AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Army Recruitment 2022: ಎಸ್​ಎಸ್​ಎಲ್​ಸಿ ಪಾಸ್ ಆದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ

ಭಾರತೀಯ ಸೇನೆಯು ದಕ್ಷಿಣ ಕಮಾಂಡ್​ನ ಪ್ರಧಾನ ಕಚೇರಿ ಹಾಗೂ ಕೇಂದ್ರ ಕಮಾಂಡ್ ಪ್ರಧಾನ ಕಚೇರಿಗಾಗಿ ವಾರ್ಡ್ ಸಹಾಯಕ ಮತ್ತು ಕುಕ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

Indian Army Recruitment 2022: ಎಸ್​ಎಸ್​ಎಲ್​ಸಿ ಪಾಸ್ ಆದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ
ಭಾರತೀಯ ಸೇನೆಯ ನೇಮಕಾತಿ (ಸಾಂಧರ್ಬಿಕ ಚಿತ್ರ)Image Credit source: India.com
Follow us
TV9 Web
| Updated By: Rakesh Nayak Manchi

Updated on: Jun 19, 2022 | 2:13 PM

ಭಾರತೀಯ ಸೇನಾ ನೇಮಕಾತಿ 2022 ಅಧಿಸೂಚನೆ: ಭಾರತೀಯ ಸೇನೆಯು ದಕ್ಷಿಣ ಕಮಾಂಡ್​ನ ಪ್ರಧಾನ ಕಚೇರಿ ಹಾಗೂ ಕೇಂದ್ರ ಕಮಾಂಡ್ ಪ್ರಧಾನ ಕಚೇರಿಗಾಗಿ ವಾರ್ಡ್ ಸಹಾಯಕ ಮತ್ತು ಕುಕ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ರೋಜ್‌ಗರ್ ಸಮಾಚಾರ್‌ನಲ್ಲಿ ಪ್ರಕಟಿಸಿದ ಜಾಹೀರಾತಿನ ದಿನದಿಂದ ಮುಂದಿನ 45 ದಿನಗಳ ಒಳಗಾಗಿ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಗಳನ್ನು ಉದ್ಯೋಗ ಪತ್ರಿಕೆಯಲ್ಲಿ ಜೂ.18ರಂದು ಪ್ರಕಟಿಸಲಾಗಿದೆ. ಈ ನೇಮಕಾತಿ ಮೂಲಕ ಒಟ್ಟು 155 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Employment: ಸ್ನಾತಕೋತ್ತರ ಪದವೀಧರರಿಗೆ ಸುಪ್ರೀಂ ಕೋರ್ಟ್​ನಲ್ಲಿನ ಉದ್ಯೋಗಾವಕಾಶ, 210 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

HQ ಸೆಂಟ್ರಲ್ ಕಮಾಂಡ್ ಹುದ್ದೆಗಳ ವಿವರಗಳು:

ಕುಕ್ ಹುದ್ದೆ ಫೈಜಾಬಾದ್ ಸೇನಾ ಆಸ್ಪತ್ರೆ – 2 ಹುದ್ದೆಗಳು

ಕುಕ್ ಹುದ್ದೆ, ಗಯಾ ಸೇನಾ ಆಸ್ಪತ್ರೆ- 1 ಹುದ್ದೆ

ಕುಕ್ ಹುದ್ದೆ, ನಮ್ಕುಮ್ ಸೇನಾ ಆಸ್ಪತ್ರೆ – 1ಹುದ್ದೆ

ವಾರ್ಡ್ ಸಹಾಯಕ ಹುದ್ದೆ, 161 ಸೇನಾ ಆಸ್ಪತ್ರೆ- 5 ಹುದ್ದೆಗಳು

ವಾರ್ಡ್ ಸಹಾಯಕ ಬೇಸ್ ಹಾಸ್ಪಿಟಲ್ ಲಕ್ನೋ- 4 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಕಮಾಂಡ್ ಹಾಸ್ಪಿಟಲ್ ಲಕ್ನೋ- 15 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಆಗ್ರಾ- 2 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಅಲಹಾಬಾದ್- 8 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಬರೇಲಿ- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಮಿಲಿಟರಿ ಹಾಸ್ಪಿಟಲ್ ದಾನಾಪುರ- 5 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಡೆಹ್ರಾಡೂನ್- 4 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಫೈಜಾಬಾದ್- 4 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಫತೇಘರ್- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಗೋಪಾಲಪುರ- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಮಿಲಿಟರಿ ಹಾಸ್ಪಿಟಲ್ ಲ್ಯಾನ್ಸ್‌ಡೌನ್- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಮಥುರಾ- 5 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಮೀರತ್- 9 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಮ್ಹೌ- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ನಮ್ಕುಮ್- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಪಂಚಮಡಿ- 2 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಮಿಲಿಟರಿ ಹಾಸ್ಪಿಟಲ್ ರಾಮಗಢ- 3 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ರಾಣಿಖೇತ್- 2 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ರೂರ್ಕಿ –3 ಹುದ್ದೆಗಳು

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ವಾರಣಾಸಿ- 1 ಹುದ್ದೆ

ವಾರ್ಡ್ ಸಹಾಯಕ ಹುದ್ದೆ, ಸೇನಾ ಆಸ್ಪತ್ರೆ ಜಬಲ್ಪುರ- 6 ಹುದ್ದೆಗಳು

ಇದನ್ನೂ ಓದಿ: Indian Air Force (IAF) Recruitment: ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

HQ ಸೌಥರ್ನ್ ಕಮಾಂಡ್​​ ಹುದ್ದೆಗಳ ವಿವರಗಳು

ಕುಕ್- 10 ಹುದ್ದೆಗಳು

ವಾರ್ಡ್ ಸಹಾಯಕ- 57 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ವಾರ್ಡ್ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಮಂಡಳಿಯ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕುಕ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಂಡಳಿಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಮತ್ತು ಭಾರತೀಯ ಅಡುಗೆ ಮತ್ತು ವ್ಯಾಪಾರದಲ್ಲಿ ಪ್ರಾವೀಣ್ಯತೆಯ ಜ್ಞಾನವನ್ನು ಹೊಂದಿರಬೇಕು.

ಇದನ್ನೂ ಓದಿ: AAI Recruitment 2022: ಏರ್‌ಪೋರ್ಟ್ ಅಥಾರಿಟಿಯಲ್ಲಿ ಉದ್ಯೋಗಾವಕಾಶ: ಆರಂಭಿಕ ವೇತನ 40 ಸಾವಿರ ರೂ.

ಹೆಡ್​ಕ್ವಾರ್ಟರ್ಸ್​ ಸೆಂಟ್ರಲ್ ಕಮಾಂಡ್​ನಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು HQ ಸೆಂಟ್ರಲ್ ಕಮಾಂಡ್ (BOO-1), ಮಿಲಿಟರಿ ಆಸ್ಪತ್ರೆ ಜಬಲ್ಪುರ (M.P.) – 482001 ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. HQ ಸೌಥರ್ನ್ ಕಮಾಂಡ್​ನಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರಿಸೈಡಿಂಗ್ ಆಫೀಸರ್ (BOO-III), HQ ಸದರ್ನ್ ಕಮಾಂಡ್ ಮಿಲಿಟರಿ ಹಾಸ್ಪಿಟಲ್ ಅಹ್ಮದ್‌ನಗರ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆಗಳಲ್ಲಿನ ಮೆರಿಟ್ ಮತ್ತು ಕೌಶಲ್ಯ ಅಥವಾ ವ್ಯಾಪಾರ ಪರೀಕ್ಷೆಯಲ್ಲಿ ಯಾವುದಾದರೂ ಇದ್ದರೆ ಗುಣಮಟ್ಟದ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ