ಅಮೆರಿಕದ ಡಿಸೈನರ್, ಕಿರು ಸಾಕ್ಷ್ಯಚಿತ್ರ ನಿರ್ಮಾಪಕಿ ಆಲ್ಟಿನಾ ಚಿನಾಸಿಗೆ (Altina Schinasi) ಇಂದು (ಆಗಸ್ಟ್ 4) ಜನ್ಮದಿನ. ಈ ವಿಶೇಷ ದಿನದಂದು ಗೂಗಲ್ ಕಡೆಯಿಂದ ಅವರಿಗೆ ಗೌರವ ಸಲ್ಲಿಕೆ ಆಗಿದೆ. ಡೂಡಲ್ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಫ್ಯಾಷನ್ ಲೋಕಕ್ಕೆ ಅವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಸೋಶಿಯಲ್ ಮೀಡಿಯಾದಲ್ಲೂ (Social Media) ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. 1907ರಲ್ಲಿ ಆಲ್ಟಿನಾ ಜನಿಸಿದ್ದರು. ಅವರು ಹುಟ್ಟಿದ್ದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ.
ಕ್ಯಾಟ್ ಐ ಕನ್ನಡಕದ ಫ್ರೇಮ್ನ ಕಂಡು ಹಿಡಿದ ಖ್ಯಾತಿ ಆಲ್ಟಿನಾಗೆ ಸಲ್ಲಿಕೆ ಆಗುತ್ತದೆ. ವಿವಿಧ ಕ್ಷೇತ್ರದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ‘ಜಾರ್ಜ್ ಗ್ರೋಸ್ಜ್ ಇಂಟರ್ಗಂಮ್’ ಹೆಸರಿನ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದರು. ಈ ಕಿರುಚಿತ್ರ 1960ರಲ್ಲಿ ರಿಲೀಸ್ ಆಯಿತು. ಇದು ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ವೆನಿಸ್ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಕಿರುಸಾಕ್ಷ್ಯ ಚಿತ್ರವನ್ನು ಅಕಾಡೆಮಿಯವರು ಸಂರಕ್ಷಿಸಿ ಇಟ್ಟಿದ್ದಾರೆ.
Happy #InternationalCatDay #CatsEye frames were first made by #AltinaSchinasi as an exaggerated upswept frame forming a cat’s eye shape. Stars like Marilyn Monroe and Audrey Hepburn favoured the cat eye silhouette which tended to be smaller with a super-exaggerated, upswept flair pic.twitter.com/UGaC3ChJaV
— Narborough Eyecare (@NarboroughEye) August 8, 2022
#altinaschinasi
Google Doodle Honors ‘Altina Schinasi’: The Visionary American Designer Behind The Iconic Cat-Eye Frameshttps://t.co/kRjtnlJkEQ pic.twitter.com/ucVTcEUyGW— mode-cafe (@mode_cafe_) August 4, 2023
ಇದನ್ನೂ ಓದಿ: ಸಿನಿಪ್ರಿಯರಿಗೆ ಈ ಬಾರಿಯ ದಸರಾ ಹಬ್ಬ ಭರ್ಜರಿ; ಯಾವೆಲ್ಲ ಚಿತ್ರಗಳು ರಿಲೀಸ್?
ಮಹಿಳೆಯರಿಗೆ ಹೆಚ್ಚಿನ ಡಿಸೈನ್ನ ಕನ್ನಡಕ ಇಲ್ಲ ಎಂಬುದು ಆಲ್ಟಿನಾ ಗಮನಿಸಿದರು. ಈ ಕಾರಣಕ್ಕೆ ಅವರು ಬೆಕ್ಕಿನ ಕಣ್ಣಿನ ಮಾದರಿಯ ಕನ್ನಡಕವನ್ನು ಕಂಡು ಹಿಡಿದರು. ಇಂದಿಗೂ ಈ ಕನ್ನಡಕ ಸಾಕಷ್ಟು ಖ್ಯಾತಿ ಪಡೆದುಕೊಂಡಿದೆ. ಇವರು ಅನೇಕ ಮಹಿಳೆಯರಿಗೆ ಸ್ಫೂರ್ತಿ ಆಗಿದ್ದಾರೆ. 1999ರಲ್ಲಿ ಆಗಸ್ಟ್ 19ರಂದು ಮೃತಪಟ್ಟರು. ಆಗ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ನಮ್ಮನ್ನು ಅಗಲಿದರೂ ಅವರು ಮಾಡಿದ ಕೆಲಸ ಹಾಗೆಯೇ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ