Karnataka Bank Recruitment 2023: ಕರ್ಣಾಟಕ ಬ್ಯಾಂಕ್ ಹಲವು ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಡೇಟಾ ಸೈಂಟಿಸ್ಟ್, ಡೇಟಾ ಇಂಜಿನಿಯರ್, ಸ್ಪೆಷಲ್ ಐಟಿ ಆಫೀಸರ್, ಸ್ಟ್ರಾಟಜಿ ಮತ್ತು ಪೋರ್ಟ್ಫೋಲಿಯೋ ಅನಲಿಸ್ಟ್, ಡೇಟಾ ಸಿಸ್ಟಮ್ ಆರ್ಕಿಟೆಕ್ಟ್, ಪ್ರಾಜೆಕ್ಟ್ ಹೆಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ನ ಅಧಿಕೃತ ವೆಬ್ಸೈಟ್ karnatakabank.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಡೇಟಾ ಸೈಂಟಿಸ್ಟ್
ಡೇಟಾ ಇಂಜಿನಿಯರ್
ಸ್ಪೆಷಲ್ ಐಟಿ ಆಫೀಸರ್
ಸ್ಟ್ರಾಟಜಿ ಮತ್ತು ಪೋರ್ಟ್ಫೋಲಿಯೋ ಅನಲಿಸ್ಟ್
ಡೇಟಾ ಸಿಸ್ಟಮ್ ಆರ್ಕಿಟೆಕ್ಟ್
ಪ್ರಾಜೆಕ್ಟ್ ಹೆಡ್
ಡೇಟಾ ವಿಶ್ಯುವಲೈಝೇಷನ್ ಎಕ್ಸ್ಪರ್ಟ್
ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ
ಅರ್ಹತಾ ಮಾನದಂಡಗಳು:
ಈ ನೇಮಕಾತಿ ಅಡಿಯಲ್ಲಿ ಆಯಾ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅದರಂತೆ B.Sc, B.Tech/BE, MA, ME/M.Tech, MBA/PGDM, MCA ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಪರಿಶೀಲಿಸಬಹುದು.
ವಯೋಮಿತಿ:
ಆಯಾ ಹುದ್ದೆಗಳಿಗೆ ವಿಭಿನ್ನ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ಈ ವಿವರಗಳನ್ನು ಪಡೆಯಬಹುದು.
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 15, 2023
ಅರ್ಜಿ ಸಲ್ಲಿಸುವುದು ಹೇಗೆ?
ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಅರ್ಜಿಯನ್ನು ಭರ್ತಿ ಮಾಡಿ acoe.recruitment@ktkbank.com ಗೆ ಈ ಮೇಲ್ ಮಾಡಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಈ ಕೆಳಗೆ ನೀಡಲಾಗಿರುವ ಲಿಂಕ್ಗಳನ್ನು ಪರಿಶೀಲಿಸಿ.
Published On - 2:39 pm, Sat, 11 February 23