KPSC Recruitment 2023: ಕರ್ನಾಟಕ ಲೋಕಸೇವಾ ಆಯೋಗದ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

| Updated By: ಝಾಹಿರ್ ಯೂಸುಫ್

Updated on: Jan 09, 2023 | 7:15 AM

KPSC Recruitment 2023: ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಹುದ್ದೆಗಳ ನೇಮಕಾತಿಯು 3 ವರ್ಷಗಳ ಗುತ್ತಿಗೆಯ ಆಧಾರದಲ್ಲಿ ನಡೆಯಲಿದೆ.

KPSC Recruitment 2023: ಕರ್ನಾಟಕ ಲೋಕಸೇವಾ ಆಯೋಗದ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
KPSC Recruitment 2023
Follow us on

KPSC Recruitment 2023: ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ವಿವಿಧ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಹುದ್ದೆಗಳ ನೇಮಕಾತಿಯು 3 ವರ್ಷಗಳ ಗುತ್ತಿಗೆಯ ಆಧಾರದಲ್ಲಿ ನಡೆಯಲಿದೆ. ಹೀಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್​ಸೈಟ್​ kpsc.kar.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು. ಈ ನೇಮಕಾತಿ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

ಹುದ್ದೆಗಳ ವಿವರ:

ಇದನ್ನೂ ಓದಿ
HAL Recruitment 2023: 10ನೇ ತರಗತಿ ಪಾಸಾದವರಿಗೆ HAL ನಲ್ಲಿದೆ ಉದ್ಯೋಗಾವಕಾಶ
BSNL Recruitment 2023: 11,705 ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 40 ಸಾವಿರ ರೂ.
NHAI Recruitment 2023: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ: 56 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
UPSC Recruitment 2023: ಕೇಂದ್ರ ಗುಪ್ತಚರ ಇಲಾಖೆಯಲ್ಲಿದೆ ಉದ್ಯೋಗಾವಕಾಶ
  • ಸೀನಿಯರ್ ಪ್ರೋಗ್ರಾಮರ್- 1 ಹುದ್ದೆ
  • ಜೂನಿಯರ್ ಪ್ರೋಗ್ರಾಮರ್- 1 ಹುದ್ದೆ
  • ಡಾಟಾ ಬೇಸ್ ಅಡ್ಮಿನ್- 1 ಹುದ್ದೆ
  • ನೆಟ್‌ವರ್ಕ್‌ ಅಡ್ಮಿನ್- 1 ಹುದ್ದೆ
  • ಒಟ್ಟು ಹುದ್ದೆಗಳ ಸಂಖ್ಯೆ- 04

ಅರ್ಹತಾ ಮಾನದಂಡಗಳು:

  • ಸೀನಿಯರ್ ಪ್ರೋಗ್ರಾಮರ್– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಿಎಸ್/ಸಿಎ/ಐಟಿ/ಮಾಹಿತಿ ತಂತ್ರಜ್ಞಾನ/ಎಲೆಕ್ಟ್ರಾನಿಕ್ಸ್‌ / ಕಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಮಾಡಿರಬೇಕು. ಇದರ ಜೊತೆಗೆ 5 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕಾಗುತ್ತದೆ.
  • ಜೂನಿಯರ್ ಪ್ರೋಗ್ರಾಮರ್– ಸಿಎಸ್/ಸಿಎ/ಐಟಿ/ ಮಾಹಿತಿ ತಂತ್ರಜ್ಞಾನ/ಎಲೆಕ್ಟ್ರಾನಿಕ್ಸ್‌/ಕಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಮಾಡಿರುವ ಅಭ್ಯರ್ಥಿಗಳು ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಜತೆಗೆ 3 ವರ್ಷಗಳ ಕಾರ್ಯಾನುಭವ ಹೊಂದಿರಬೇಕೆಂದು ತಿಳಿಸಲಾಗಿದೆ.
  • ಡಾಟಾ ಬೇಸ್ ಅಡ್ಮಿನ್– ಈ ಹುದ್ದೆಗಳಿಗೆ ಸಿಎಸ್/ಸಿಎ/ಐಟಿ/ಮಾಹಿತಿ ತಂತ್ರಜ್ಞಾನ/ಎಲೆಕ್ಟ್ರಾನಿಕ್ಸ್‌/ಕಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಮಾಡಿರುವ ಹಾಗೂ ಕನಿಷ್ಠ 3 ವರ್ಷಗಳ ಕಾರ್ಯಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ನೆಟ್‌ವರ್ಕ್‌ ಅಡ್ಮಿನ್- ಈ ಹುದ್ದೆಗಳಿಗೂ ಸಿಎಸ್/ಸಿಎ/ಐಟಿ/ಮಾಹಿತಿ ತಂತ್ರಜ್ಞಾನ/ಎಲೆಕ್ಟ್ರಾನಿಕ್ಸ್‌/ಕಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್‌ ಮಾಡಿರಲೇಬೇಕು. ಹಾಗೆಯೇ ಸಿಸಿಎನ್‌ಎ ಅಥವಾ ಎಂಸಿಎಸ್‌ಇ ಸರ್ಟಿಫಿಕೇಟ್ ಕೂಡ ಹೊಂದಿರಬೇಕಾಗುತ್ತದೆ.
  • ಈ ಎಲ್ಲಾ ವಿದ್ಯಾರ್ಹತೆಗಳ ಜೊತೆಗೆ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಕಿಲ್ ಟೆಸ್ಟ್‌ ಅನ್ನು ಸಹ ಪಾಸ್‌ ಮಾಡಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ 30 ಸಾವಿರದಿಂದ 60 ಸಾವಿರವರೆಗೆ ತಿಂಗಳ ಸಂಬಳ ಸಿಗಲಿದೆ.

ಇದನ್ನೂ ಓದಿ: Karnataka Bank Recruitment 2023: ಪದವೀಧರರಿಗೆ ಕರ್ನಾಟಕ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅರ್ಜಿಯನ್ನು ಡೌನ್​ಲೋಡ್ ಮಾಡಿ ಅಥವಾ ಖರೀದಿಸಿ ಆ ಬಳಿಕ ಸಂಪೂರ್ಣ ಮಾಹಿತಿಯೊಂದಿಗೆ, ಅಗತ್ತ ದಾಖಲೆ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:

ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ, ಕಾರ್ಯದರ್ಶಿಗಳು,

ಕರ್ನಾಟಕ ಲೋಕಸೇವಾ ಆಯೋಗ,

ಉದ್ಯೋಗ ಸೌಧ, ಬೆಂಗಳೂರು – 560001.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.