ಬಾಲಿವುಡ್​ ಮಂದಿಗೆ ಬಂಗಲೆ ಖರೀದಿಸೋ ಕ್ರೇಜ್​; 60 ಕೋಟಿ ಕೊಟ್ಟು ಅಜಯ್​ ದೇವಗನ್​ ಮನೆ ಖರೀದಿ

ಕಾಜಲ್​ ಹಾಗೂ ಅಜಯ್​ ದೇವಗನ್​ ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದರು. ಕಳೆದ ಒಂದು ವರ್ಷದಿಂದ ಹುಡುಕಿದರೂ ಅವರಿಗೆ ಒಳ್ಳೆಯ ಮನೆ ಸಿಕ್ಕಿರಲಿಲ್ಲ

ಬಾಲಿವುಡ್​ ಮಂದಿಗೆ ಬಂಗಲೆ ಖರೀದಿಸೋ ಕ್ರೇಜ್​; 60 ಕೋಟಿ ಕೊಟ್ಟು ಅಜಯ್​ ದೇವಗನ್​ ಮನೆ ಖರೀದಿ
ಅಜಯ್​ -ಕಾಜೋಲ್​
Edited By:

Updated on: May 31, 2021 | 3:37 PM

ಕೊವಿಡ್​ ಲಾಕ್​ಡೌನ್​ ಮಧ್ಯೆ ಸಿನಿಮಾ ಶೂಟಿಂಗ್​ ಇಲ್ಲದೇ ಅನೇಕ ಸೆಲೆಬ್ರಿಟಿಗಳು ಮನೆಯಲ್ಲೇ ಕುಳಿತಿದ್ದಾರೆ. ಕೆಲ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು, ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಈ ಮಧ್ಯೆ ಅನೇಕ ಸೆಲೆಬ್ರಿಟಿಗಳಿಗೆ ಮನೆ ಖರೀದಿಸುವ ಕ್ರೇಜ್​ ಜೋರಾಗಿದೆ. ಈ ಮೊದಲು ಅಮಿತಾಭ್​ ಬಚ್ಚನ್​ ಹಾಗೂ ಅರ್ಜುನ್​ ಕಪೂರ್​ ದುಬಾರಿ ಬೆಲೆಯ ಮನೆ ಖರೀದಿಸಿದ್ದರು. ಈ ಬಾರಿ ಅಜಯ್​ ದೇವಗನ್​ ಅವರ ಸರದಿ. ಬರೋಬ್ಬರಿ 60 ಕೋಟಿ ರೂಪಾಯಿ ನೀಡಿ ಬಂಗಲೆ ಒಂದನ್ನು ಕೊಂಡುಕೊಂಡಿದ್ದಾರೆ.

ಕಾಜಲ್​ ಹಾಗೂ ಅಜಯ್​ ದೇವಗನ್​ ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದರು. ಕಳೆದ ಒಂದು ವರ್ಷದಿಂದ ಹುಡುಕಿದರೂ ಅವರಿಗೆ ಒಳ್ಳೆಯ ಮನೆ ಸಿಕ್ಕಿರಲಿಲ್ಲ. ಆದರೆ, ಈಗ ಅವರು ಮುಂಬೈನಲ್ಲಿ ಹೊಸ ಬಂಗಲೆ ಖರೀದಿ ಮಾಡಿದ್ದಾರೆ. ಇದು 590 ಚದರ ಅಡಿ ಇದ್ದು, ಐಷಾರಾಮಿಯಾಗೂ ಇದೆಯಂತೆ. ಅಜಯ್​ ಹಾಗೂ ಕಾಜಲ್​ ಇಬ್ಬರಿಗೂ ಈ ಬಂಗಲೆ ಇಷ್ಟವಾಗಿದ್ದು, ಬರೋಬ್ಬರಿ 60 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ.

ಹೊಸ ಬಂಗಲೆ ಖರೀದಿ ಪ್ರಕ್ರಿಯೆ ಕಳೆದ ವರ್ಷವೇ ಆರಂಭವಾಗಿದ್ದು, ಈಗ ಪೂರ್ಣಗೊಂಡಿದೆ. ಸದ್ಯ, ಈ ಬಂಗಲೆಯ ನವೀಕರಣ​ ಕಾರ್ಯಗಳು ನಡೆಯುತ್ತಿವೆ. ಶೀಘ್ರವೇ ದಂಪತಿ ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರಂತೆ. ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

ಸೂರ್ಯವಂಶಿ, ಆರ್​ಆರ್​ಆರ್​ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗಳಲ್ಲಿ ಅಜಯ್​ ದೇವಗನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರು ಚಿತ್ರಗಳಲ್ಲಿ ಅತಿಥಿ ಪಾತ್ರವಾದರೂ ತುಂಬಾನೇ ಪ್ರಾಮುಖ್ಯತೆ ಹೊಂದಿರಲಿದೆಯಂತೆ. ಇನ್ನು, ಮೈದಾನ್​ ಸಿನಿಮಾದಲ್ಲಿ ಅಜಯ್​ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಹಲವು ಸಿನಿಮಾಗಳು ಅಜಯ್​ ಕೈಯಲ್ಲಿವೆ.

ಬಾಂದ್ರಾ ಸಮೀಪ ಅರ್ಜುನ್​ ಕಪೂರ್​ 20 ಕೋಟಿ ರೂಪಾಯಿ ನೀಡಿ ಸ್ಕೈ ವಿಲ್ಲಾ ಖರೀದಿ ಮಾಡಿದ್ದಾರೆ. 4 ಬಿಎಚ್​ಕೆ ಮನೆ ಇದಾಗಿದ್ದು ಅವರ ಪ್ರೇಯಸಿ ಮಲೈಕಾ ಅರೋರಾ ಮನೆಯ ಸಮೀಪದಲ್ಲಿಯೇ ಇದು ಇದೆ ಎನ್ನಲಾಗಿತ್ತು.

ಇದನ್ನೂ ಓದಿ: 20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us