KPSC Recruitment 2022: ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Mar 24, 2022 | 4:57 PM

KPSC Recruitment 2022: ಈ ಹುದ್ದೆಗಳಿಗೆ 31-10-2021 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿರುತ್ತದೆ. ಇದೀಗ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.

KPSC Recruitment 2022: ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಕರ್ನಾಟಕ ಲೋಕ ಸೇವಾ ಆಯೋಗದ ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ 2019-20 ಸಾಲಿನ 16 ಗ್ರೂಪ್ -ಎ ಹುದ್ದೆಗಳ ಮುಖ್ಯ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 16 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗದ ಅಧಿಕೃತ ವೆಬ್​ಸೈಟ್ kpsc.kar.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ 31-10-2021 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿರುತ್ತದೆ. ಇದೀಗ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಈ ಪರೀಕ್ಷಾ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆ:
ಆನ್​ಲೈನ್​ನಲ್ಲಿ ಅರ್ಜಿ ಭರ್ತಿ ಮಾಡುವ ಪ್ರಾರಂಭದ ದಿನಾಂಕ: 30-4-2022
ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-4-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18-4-2022

ಮುಖ್ಯ ಪರೀಕ್ಷಾ ವಿವರಗಳು ಈ ಕೆಳಗಿನಂತಿವೆ:
ಲಿಖಿತ ಪರೀಕ್ಷೆ:- ಕನ್ನಡ ಮತ್ತು ಇಂಗ್ಲಿಷ್
ಐಚ್ಛಿಕ ಪತ್ರಿಕೆಗಳು:- ಫಾರೆಸ್ಟ್ರಿ ಪತ್ರಿಕೆ- 1, ಫಾರೆಸ್ಟ್ರಿ ಪತ್ರಿಕೆ- 2 (ಬಿಎಸ್ಸಿ- ಫಾರೆಸ್ಟ್ರಿ) ಅಥವಾ ಸಸ್ಯಶಾಸ್ತ್ರ, ಪಾಣಿಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ (ಇವುಗಳಲ್ಲಿ ಎರಡನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ)

ಭಾಷಾ ಪರೀಕ್ಷೆಗಳನ್ನು ಹೊರತುಪಡಿಸಿ, ಶಾರೀರಿಕ ದಾರ್ಢ್ಯತೆ, ವ್ಯಕ್ತಿತ್ವ ಪರೀಕ್ಷೆಗಳೂ ಕೂಡ ಇರಲಿದೆ.

ಪರೀಕ್ಷಾ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 300 ರೂ.
ಇತರೆ ಅಭ್ಯರ್ಥಿಗಳಿಗೆ- 500 ರೂ.

ಮುಖ್ಯ ಪರೀಕ್ಷಾ ದಿನಾಂಕ: 5-5- 2022

ಕರ್ನಾಟಕ ಲೋಕ ಸೇವಾ ಆಯೋಗದ ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ 2019-20 ಸಾಲಿನ 16 ಗ್ರೂಪ್ -ಎ ಹುದ್ದೆಗಳ ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

Published On - 4:53 pm, Thu, 24 March 22