UCIL Recruitment 2022: ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (UCIL) ನಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. UCIL ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಹೀಗಾಗಿ ಇಂದು ಅಥವಾ ನಾಳೆಯೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲಿ ಒಟ್ಟು 130 ಅಪ್ರೆಂಟಿಸ್ ಹುದ್ದೆಗಳು ಖಾಲಿಯಿದ್ದು, ಇದರ ಅಡಿಯಲ್ಲಿ ಮೈನಿಂಗ್ ಮೇಟ್, ಬ್ಲಾಸ್ಟರ್ ಮತ್ತು ವೈಂಡಿಂಗ್ ಎಂಜಿನ್ ಡ್ರೈವರ್ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಮೈನಿಂಗ್ ಹುದ್ದೆಗೆ ಅಪ್ರೆಂಟಿಸ್‌ಶಿಪ್ 3 ವರ್ಷ ಇರಲಿದ್ದು, ಬ್ಲಾಸ್ಟರ್ ಮತ್ತು ವಿಂಡಿಂಗ್ ಎಂಜಿನ್ ಡ್ರೈವರ್ ಹುದ್ದೆಗೆ ಅಪ್ರೆಂಟಿಸ್‌ಶಿಪ್ ತರಬೇತಿ 2 ವರ್ಷಗಳದ್ದಾಗಿರುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಯ ವಿವರಗಳು:
ಮೈನಿಂಗ್ ಮೇಟ್ – 80 ಹುದ್ದೆಗಳು
ಬ್ಲಾಸ್ಟರ್ – 20 ಹುದ್ದೆಗಳು
ವೈಂಡಿಂಗ್ ಎಂಜಿನ್ ಡ್ರೈವರ್ – 30 ಹುದ್ದೆಗಳು
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷಗಳು.
ಶೈಕ್ಷಣಿಕ ಅರ್ಹತೆ:
ಮೈನಿಂಗ್ ಮೇಟ್- 12ನೇ ತರಗತಿ ಪಾಸ್ ಆಗಿರಬೇಕು.
ಬ್ಲಾಸ್ಟರ್ – 10ನೇ ತರಗತಿ ಪಾಸ್ ಆಗಿರಬೇಕು.
ವಿಂಡಿಂಗ್ ಎಂಜಿನ್ ಡ್ರೈವರ್ – 10ನೇ ತರಗತಿ ಪಾಸ್ ಆಗಿರಬೇಕು.
ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.