bಕೊವಿಡ್ ಹೆಚ್ಚುತ್ತಿರುವುದಕ್ಕೆ ದೇಶದ ಬಹುತೇಕ ಕಡೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಇನ್ನು, ಚಿತ್ರಮಂದಿರಗಳು ಮುಚ್ಚಿದ್ದು, ಸಿನಿಮಾ ಹಾಗೂ ಧಾರಾವಾಹಿ ಶೂಟಿಂಗ್ ಕೂಡ ನಿಲ್ಲಿಸಲಾಗಿದೆ. ಹೀಗಾಗಿ ಅನೇಕ ಧಾರಾವಾಹಿಗಳಿಗೆ ಅರ್ಧಕ್ಕೆ ನಿಲ್ಲುವ ಭಯ ಕಾಡಿದೆ. ಈಗ ಹಿಂದಿಯ ಜನಪ್ರಿಯ ಧಾರಾವಾಹಿ ‘ಶಾದಿ ಮುಬಾರಕ್’ ಅರ್ಧಕ್ಕೆ ನಿಂತಿದೆ.
‘ಶಾದಿ ಮುಬಾರಕ್’ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸುವ ಬಗ್ಗೆ ಸ್ಟಾರ್ ಪ್ಲಸ್ ನಿರ್ಧಾರ ಕೈಗೊಂಡಿದೆ. ಧಾರಾವಾಹಿಯ ಮುಖ್ಯಪಾತ್ರಧಾರಿ ಮಾನವ್ ಗೋಹಿಲ್ಗೆ ಕೊವಿಡ್-19 ಪಾಸಿಟಿವ್ ಬಂದಿತ್ತು. ಹೀಗಾಗಿ, ಅವರು ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳಲು ಸಮಯ ಬೇಕು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸರ್ಕಾರ ಅನುಮತಿ ನೀಡಿದರೂ ಶೂಟಿಂಗ್ ಅರಂಭವಾಗೋದು ಅನುಮಾನವೇ.
ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಇರುವುದರಿಂದ ಸಿನಿಮಾ ಶೂಟಿಂಗ್ ಬೇರೆಡೆ ಶಿಫ್ಟ್ ಮಾಡೋಣ ಎಂದರೆ ಅದೂ ಅಸಾಧ್ಯವೇ. ಹೀಗಾಗಿ, ವಾಹಿನಿಯವರು ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿರ್ಧಾರದ ಬಗ್ಗೆ ಪಾತ್ರ ವರ್ಗದವರಿಗೆ ಈಗಾಗಲೇ ಸಂದೇಶ ರವಾನೆ ಆಗಿದೆ.
ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಕನ್ನಡದ ಅನೇಕ ಧಾರಾವಾಹಿಗಳು ಅರ್ಧಕ್ಕೆ ನಿಂತಿದ್ದವು. ಹಿಂದಿಯಲ್ಲೂ ಕೂಡ ಸಾಕಷ್ಟು ಧಾರಾವಾಹಿಗಳು ಅರ್ಧಕ್ಕೆ ನಿಲ್ಲಲ್ಪಟ್ಟಿವೆ. ಈಗ ಎರಡನೇ ಅಲೆ ಕಾಣಿಸಿಕೊಂಡಿದ್ದು ಮತ್ತೆ ಶೂಟಿಂಗ್ ಸ್ಥಗಿತವಾಗಿದೆ. ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಣೆ ಆಗಿದೆ. ಹೀಗಾಗಿ, ಕನ್ನಡದ ಸಾಕಷ್ಟು ಧಾರಾವಾಹಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿವೆ. ಇನ್ನೂ ಕೆಲ ಧಾರಾವಾಹಿಗಳು ಅರ್ಧಕ್ಕೆ ನಿಲ್ಲಲ್ಲಿವೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ.
ಇದನ್ನೂ ಓದಿ: Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಫೇಸ್ಬುಕ್ ಹ್ಯಾಕ್; ಯಾರ ಮೇಲಿದೆ ಅನುಮಾನ?
ಟಿ.ಎನ್. ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್ ಫಿಕ್ಸ್; ಮೇಧಾ ವಿದ್ಯಾಭೂಷಣ ನಾಯಕಿ!