ಬಿಡುಗಡೆಗೆ ಮುನ್ನವೇ ಸಾವಿರ ಕೋಟಿ ದಾಟಿದ ‘ಪುಷ್ಪ 2’ ಕಲೆಕ್ಷನ್

|

Updated on: Oct 22, 2024 | 10:30 AM

Pushpa 2 collection: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯವಿದೆ. ಆದರೆ ಈ ಸಿನಿಮಾ ಬಿಡುಗಡೆಗೆ ಮುಂಚೆಯೇ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇಲ್ಲಿದೆ ಗಳಿಕೆಯ ಲೆಕ್ಕಾಚಾರ.

ಬಿಡುಗಡೆಗೆ ಮುನ್ನವೇ ಸಾವಿರ ಕೋಟಿ ದಾಟಿದ ‘ಪುಷ್ಪ 2’ ಕಲೆಕ್ಷನ್
Follow us on

ಪ್ಯಾನ್ ಇಂಡಿಯಾ ಸಿನಿಮಾಗಳಿಗೆ 1000 ಕೋಟಿ ಕಲೆಕ್ಷನ್ ಎಂಬುದು ಅನಾಯಾಸ ಆಗಿಬಿಟ್ಟಿದೆ. ಸ್ಟಾರ್ ನಟರ ಕೆಟ್ಟ ಸಿನಿಮಾಗಳು ಸಹ ಈಗ 500 ಕೋಟಿಯಿಂದ 1000 ಕೋಟಿ ಗಳಿಸುತ್ತಿವೆ. ಇತ್ತೀಚೆಗೆ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಒಂದು ತಿಂಗಳ ಒಳಗಾಗಿಯೇ ಸುಮಾರು 600 ಕೋಟಿ ಗಳಿಸಿತ್ತು. ಆದರೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಈ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ 1000 ಕೋಟಿ ಗಳಿಕೆ ದಾಟಿಬಿಟ್ಟಿದೆ.

ಸಿನಿಮಾದ ಡಿಜಿಟಲ್, ಸ್ಯಾಟಲೈಟ್, ಮ್ಯೂಸಿಕ್ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಅಲ್ಲದೆ ಸಿನಿಮಾದ ಬಿಡುಗಡೆ ಹಕ್ಕುಗಳನ್ನು ಸಹ ಈಗಾಗಲೇ ಮಾರಾಟ ಮಾಡಲಾಗಿದ್ದು, ಸಿನಿಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇರುವಾಗಲೇ ಸಿನಿಮಾ ಭಾರಿ ಮೊತ್ತ ಗಳಿಕೆ ಮಾಡಿದೆ. ಆ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಭಾರತದ ಇನ್ಯಾವುದೇ ಸಿನಿಮಾ ಬಿಡುಗಡೆ ಮುಂಚೆಯೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿಲ್ಲ.

‘ಪುಷ್ಪ 2’ ಸಿನಿಮಾದ ಡಿಜಿಟಲ್ ಅಥವಾ ಒಟಿಟಿ ಹಕ್ಕು ನೆಟ್​ಫ್ಲಿಕ್ಸ್​ಗೆ ಮಾರಾಟವಾಗಿದ್ದು, 270 ಕೋಟಿ ರೂಪಾಯಿಗಳನ್ನು ನೀಡಿ ನೆಟ್​ಫ್ಲಿಕ್ಸ್​, ‘ಪುಷ್ಪ 2’ ಸಿನಿಮಾ ಖರೀದಿ ಮಾಡಿದೆ. ಇದರ ಜೊತೆಗೆ ಸಿನಿಮಾದ ಆಡಿಯೋ ಹಕ್ಕು 60 ಕೋಟಿ ರೂಪಾಯಿಗಳಿಗಾಗಿ ಮಾರಾಟವಾಗಿದೆ. ಸಿನಿಮಾದ ಸ್ಯಾಟಲೈಟ್ ಹಕ್ಕು ಸುಮಾರು 100 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂರರಿಂದಲೇ ಸುಮಾರು 450 ಕೋಟಿ ರೂಪಾಯಿ ಹಣ ಗಳಿಕೆ ಆಗಿದೆ.

ಇದನ್ನೂ ಓದಿ:‘ಪುಷ್ಪ 2’ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ ಶ್ರದ್ಧಾ ಕಪೂರ್?

ಸಿನಿಮಾದ ಬಿಡುಗಡೆ ಹಕ್ಕನ್ನು ಸಹ ಮೈತ್ರಿ ನಿರ್ಮಾಣ ಸಂಸ್ಥೆ ಕೆಲ ದೊಡ್ಡ ವಿತರಕರಿಗೆ ಮಾರಾಟ ಮಾಡಿದೆ. ಆಂಧ್ರ-ತೆಲಂಗಾಣದ ಬಿಡುಗಡೆ ಹಕ್ಕು 220 ಕೋಟಿಗೆ ಮಾರಾಟ ಮಾಡಲಾಗಿದೆ. ಹಿಂದಿ ಬಿಡುಗಡೆ ಹಕ್ಕು ಬರೋಬ್ಬರಿ 200 ಕೋಟಿ ರೂಪಾಯಿಗೆ ಮಾರಾಟವಾಗಿದೆ. ತಮಿಳುನಾಡಿನ ಬಿಡುಗಡೆ ಹಕ್ಕು 50 ಕೋಟಿ ರೂಪಾಯಿಗೆ, ಕರ್ನಾಟಕ ಬಿಡುಗಡೆ ಹಕ್ಕು 30 ಕೋಟಿ ರೂಪಾಯಿಗೆ ಮತ್ತು ಕೇರಳ ಬಿಡುಗಡೆ ಹಕ್ಕು 20 ಕೋಟಿ ರೂಪಾಯಿಗೆ ಮಾರಾಟವಾಗಿದೆ. ವಿದೇಶಿ ಬಿಡುಗಡೆ ಹಕ್ಕು 120 ಕೋಟಿಗೆ ಮಾರಾಟವಾಗಿದೆ. ಅಲ್ಲಿಗೆ ಬಿಡುಗಡೆ ಹಕ್ಕು ಮಾರಾಟದಿಂದಲೇ 640 ಕೋಟಿ ರೂಪಾಯಿ ಹಣವನ್ನು ಗಳಿಸಿದೆ. ಅಲ್ಲಿಗೆ ಸಿನಿಮಾ ಬಿಡುಗಡೆಗೆ ಮುಂಚೆಯೇ 1000 ಕೋಟಿಗೂ ಹೆಚ್ಚು ಮೊತ್ತವನ್ನು ಚಿತ್ರತಂಡ ಜೇಬಿಗಿಳಿಸಿಕೊಂಡಿದೆ.

ಸಿನಿಮಾದ ಕಲೆಕ್ಷನ್​ನಲ್ಲಿಯೂ ಷೇರನ್ನು ನಿರ್ಮಾಪಕರು ಹೊಂದಿದ್ದು, ಒಂದೊಮ್ಮೆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತೆಂದರೆ ಭಾರಿ ಮೊತ್ತವನ್ನೇ ನಿರ್ಮಾಪಕರು ಗಳಿಸಲಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಸುನಿಲ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 6 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ