Karnataka High Court Recruitment 2022: ಕರ್ನಾಟಕ ಹೈಕೋರ್ಟ್​ನಲ್ಲಿ ಉದ್ಯೋಗವಕಾಶ: ತಿಂಗಳಿಗೆ 1 ಲಕ್ಷದವರೆಗೆ ಸಂಬಳ

| Updated By: ಝಾಹಿರ್ ಯೂಸುಫ್

Updated on: Mar 09, 2022 | 8:42 PM

Karnataka High Court Recruitment 2022: ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್​ನ ಅಧಿಕೃತ ವೆಬ್‌ಸೈಟ್ karnatakajudiciary.kar.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Karnataka High Court Recruitment 2022: ಕರ್ನಾಟಕ ಹೈಕೋರ್ಟ್​ನಲ್ಲಿ ಉದ್ಯೋಗವಕಾಶ: ತಿಂಗಳಿಗೆ 1 ಲಕ್ಷದವರೆಗೆ ಸಂಬಳ
Karnataka High Court Recruitment 2022
Follow us on

Karnataka High Court Recruitment 2022: ಸರ್ಕಾರಿ ನೌಕರಿಯನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ಹೈಕೋರ್ಟ್ ಸಹಾಯಕ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ 54 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್​ನ ಅಧಿಕೃತ ವೆಬ್‌ಸೈಟ್ karnatakajudiciary.kar.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Karnataka High Court Recruitment 2022: ಹುದ್ದೆಗಳ ವಿವರ:
ಸಹಾಯಕ ಕಾರ್ಯದರ್ಶಿ- 54 ಹುದ್ದೆಗಳು

Karnataka High Court Recruitment 2022: ವಿದ್ಯಾರ್ಹತೆ:
ಪಿಯುಸಿ/ ಪದವಿ , ಡಿಪ್ಲೊಮಾ ಅಥವಾ ಮಾನ್ಯತೆ ಪಡೆದ ಸಂಸ್ಥೆ / ಮಂಡಳಿಯಿಂದ ಸಮಾನ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Karnataka High Court Recruitment 2022: ವಯೋಮಿತಿ:
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷಗಳ ನಡುವೆ ಇರಬೇಕು. ಹಾಗೆಯೇ OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC ಮತ್ತು ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Karnataka High Court Recruitment 2022: ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗೆ 44,900 ರಿಂದ ರೂ 1,42,400 ರೂ.ವರೆಗೆ ವೇತನ ನೀಡಲಾಗುತ್ತದೆ.

Karnataka High Court Recruitment 2022: ಅರ್ಜಿ ಶುಲ್ಕ:
ಸಾಮಾನ್ಯ/ OBC ಅಭ್ಯರ್ಥಿಗಳಿಗೆ – ರೂ. 500/-
SC/ ST ಅಭ್ಯರ್ಥಿಗಳಿಗೆ – ರೂ. 250/-

Karnataka High Court Recruitment 2022: ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 7ನೇ ಏಪ್ರಿಲ್ 2022.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 12 ಏಪ್ರಿಲ್ 2022.

Karnataka High Court Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್​ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Karnataka High Court Recruitment 2022: 54 Assistant Secretary Posts)