ಎನ್ಟಿಪಿಸಿ (NTPC) ಲಿಮಿಟೆಡ್ ಎಕ್ಸಿಕ್ಯೂಟಿವ್ (Executive) ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ (Senior Executive) ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆ ಡಿಸೆಂಬರ್ 8, 2021ರಂದು ಕೊನೆಗೊಳ್ಳಲಿದೆ. ಅರ್ಹ ಅಭ್ಯರ್ಥಿಗಳು NTPC ಯ ಅಧಿಕೃತ ಸೈಟ್ ntpc.co.in ಮೂಲಕ ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನವೆಂಬರ್ 24, 2021 ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಈ ನೇಮಕಾತಿಯು ಸಂಸ್ಥೆಯಲ್ಲಿನ 3 ಹುದ್ದೆಗಳನ್ನು ಭರ್ತಿ ಮಾಡುತ್ತದೆ.
ಅರ್ಹತೆ ಏನು?
ಹಿರಿಯ ಕಾರ್ಯನಿರ್ವಾಹಕ (Sr. Executive): ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಂವಹನ / ಜಾಹೀರಾತು ಮತ್ತು ಸಂವಹನ ನಿರ್ವಹಣೆ / ಸಾರ್ವಜನಿಕ ಸಂಪರ್ಕ / ಸಮೂಹ ಸಂವಹನ / ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ. ಗರಿಷ್ಠ ವಯಸ್ಸಿನ ಮಿತಿ 55 ವರ್ಷಗಳಾಗಿರಬೇಕು.
ಕಾರ್ಯನಿರ್ವಾಹಕ (Executive): ಕನಿಷ್ಠ 60 ಶೇಕಡಾ ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ CS / IT ಅಥವಾ MCA ನಲ್ಲಿ BE / B.Tech. ಗರಿಷ್ಠ ವಯಸ್ಸಿನ ಮಿತಿ 35 ವರ್ಷ.
ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸಿ
NTPC ಯ ಅಧಿಕೃತ ಸೈಟ್ ntpc.co.in ಭೇಟಿ ನೀಡಿ.
ಮುಖಪುಟದಲ್ಲಿ ಲಭ್ಯವಿರುವ ಉದ್ಯೋಗಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹೊಸ ಪುಟ ತೆರೆಯುತ್ತದೆ. ಅಲ್ಲಿ ಅಭ್ಯರ್ಥಿಗಳು ಜಾಹೀರಾತು ವಿವರಗಳ ಅಡಿಯಲ್ಲಿ Apply ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಫಂಕ್ಷನಲ್ ಏರಿಯಾ ಆಯ್ಕೆ ಮಾಡಿ ಮತ್ತು Submit ಮಾಡಿ
ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಒಮ್ಮೆ ಮಾಡಿದ ನಂತರ, Submit ಕ್ಲಿಕ್ ಮಾಡಿ.
ನಿಮ್ಮ ಅರ್ಜಿಯನ್ನು ಸಲ್ಲಿಸಲಾಗಿದೆ.
ಸಾಮಾನ್ಯ / OBC / EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ₹ 300 / – ಮರುಪಾವತಿಸಲಾಗದ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. SC / ST / PwBD / XSM ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕದ ಪಾವತಿಯಿಂದ ವಿನಾಯಿತಿ ಪಡೆದಿರುತ್ತಾರೆ.
ಇದನ್ನೂ ಓದಿ: Self Employment Tips: ಈ ಕೌಶಲಗಳು ನಿಮ್ಮಲ್ಲಿದ್ದರೆ ನಿಮಗೆ ನೀವೇ ಬಾಸ್!