Pushpa: ಐಟಂ ಸಾಂಗ್ ಪೋಸ್ಟರ್ ಮೂಲಕವೇ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ಸಮಂತಾ

Samantha | Allu Arjun: ಸಮಂತಾ ಹಾಗೂ ಅಲ್ಲು ಅರ್ಜುನ್ ಜೊತೆಯಾಗಿ ಹೆಜ್ಜೆ ಹಾಕಿರುವ ‘ಪುಷ್ಪ’ ಚಿತ್ರದ ಐಟಂ ಸಾಂಗ್​ನ ಪೋಸ್ಟರ್ ಬಿಡುಗಡೆಯಾಗಿದೆ.

Pushpa: ಐಟಂ ಸಾಂಗ್ ಪೋಸ್ಟರ್ ಮೂಲಕವೇ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ಸಮಂತಾ
ಸಮಂತಾ
Edited By:

Updated on: Nov 30, 2021 | 9:53 PM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಚಿತ್ರದ ಮೊದಲ ಭಾಗವು ‘ಪುಷ್ಪ: ದಿ ರೈಸ್’ ಎಂಬ ಹೆಸರಿನಲ್ಲಿ ತೆರೆಗೆ ಬರಲಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಹಾಡುಗಳು ಗಮನ ಸೆಳೆದಿವೆ. ಇತ್ತೀಚೆಗೆ ಕೇಳಿ ಬಂದಿದ್ದ ಮಾಹಿತಿಗಳ ಪ್ರಕಾರ ಟಾಲಿವುಡ್ ನಟಿ ಸಮಂತಾ ‘ಪುಷ್ಪ’ದ ಐಟಂ ಸಾಂಗ್​ಗೆ ಸೊಂಟ ಬಳುಕಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೇ ಅವರ ಸಂಭಾವನೆಯ ವಿಚಾರಗಳೂ ಅಭಿಮಾನಿಗಳ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ಹೊಸ ಅಪ್ಡೇಟ್ ನೀಡಿ, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಹೌದು. ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕಿರುವ ಹಾಡಿನ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.

ಟ್ವಿಟರ್​ನಲ್ಲಿ ಚಿತ್ರತಂಡ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ಸಮಂತಾ ಹೆಜ್ಜೆ ಹಾಕಲು ತಯಾರಾಗಿ ನಿಂತಿದ್ದಾರೆ. ಪೋಸ್ಟರ್​ನಲ್ಲೂ ಚಿತ್ರತಂಡ ಸಸ್ಪೆನ್ಸ್ ಉಳಿಸಿಕೊಂಡಿದ್ದು, ಸಮಂತಾ ಮುಖದ ಚಿತ್ರವನ್ನು ಹಂಚಿಕೊಂಡಿಲ್ಲ. ಅಲ್ಲದೇ ಅಲ್ಲು ಅರ್ಜುನ್ ಕೂಡ ಹಾಡಿಗೆ ಹೆಜ್ಜೆ ಹಾಕಿದ್ದು, ಅವರ ಗೆಟಪ್ ಕೂಡ ರಿವೀಲ್ ಆಗಿಲ್ಲ. ಬೃಹತ್ ಸೆಟ್​ನಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಅದರ ಒಂದು ಸಣ್ಣ ತುಣುಕನ್ನು ಸಮಂತಾ ಇರುವ ಪೋಸ್ಟರ್​ನಲ್ಲಿ ಕಾಣಿಸಿದೆ. ಈ ಮೂಲಕ ಫ್ಯಾನ್ಸ್ ಹಾಡಿಗೆ ಮತ್ತಷ್ಟು ಕಾಯುವಂತೆ ಮಾಡಿದೆ.

ಸಮಂತಾ ಬೆನ್ನು ತೋರಿಸಿ ನಿಂತ ಭಂಗಿಯ ಈ ಪೋಸ್ಟರ್ ಸದ್ಯ ವೈರಲ್ ಆಗಿದೆ. ವರ್ಷದ ಅದ್ಭುತ ಹಾಡಿಗೆ ನೀವು ಸಿದ್ಧರಾಗಿ ಎಂಬರ್ಥದ ಶೀರ್ಷಿಕೆಯನ್ನು ನೀಡಿ, ಪೋಸ್ಟರ್ ಹಂಚಿಕೊಳ್ಳಲಾಗಿದೆ.

ಚಿತ್ರತಂಡ ಹಂಚಿಕೊಂಡ ಪೋಸ್ಟರ್ ಇಲ್ಲಿದೆ:

ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘ಸಾಮಿ ಸಾಮಿ’ ಹಾಡು ಎಲ್ಲರ ಮನಗೆದ್ದಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಅಭಿಮಾನಿಗಳಿಗೆ ಪ್ರಿಯವಾಗಿತ್ತು.
YouTube video player

ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದ ಟ್ರೈಲರ್ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಚಿತ್ರವು ಡಿಸೆಂಬರ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸ್ಯಾಂಡಲ್​ವುಡ್ ನಟ ಡಾಲಿ ಧನಂಜಯ್, ಮಲಯಾಳಂ ನಟ ಫಹಾದ್ ಫಾಸಿಲ್ ಸೇರಿದಂತೆ ಹಲವು ಖ್ಯಾತಱನಾಮರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:

Rajinikanth: ನೆಟ್​​ಫ್ಲಿಕ್ಸ್​​ನಲ್ಲೂ ರಜಿನಿ ಹವಾ; ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ತಲೈವಾ!

Samantha: ಅವಾಚ್ಯವಾಗಿ, ಅಶ್ಲೀಲವಾಗಿ ಟ್ರೋಲ್ ಮಾಡುವವರಿಗೆ ಕಿವಿ ಮಾತು ಹೇಳಿದ ಸಮಂತಾ

Published On - 9:51 pm, Tue, 30 November 21

TV9 Web

TV9 Kannada

Read More
Loading...
Unable to load recommendations.
Follow Us