Oil India Recruitment 2022: ಆಯಿಲ್ ಇಂಡಿಯಾದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Mar 08, 2022 | 9:25 PM

OIL Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಆಯಿಲ್​ನ ಅಧಿಕೃತ ವೆಬ್‌ಸೈಟ್‌  oil-india.com ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Oil India Recruitment 2022: ಆಯಿಲ್ ಇಂಡಿಯಾದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Oil India Recruitment 2022
Follow us on

ಭಾರತ ಸರ್ಕಾರದ ಅಧೀನದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ ( Oil India Recruitment 2022 )ನ ಗ್ರೇಡ್ ಬಿ ಮತ್ತು ಗ್ರೇಡ್ ಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಆಯಿಲ್​ನ ಅಧಿಕೃತ ವೆಬ್‌ಸೈಟ್‌  oil-india.com ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಮುಂತಾದ ನೇಮಕಾತಿಯ ಪ್ರಮುಖ ಮಾಹಿತಿಯನ್ನು ಕೆಳಗಿನಂತಿವೆ.

Oil India Recruitment 2022 ಹುದ್ದೆಯ ವಿವರಗಳು:
ಒಟ್ಟು ಹುದ್ದೆಗಳು- 55
ಮ್ಯಾನೇಜರ್ (ERP-HR) – 1 ಹುದ್ದೆ,
ಸೂಪರಿಂಟೆಂಡಿಂಗ್ ಇಂಜಿನಿಯರ್ (ಪರಿಸರ) – 2 ಹುದ್ದೆಗಳು
ಹಿರಿಯ ಅಧಿಕಾರಿ (ಇನ್‌ಸ್ಟ್ರುಮೆಂಟೇಶನ್) – 6 ಹುದ್ದೆಗಳು
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ರೇಡಿಯಾಲಜಿ) – 1 ಹುದ್ದೆ
ಸೂಪರಿಂಟೆಂಡಿಂಗ್ ಮೆಡಿಕಲ್ ಆಫೀಸರ್ (ಪೀಡಿಯಾಟ್ರಿಕ್ಸ್) – 1 ಹುದ್ದೆ
ಹಿರಿಯ ವೈದ್ಯಕೀಯ ಅಧಿಕಾರಿ – 1 ಹುದ್ದೆ
ಹಿರಿಯ ಸೆಕ್ಯುರಿಟಿ ಆಫೀಸರ್ – 1 ಹುದ್ದೆ
ಹಿರಿಯ ಅಧಿಕಾರಿ (ಸಿವಿಲ್) – 2 ಹುದ್ದೆಗಳು
ಹಿರಿಯ ಅಧಿಕಾರಿ (ಎಲೆಕ್ಟ್ರಿಕಲ್) – 8 ಹುದ್ದೆಗಳು
ಹಿರಿಯ ಅಧಿಕಾರಿ (ಮೆಕ್ಯಾನಿಕಲ್) – 20 ಹುದ್ದೆಗಳು
ಹಿರಿಯ ಅಧಿಕಾರಿ (ಸಾರ್ವಜನಿಕ-ವ್ಯವಹಾರಗಳು) – 4 ಹುದ್ದೆಗಳು
ಹಿರಿಯ ಅಕೌಂಟ್ಸ್ ಆಫೀಸರ್ ಅಥವಾ ಸೀನಿಯರ್ ಆಂತರಿಕ ಲೆಕ್ಕ ಪರಿಶೋಧಕರು – 5 ಹುದ್ದೆಗಳು
ಹಿರಿಯ ಅಧಿಕಾರಿ (ಎಚ್‌ಆರ್) – 3 ಹುದ್ದೆಗಳು

Oil India Recruitment 2022 ಶೈಕ್ಷಣಿಕ ವಿದ್ಯಾರ್ಹತೆ:
ಮ್ಯಾನೇಜರ್ (ERP-HR): ಅಭ್ಯರ್ಥಿಗಳು ಕನಿಷ್ಠ 65 ಶೇಕಡಾ ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು.
ಹಿರಿಯ ಅಧಿಕಾರಿ (ಮೆಕ್ಯಾನಿಕಲ್): ಅಭ್ಯರ್ಥಿಗಳು ಕನಿಷ್ಠ 65% ಅಂಕಗಳೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ಹಿರಿಯ ಅಧಿಕಾರಿ (ಸಾರ್ವಜನಿಕ ವ್ಯವಹಾರಗಳು): ಅಭ್ಯರ್ಥಿಗಳು ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಪರ್ಕ ಅಥವಾ ಸಮಾಜ ಕಾರ್ಯ ಅಥವಾ ಗ್ರಾಮೀಣ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ಸೀನಿಯರ್ ಅಕೌಂಟ್ಸ್ ಆಫೀಸರ್ ಅಥವಾ ಸೀನಿಯರ್ ಆಂತರಿಕ ಅಧಿಕಾರಿ: ಅಭ್ಯರ್ಥಿಯು ICAI/ICMAI ನ ಸಹಾಯಕ ಸದಸ್ಯರಾಗಿರಬೇಕು.
ಹಿರಿಯ ವೈದ್ಯಕೀಯ ಅಧಿಕಾರಿ: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು/ವಿಶ್ವವಿದ್ಯಾಲಯದಿಂದ MBBS ಪಡೆದಿರಬೇಕು. ಜೊತೆಗೆ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
ಹಿರಿಯ ಭದ್ರತಾ ಅಧಿಕಾರಿ: ಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.

Oil India Recruitment 2022 ಆಯ್ಕೆ ಪ್ರಕ್ರಿಯೆ:
ಅರ್ಹ ಅಥವಾ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಗುಂಪು ಚರ್ಚೆ (GD) ಅಥವಾ ಗುಂಪು ಟಾಸ್ಕ್ (GT) ಮತ್ತು ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

Oil India Recruitment 2022 ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 15, 2022

Oil India Recruitment 2022 ವೇತನ?
ಆಯಾ ಹುದ್ದೆಗಳಿಗೆ ತಕ್ಕಂತೆ 60 ಸಾವಿರದಿಂದ 2.20 ಲಕ್ಷದವರೆಗೆ ವೇತನ ನಿಗದಿಪಡಿಸಲಾಗುತ್ತದೆ.

Oil India Recruitment 2022 ಅರ್ಜಿ ಸಲ್ಲಿಸುವುದು ಹೇಗೆ?
ಈ ಲಿಂಕ್​ ಅನ್ನು ಕ್ಲಿನ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(OIL Recruitment 2022: Apply for 55 vacancies)