ಸತತ ಸೋಲು; ಬಾಲಿವುಡ್​ನ ಖ್ಯಾತ ನಿರ್ದೇಶಕನಿಗೆ ಕಿವಿಮಾತು ಹೇಳಿದ ಅಲ್ಲು ಅರ್ಜುನ್

ಇತ್ತೀಚೆಗೆ ಬಾಲಿವುಡ್ ನಿರ್ಮಾಪಕರು ಹೀರೋಗಳ ಬಗ್ಗೆ ದೂರು ತರುತ್ತಿದ್ದಾರೆ. ಸಿನಿಮಾಗಳು ಗೆಲ್ಲದೆ ಇದ್ದರೂ ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಾರೆ ಎಂದು ಕೆಲವು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಹಾಗೂ ನಿಖಿಲ್ ಅಡ್ವಾಣಿ ಪರಸ್ಪರ ಭೇಟಿ ಆಗಿದ್ದರು. ಆಗ ಅಲ್ಲು ಅರ್ಜುನ್ ಅವರು ಬಾಲಿವುಡ್​ನಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು.

ಸತತ ಸೋಲು; ಬಾಲಿವುಡ್​ನ ಖ್ಯಾತ ನಿರ್ದೇಶಕನಿಗೆ ಕಿವಿಮಾತು ಹೇಳಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್-ನಿಖಿಲ್

Updated on: Aug 01, 2024 | 7:02 AM

ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಬಾಲಿವುಡ್​ ಸಿನಿಮಾಗಳ ಬಜೆಟ್ ಹೆಚ್ಚು. ಅದೇ ರೀತಿ ಬಾಲಿವುಡ್​ ಸಿನಿಮಾಗಳು ಹೆಚ್ಚು ಫ್ಲಾಪ್ ಎನಿಸಿಕೊಳ್ಳುತ್ತಿವೆ. 2023ರಲ್ಲಿ ಹಿಂದಿಯಲ್ಲಿ ರಿಲೀಸ್ ಆದ  ‘ಜವಾನ್’, ‘ಪಠಾಣ್’, ‘ಅನಿಮಲ್’ ರೀತಿಯ ಚಿತ್ರಗಳು ದೊಡ್ಡ ಗೆಲುವು ಕಂಡವು. ಈಗ ಚಿತ್ರರಂಗಕ್ಕೆ ಮತ್ತದೇ ಸ್ಥಿತಿ ಬಂದಿದೆ. ಯಾರೂ ಹಿಂದಿ ಚಿತ್ರ ವೀಕ್ಷಿಸುತ್ತಿಲ್ಲ. ಈ ಸ್ಥಿತಿಗೆ ಕಾರಣ ಏನು ಎಂಬುದನ್ನು ಒಬ್ಬೊಬ್ಬರು ಒಂದೊಂದು ರೀತಿ ಬಿಂಬಿಸಿದ್ದಾರೆ. ಈಗ ಬಾಲಿವುಡ್ ನಿರ್ದೇಶಕ ನಿಖಿಲ್ ಅಡ್ವಾಣಿ ಅವರು ಅಲ್ಲು ಅರ್ಜುನ್ ಹೇಳಿದ ಕಿವಿಮಾತಿನ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಅಲ್ಲು ಅರ್ಜುನ್ ಹಾಗೂ ನಿಖಿಲ್ ಅಡ್ವಾಣಿ ಪರಸ್ಪರ ಭೇಟಿ ಆಗಿದ್ದರು. ಆಗ ಅಲ್ಲು ಅರ್ಜುನ್ ಅವರು ಬಾಲಿವುಡ್​ನಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರಂತೆ. ‘ಹೀರೋ ಆಗೋದು ಹೇಗೆ ಅನ್ನೋದನ್ನು ನೀವೆಲ್ಲ ಮರೆತಿದ್ದೀರಿ’ ಎಂದು ಅಲ್ಲು ಅರ್ಜುನ್ ಅವರು ಬಾಲಿವುಡ್​ನ ವೀಕ್ ಪಾಯಿಂಟ್​ನ ಎತ್ತಿ ಹಿಡಿದಿದ್ದರು.

‘ದಕ್ಷಿಣದ ಸಿನಿಮಾಗಳು ಹೀರೋಯಿಸಂನ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಾಕಷ್ಟು ಆ್ಯಕ್ಷನ್ ಇರುತ್ತವೆ. ಹೀರೋಯಿಸಂ ಚೆನ್ನಾಗಿ ತೋರಿಸುತ್ತಾರೆ’ ಎಂದಿದ್ದಾರೆ ಅವರು. ಈ ಮೊದಲು ಬಾಲಿವುಡ್​ನಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಬಂದಿವೆ. ‘ಕೂಲಿ’ ಸಿನಿಮಾದಲ್ಲಿ ಅಮಿತಾ ಭಚ್ಚನ್ ಪಾತ್ರ, ‘ಕಭಿ ಹಾ ಕಭಿ ನಾ’ ಸಿನಿಮಾದಲ್ಲಿ ಶಾರುಖ್ ಖಾನ್ ಪಾತ್ರಗಳನ್ನು ನಿಖಿಲ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರಕ್ಕಾಗಿ ಇನ್ನೂ ಆರು ತಿಂಗಳು ಶೂಟ್ ಮಾಡೋಕೆ ರೆಡಿ ಇದ್ದಾರೆ ಅಲ್ಲು ಅರ್ಜುನ್

ಇತ್ತೀಚೆಗೆ ಬಾಲಿವುಡ್ ನಿರ್ಮಾಪಕರು ಹೀರೋಗಳ ಬಗ್ಗೆ ದೂರು ತರುತ್ತಿದ್ದಾರೆ. ಸಿನಿಮಾಗಳು ಗೆಲ್ಲದೆ ಇದ್ದರೂ ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಾರೆ ಎಂದು ಕೆಲವು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕರಣ್ ಜೋಹರ್ ಅವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ನಿಖಿಲ್ ಅಡ್ವಾಣಿ ಅವರು ‘ವೇದ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಜಾನ್ ಅಬ್ರಹಾಂ ಹೀರೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us