ಸಮುದ್ರದಲ್ಲಿ ಪೊರಕೆ ಹಿಡಿದು ಸ್ವಚ್ಛ ಅಭಿಯಾನದ ಕರೆ ಕೊಟ್ಟ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರು ಬೀಚ್​​ಅನ್ನು ಸ್ವಚ್ಛಗೊಳಿಸುತ್ತಿರುವ ಫೋಟೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಅಕ್ಷಯ್ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಶಾರ್ಟ್ಸ್ ಹಾಕಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಬೀಚ್ ಶುಚಿಗೊಳಿಸಿದ್ದಾರೆ. ಅವರ ಮುಖದಲ್ಲಿ ಸಂತೃಪ್ತ ಭಾವನೆ ಕಾಣಿಸಿದೆ. ಈ

ಸಮುದ್ರದಲ್ಲಿ ಪೊರಕೆ ಹಿಡಿದು ಸ್ವಚ್ಛ ಅಭಿಯಾನದ ಕರೆ ಕೊಟ್ಟ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್

Updated on: Oct 02, 2023 | 1:15 PM

ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ‘ಸ್ವಚ್ಛತಾ ಹಿ ಸೇವೆ’ ಹೆಸರಿನ ಅಭಿಯಾನ ಆರಂಭಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಅವರ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಲವು ಸೆಲೆಬ್ರಿಟಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಕೂಡ ಸೇರ್ಪಡೆಯಾಗಿದ್ದಾರೆ. ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರು ಬೀಚ್​​ಅನ್ನು ಸ್ವಚ್ಛಗೊಳಿಸುತ್ತಿರುವ ಫೋಟೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಅಕ್ಷಯ್ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಶಾರ್ಟ್ಸ್ ಹಾಕಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಬೀಚ್ ಶುಚಿಗೊಳಿಸಿದ್ದಾರೆ. ಅವರ ಮುಖದಲ್ಲಿ ಸಂತೃಪ್ತ ಭಾವನೆ ಕಾಣಿಸಿದೆ. ಈ ಫೋಟೋವನ್ನು ಶೇರ್ ಮಾಡುವುದರೊಂದಿಗೆ ಅಕ್ಷಯ್ ಕುಮಾರ್ ಸಂದೇಶವನ್ನೂ ಕೊಟ್ಟಿದ್ದಾರೆ.

ಸದ್ಯ ಅಕ್ಷಯ್ ಕುಮಾರ್ ಅವರು ಭಾರತದಲ್ಲಿ ಇಲ್ಲ. ಆದಾಗ್ಯೂ ಅವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ‘ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಮತ್ತು ನಿಮ್ಮ ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿ’ ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್; ‘ವೆಲ್​ಕಮ್ ​3’ ಚಿತ್ರದಲ್ಲಿ ಸ್ಟಾರ್ಸ್ ದಂಡು

ಅಕ್ಷಯ್ ಕುಮಾರ್ ಪ್ರಸ್ತುತ ಅನೇಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘OMG 2’ ಸಿನಿಮಾ 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಚಿತ್ರದ ಜೊತೆ ಸನ್ನಿ ಡಿಯೋಲ್ ಅವರ ‘ಗದರ್ 2’ ಬಿಡುಗಡೆ ಆಗಿತ್ತು. ಈಗ ಅಕ್ಷಯ್ ಕುಮಾರ್ ‘ಹೇರಾ ಫೇರಿ 3’, ‘ಬಡೇ ಮಿಯಾ ಛೋಟೆ ಮಿಯಾ’, ‘ಮಿಷನ್ ರಾಣಿಗಂಜ್’ ಮತ್ತು ‘ಸಿಂಗಮ್ ಎಗೇನ್’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ