KSEDCL Recruitment 2023
KSEDCL Recruitment 2023: ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ನ (KSEDCL) ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆಯನ್ನು ವಿಸ್ತರಿಸಲಾಗಿದೆ. ಈ ಹಿಂದೆ ಜುಲೈ 22 ರಂದು ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಇದೀಗ ಜುಲೈ 31 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಸಹಾಯಕ, ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (KSEDCL)
- ಹುದ್ದೆಗಳ ಸಂಖ್ಯೆ: 26
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
- ಹುದ್ದೆಯ ಹೆಸರು: ಸಹಾಯಕ , ಸಹಾಯಕ ವ್ಯವಸ್ಥಾಪಕ
ಹುದ್ದೆಗಳ ವಿಭಾಗವಾರು ಮಾಹಿತಿ:
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) ಗ್ರೂಪ್-ಬಿ: 4 ಹುದ್ದೆಗಳು
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) ಗ್ರೂಪ್-ಬಿ: 2 ಹುದ್ದೆಗಳು
- ಖಾಸಗಿ ಕಾರ್ಯದರ್ಶಿ ಗ್ರೂಪ್-ಸಿ: 1 ಹುದ್ದೆ
- ಹಿರಿಯ ಸಹಾಯಕ (ತಾಂತ್ರಿಕ) ಗ್ರೂಪ್-ಸಿ: 4 ಹುದ್ದೆಗಳು
- ಹಿರಿಯ ಸಹಾಯಕ (ತಾಂತ್ರಿಕೇತರ) ಗ್ರೂಪ್-ಸಿ: 3 ಹುದ್ದೆಗಳು
- ಸಹಾಯಕ (ತಾಂತ್ರಿಕ) ಗ್ರೂಪ್-ಸಿ: 6 ಹುದ್ದೆಗಳು
- ಸಹಾಯಕ (ತಾಂತ್ರಿಕತೇರ) ಗ್ರೂಪ್-ಸಿ: 6 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
- ಸಹಾಯಕ ವ್ಯವಸ್ಥಾಪಕರು (ತಾಂತ್ರಿಕತೇರ): ಪದವಿ ಪೂರ್ಣಗೊಳಿಸಿರಬೇಕು.
- ಖಾಸಗಿ ಕಾರ್ಯದರ್ಶಿ – ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
- ಹಿರಿಯ ಸಹಾಯಕ (ತಾಂತ್ರಿಕ)- ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
- ಹಿರಿಯ ಸಹಾಯಕ (ತಾಂತ್ರಿಕೇತರ)- ಪದವಿ ಪೂರ್ಣಗೊಳಿಸಿರಬೇಕು
- ಸಹಾಯಕ (ತಾಂತ್ರಿಕ)- ಎಲೆಕ್ಟ್ರಾನಿಕ್ಸ್/CS/IT/ECE ನಲ್ಲಿ ಇಂಜಿನಿಯರಿಂಗ್ ಪದವಿ
- ಸಹಾಯಕ (ತಾಂತ್ರಿಕತೇರ)- ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು 18 ವರ್ಷಗಳಿಂದ 33 ವರ್ಷಗಳ ನಡುವೆ ಇರಬೇಕು.
ವಯೋಮಿತಿ ಸಡಿಲಿಕೆ:
- SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು
- Cat-2A/2B/3A & 3B ಅಭ್ಯರ್ಥಿಗಳಿಗೆ: 02 ವರ್ಷಗಳು
ಅರ್ಜಿ ಶುಲ್ಕ:
- PWD & Ex-Servicemen ಅಭ್ಯರ್ಥಿಗಳು: ರೂ.250/-
- SC/ST ಮತ್ತು Cat-I ಅಭ್ಯರ್ಥಿಗಳು: ರೂ.750/-
- ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳು: ರೂ.1000/-
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-ಜುಲೈ-2023
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: keonics.in