ಆರಾಧ್ಯಾ ಶಾಲೆಗೆ ಒಟ್ಟಾಗಿ ತೆರಳಿದ ಅಭಿಷೇಕ್-ಐಶ್ವರ್ಯಾ; ಪತ್ನಿ ಬಗ್ಗೆ ಇರೋ ಕಾಳಜಿ ನೋಡಿ

|

Updated on: Dec 20, 2024 | 11:57 AM

ಇತ್ತೀಚೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಗಳು ಹಬ್ಬಿದ್ದವು. ಆದರೆ, ಇತ್ತೀಚೆಗೆ ಅವರು ತಮ್ಮ ಮಗಳು ಆರಾಧ್ಯಳ ಶಾಲಾ ಕಾರ್ಯಕ್ರಮಕ್ಕೆ ಒಟ್ಟಾಗಿ ಹಾಜರಾಗಿದ್ದು, ಈ ವದಂತಿಗಳಿಗೆ ತೆರೆ ಎಳೆದಿದೆ. ಅಮಿತಾಭ್ ಬಚ್ಚನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆರಾಧ್ಯಾ ಶಾಲೆಗೆ ಒಟ್ಟಾಗಿ ತೆರಳಿದ ಅಭಿಷೇಕ್-ಐಶ್ವರ್ಯಾ; ಪತ್ನಿ ಬಗ್ಗೆ ಇರೋ ಕಾಳಜಿ ನೋಡಿ
ಅಭಿಷೇಕ್ ಕುಟುಂಬ
Follow us on

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವದಂತಿ ಇತ್ತೀಚೆಗೆ ಜೋರಾಗಿತ್ತು. ಆದರೆ, ಈ ದಂಪತಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಮಾಧ್ಯಮಗಳ ಬಾಯಿ ಮುಚ್ಚಿಸಲು ಈ ರೀತಿ ಮಾಡಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ಆ ರೀತಿ ಅಲ್ಲ. ಇತ್ತೀಚೆಗೆ ಆರಾಧ್ಯಳ ಶಾಲಾ ಕಾರ್ಯಕ್ರಮಕ್ಕೆ ಐಶ್ವರ್ಯಾ, ಅಭಿಷೇಕ್ ಒಟ್ಟಾಗಿ ಬಂದಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಈ ಸಂದರ್ಭದಲ್ಲಿ ಇದ್ದರು.

ಐಶ್ವರ್ಯಾ ಹಾಗೂ ಅಭಿಷೇಕ್ ಮಧ್ಯೆ ಎಲ್ಲವೂ ಸರಿ ಇದೆ ಎಂದು ಕುಟುಂಬದವರು ಹೇಳುತ್ತಲೇ ಬರುತ್ತಿದ್ದರು. ಆದರೆ, ಆ ರೀತಿ ಇಲ್ಲ ಎಂಬ ವಿಚಾರ ಪದೇ ಪದೇ ಸ್ಪಷ್ಟವಾಗಿತ್ತು. ಆದರೆ, ಈಗ ಎಲ್ಲದಕ್ಕೂ ಫುಲ್​ಸ್ಟಾಪ್ ಬಿದ್ದಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂಬುದು ಸಾಬೀತಾಗಿದೆ.

ಆರಾಧ್ಯಾ ಮುಂಬೈನ ‘ಧೀರುಭಾಯ್ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್​’ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದರ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಮಗಳ ಶಾಲೆಗೆ ಅಭಿಷೇಕ್ ಹಾಗೂ ಐಶ್ವರ್ಯಾ ದಂಪತಿ ಅಮಿತಾಭ್ ಜೊತೆ ಬಂದಿದ್ದಾರೆ. ಇಬ್ಬರೂ ಸುಂದರವಾಗಿ ಕಾಣಿಸುತ್ತಿದ್ದರು. ಈ ವೇಳೆ ಐಶ್ವರ್ಯಾ ಅವರನ್ನು ಅಭಿಷೇಕ್ ಕೇರ್ ಮಾಡುತ್ತಿದ್ದರು. ಇದು ಅನೇಕರಿಗೆ ಇಷ್ಟ ಆಗಿದೆ. ಇಬ್ಬರೂ ನಗುತ್ತಾ ಸಾಗುತ್ತಿರುವ ವಿಡಿಯೋನ ಪಾಪರಾಜಿಗಳು ಸೆರೆಹಿಡಿದಿದ್ದಾರೆ.

‘ಅಭಿಷೇಕ್ ಎಷ್ಟು ಪ್ರೀತಿ ಮಾಡುತ್ತಾರೆ ನೋಡಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ನಿಮ್ಮಿಬ್ಬರನ್ನು ಒಟ್ಟಾಗಿ ನೋಡಲು ಎಷ್ಟು ಖುಷಿ ಆಗುತ್ತಿದೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಅಂಬಾನಿ ಮನೆ ಮದುವೆಯಲ್ಲಿ ಇಬ್ಬರೂ ಬೇರೆ ಬೇರೆ ಬಂದಿದ್ದಕ್ಕೆ ವಿಚ್ಛೇದನ ವದಂತಿ ಹುಟ್ಟಿತ್ತು. ಈಗ ಅಂಬಾನಿ ಒಡೆತನದ ಶಾಲೆಗೆ ಒಟ್ಟಾಗಿ ಬರುವ ಮೂಲಕ ಈ ವದಂತಿಗಳಿಗೆ ಅವರು ಬ್ರೇಕ್ ಹಾಕಿದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ: 40 ಕೋಟಿ ರೂ. ಬಜೆಟ್ ಸಿನಿಮಾ ಗಳಿಸಿದ್ದು 13 ಲಕ್ಷ; ಸಂಕಷ್ಟದಲ್ಲಿ ಅಭಿಷೇಕ್ ಬಚ್ಚನ್ ಕರಿಯರ್

ಈ ಮೊದಲು ಐಶ್ವರ್ಯಾ ರೈಗೆ ಅಭಿಷೇಕ್ ಧನ್ಯವಾದ ಹೇಳಿದ್ದರು. ಮಗಳನ್ನು ಬೆಳೆಸಲು ಅವರು ತೋರಿಸುತ್ತಿರುವ ಕಾಳಜಿಗೆ ಅಭಿಷೇಕ್ ಖುಷಿಪಟ್ಟಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.