೂರು- 1 ಹುದ್ದೆ

ಕುಕ್ (OG) ಹುದ್ದೆ, ಏರ್ ಆಫೀಸರ್ ಕಮಾಂಡಿಂಗ್, AF ನಿಲ್ದಾಣ, ಚೆನ್ನೈ –  3 ಹುದ್ದೆಗಳು

ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್​ಪೋರ್ಟ್ ಟ್ರೈವರ್ (ಸಾಮಾನ್ಯ ದರ್ಜೆ), ಏರ್ ಆಫೀಸರ್ ಕಮಾಂಡಿಂಗ್, AF ನಿಲ್ದಾಣ, ಚೆನ್ನೈ- 1 ಹುದ್ದೆ

ಹೌಸ್ ಕೀಪಿಂಗ್ ಸ್ಟಾಫ್ (HKS) ಹುದ್ದೆ, ಏರ್ ಆಫೀಸರ್ ಕಮಾಂಡಿಂಗ್, AF ನಿಲ್ದಾಣ, ಚೆನ್ನೈ- 1 ಹುದ್ದೆ

ಕುಕ್ (OG) ಹುದ್ದೆ, ಏರ್ ಆಫೀಸರ್ ಕಮಾಂಡಿಂಗ್, AF ಸ್ಟೇಷನ್, ಸಿಕಂದರಾಬಾದ್ –  1 ಹುದ್ದೆ

ಇದನ್ನೂ ಓದಿ: AAI Recruitment 2022: ಏರ್‌ಪೋರ್ಟ್ ಅಥಾರಿಟಿಯಲ್ಲಿ ಉದ್ಯೋಗಾವಕಾಶ: ಆರಂಭಿಕ ವೇತನ 40 ಸಾವಿರ ರೂ.

ವಿದ್ಯಾರ್ಹತೆ:

ವಾರ್ಡ್ ಸಹಾಯಕ, ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಡ್ರೈವರ್ (ಸಾಮಾನ್ಯ ದರ್ಜೆ), ಹೌಸ್ ಕೀಪಿಂಗ್ ಸ್ಟಾಫ್ (HKS) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ತೇರ್ಗಡೆ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು. ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಲಘು ಮತ್ತು ಭಾರೀ ವಾಹನಗಳಿಗೆ ಮಾನ್ಯವಾದ ನಾಗರಿಕ ಚಾಲನಾ ಪರವಾನಗಿಯನ್ನು ಹೊಂದಿರಬೇಕು, ಚಾಲನೆಯಲ್ಲಿ ವೃತ್ತಿಪರ ಕೌಶಲ್ಯ ಮತ್ತು ಮೋಟಾರ್ ಯಾಂತ್ರಿಕತೆಯ ಜ್ಞಾನವನ್ನು ಹೊಂದಿರಬೇಕು, ಮೋಟಾರು ವಾಹನ ಚಾಲನೆಯಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು. ಕುಕ್ (ಸಾಮಾನ್ಯ ದರ್ಜೆ) ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯಲ್ಲಿ ಮಾನ್ಯತೆ ಪಡೆದ ಮಂಡಳಿಯಿಂದ ಪ್ರಮಾಣಪತ್ರ ಅಥವಾ ಕ್ಯಾಟರಿಂಗ್‌ನಲ್ಲಿ ಡಿಪ್ಲೊಮಾ ಉತ್ತೀರ್ಣರಾಗಿರುವ, ವ್ಯಾಪಾರದಲ್ಲಿ 1 ವರ್ಷದ ಅನುಭವ ಹೊಂದಿರುವವರ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: BHEL Recruitment 2022: ಐಟಿಐ ಪಾಸಾದವರಿಗೆ BHEL ನಲ್ಲಿದೆ ಉದ್ಯೋಗಾವಕಾಶ

ಹೇಗೆ ಅರ್ಜಿ ಸಲ್ಲಿಸುವುದು?

ಅರ್ಹ ಅಭ್ಯರ್ಥಿಗಳು ತಮ್ಮ ಆಯ್ಕೆಯ ಯಾವುದೇ ಏರ್ ಫೋರ್ಸ್ ಸ್ಟೇಷನ್‌ಗೆ ಹುದ್ದೆ ಮತ್ತು ವಿದ್ಯಾರ್ಹತೆಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸಲ್ಲಿಸಬೇಕು. ಹುದ್ದೆಗೆ ಬೇಕಾದ ಸರಿಯಾದ ದಾಖಲೆಗಳೊಂದಿಗೆ ಅರ್ಜಿಯನ್ನು ಸಾಮಾನ್ಯ ಪೋಸ್ಟ್ ಮೂಲಕ ಸಂಬಂಧಿತ ಏರ್ ಫೋರ್ಸ್ ಸ್ಟೇಷನ್​ಗೆ ಕಳುಹಿಸಬಹುದು.

ಉದ್ಯೋಗ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ