SBI Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಕ್ಲರ್ಕ್ ಉದ್ಯೋಗಕ್ಕೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆಯನ್ನು ಮೇ 20, 2021ಕ್ಕೆ ಕೊನೆಗೊಳಿಸಲಿದೆ. ಯಾರು ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗೆ ಅರ್ಜಿ ಹಾಕಲು ಬಯಸುತ್ತೀರೋ ಅಂಥವರು ಎಸ್ಬಿಐ ಬ್ಯಾಂಕ್ನ ಅಧಿಕೃತ ವೆಬ್ಸೈಟ್ sbi.co.inನಲ್ಲಿ ಅರ್ಜಿ ಸಲ್ಲಿಸಬಹುದು. 5237 ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಲು ನೇರವಾದ ಲಿಂಕ್ ಈ ಲೇಖನದಲ್ಲಿ ನೀಡಲಾಗಿದೆ.
ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರ್ತಿ ಮಾಡಿದರಷ್ಟೇ ಪರೀಕ್ಷೆಗೆ ಅರ್ಜಿ ಹಾಕಿಕೊಳ್ಳಲು ಸಾಧ್ಯ. ಅಭ್ಯರ್ಥಿ ನೋಂದಣಿ ಮಾಡಿದ ನಂತರ ಹಾಗೂ ಅರ್ಜಿ ಶುಲ್ಕ/ಸೂಚನಾ ದರವನ್ನು ಆನ್ಲೈನ್ನಲ್ಲಿ ಪಾವತಿಸಿದ ಮೇಲಷ್ಟೇ ಆನ್ಲೈನ್ನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣವಾಗುತ್ತದೆ.
ಅರ್ಜಿ ಹಾಕುವುದು ಹೇಗೆ?
ಹಂತ 1: ಎಸ್ಬಿಐ ಅಧಿಕೃತ ವೆಬ್ಸೈಟ್ ಆದ sbi.co.inಗೆ ಭೇಟಿ ನೀಡಿ.
ಹಂತ 2: ಹೋಮ್ ಪೇಜ್ನಲ್ಲಿ ಸಿಗುವ SBI Clerk Recruitment 2021 ಮೇಲೆ ಕ್ಲಿಕ್ ಮಾಡಿ.
ಹಂತ 3: ಹೊಸ ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ಲಾಗ್ ಇನ್ ಮಾಹಿತಿಯನ್ನು ನಮೂದಿಸಬೇಕು
ಹಂತ 4: ಒಂದು ಸಲ ಎಲ್ಲವೂ ಪೂರ್ತಿಯಾದ ಮೇಲೆ Submit ಎಂಬುದರ ಮೇಲೆ ಕ್ಲಿಕ್ ಮಾಡಿ, ಆ ನಂತರ ಸೂಚಿಸುವಂಥ ನೋಂದಣಿ ಪ್ರಕ್ರಿಯೆ ಅನುಸರಿಸಿ.
ಹಂತ 5: ಅರ್ಜಿ ಶುಲ್ಕದ ಪಾವತಿಯನ್ನು ಮಾಡಿ.
ಹಂತ 6: ಅಗತ್ಯ ದಾಖಲಾತಿಗಳ ಸ್ಕ್ಯಾನ್ ಕಾಪಿಯನ್ನು ಅಪ್ಲೋಡ್ ಮಾಡಿ, submit ಎಂಬುದರ ಮೇಲೆ ಕ್ಲಿಕ್ ಮಾಡಿ.
ಹಂತ 7: ನಿಮ್ಮ ನೋಂದಣಿ ಆಗಿದೆ ಎಂಬ ಮಾಹಿತಿ ಸಿಗುತ್ತದೆ
ಹಂತ 8: ಖಾತ್ರಿಯಾದ ಪೇಜ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಬೇಕಿದ್ದಲ್ಲಿ ಅದರ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.
ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಮೊದಲಿಗೆ ಪ್ರಾಥಮಿಕ ಮತ್ತು ಮುಖ್ಯಪರೀಕ್ಷೆ ಆನ್ಲೈನ್ನಲ್ಲಿ ನಡೆಯುತ್ತದೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ಇರುತ್ತದೆ. ಅಭ್ಯರ್ಥಿಯು ಯಾವುದಾದರೂ ಒಂದು ರಾಜ್ಯದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆನ್ನಲ್ಲಿ ನಡೆಯುವ ಪ್ರಾಥಮಿಕ ಪರೀಕ್ಷೆಯು 100 ಅಂಕಗಳ ಆಬ್ಜೆಕ್ಟಿವ್ ಪರೀಕ್ಷೆಯಾಗಿರುತ್ತದೆ. ಒಂದು ಗಂಟೆಯ ಸಮಯಾವಕಾಶ ಇರುತ್ತದೆ. ಇಂಗ್ಲಿಷ್- 30 ಪ್ರಶ್ನೆಗಳು, ನ್ಯೂಮರಿಕಲ್ ಎಬಿಲಿಟಿ ಮತ್ತು ರೀಸನಿಂಗ್ ಎಬಿಲಿಟಿ ತಲಾ 35 ಪ್ರಶ್ನೆಗಳಿರುತ್ತವೆ. ಹೀಗೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ಇರುತ್ತದೆ.
ಹುದ್ದೆಗೆ ಅರ್ಹತೆ
ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ವಯೋಮಿತಿ 20ರಿಂದ 28ರೊಳಗಿರಬೇಕು. ಮೀಸಲಾತಿ ಇರುವ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ಇದೆ. ಏಪ್ರಿಲ್ 1, 2021ಕ್ಕೆ ಅನ್ವಯ ಆಗುವಂತೆ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಶುಲ್ಕ ಎಷ್ಟು?
750 ರೂಪಾಯಿ ಶುಲ್ಕವು ಅನ್ವಯ ಆಗುತ್ತದೆ. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ.
ವೇತನ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 17,900ರಿಂದ ರೂ. 47,920 ಸ್ಕೇಲ್ ದೊರೆಯುತ್ತದೆ. ಆರಂಭಿಕ ಮೂಲವೇತನ (ಬೇಸಿಕ್ ಪೇ) ರೂ. 19,900. ಅಭ್ಯರ್ಥಿಗಳಿಗೆ ರೂ. 17,900 ಹಾಗೂ ಜತೆಗೆ ಎರಡು ಅಡ್ವಾನ್ಸ್ ಇನ್ಕ್ರಿಮೆಂಟ್ ದೊರೆಯುತ್ತದೆ. ಒಟ್ಟಾರೆಯಾಗಿ ಕ್ಲರಿಕಲ್ ಹಂತದ ಸಿಬ್ಬಂದಿಗೆ ಮುಂಬೈನಂಥ ಮೆಟ್ರೋ ನಗರದಲ್ಲಿ ತಿಂಗಳಿಗೆ ರೂ. 29,000 ದೊರೆಯುತ್ತದೆ.
ಇದನ್ನೂ ಓದಿ: SBI KYC: ಆನ್ಲೈನ್ನಲ್ಲಿ ಎಸ್ಬಿಐ ಕೆವೈಸಿ ಅಪ್ಡೇಟ್ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?
(SBI call for 5237 posts Junior Associate (JA). Today (May 20, 2021) is the last date to complete registration process. Know how to apply)