Amala Paul: ‘ಅಗತ್ಯ ಇದ್ದಿದ್ದಕ್ಕೆ ಲಿಪ್​ ಕಿಸ್​ ಮಾಡಿದೆ’: ಪೃಥ್ವಿರಾಜ್​​ ಜತೆಗಿನ ದೃಶ್ಯದ ಬಗ್ಗೆ ಅಮಲಾ ಪೌಲ್​ ಪ್ರತಿಕ್ರಿಯೆ

Aadujeevitham Movie: ಮಲಯಾಳಂನ ‘ಆಡು ಜೀವಿತಂ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಮರಳುಭೂಮಿಯಲ್ಲಿ ಕಷ್ಟಪಡುವ ವ್ಯಕ್ತಿಯ ಕುರಿತಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

Amala Paul: ‘ಅಗತ್ಯ ಇದ್ದಿದ್ದಕ್ಕೆ ಲಿಪ್​ ಕಿಸ್​ ಮಾಡಿದೆ’: ಪೃಥ್ವಿರಾಜ್​​ ಜತೆಗಿನ ದೃಶ್ಯದ ಬಗ್ಗೆ ಅಮಲಾ ಪೌಲ್​ ಪ್ರತಿಕ್ರಿಯೆ
ಅಮಲಾ ಪೌಲ್, ಪೃಥ್ವಿರಾಜ್ ಸುಕುಮಾರನ್

Updated on: Apr 25, 2023 | 5:01 PM

ಮುಖ್ಯಾಂಶಗಳು

  • ಮಲಯಾಳಂನ ‘ಆಡು ಜೀವಿತಂ’ ಕಾದಂಬರಿ ಆಧರಿಸಿ ಸಿದ್ಧವಾಗಿದೆ ಈ ಸಿನಿಮಾ
  • ಚಿತ್ರೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಟ್ರೇಲರ್​ ಸೋರಿಕೆ ಆಗಿದ್ದರಿಂದ ಚಿತ್ರತಂಡಕ್ಕೆ ಬೇಸರ
  • ಒಂದು ಇಂಟಿಮೇಟ್​ ದೃಶ್ಯದಲ್ಲಿ ಲಿಪ್​ ಲಾಕ್​ ಮಾಡಿದ ಅಮಲಾ ಪೌಲ್-ಪೃಥ್ವಿರಾಜ್

ನಟಿ ಅಮಲಾ ಪೌಲ್​ (Amala Paul) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಬೋಲ್ಡ್​ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ರಿಯಲ್​ ಲೈಫ್​ನಲ್ಲಿಯೂ ಅವರದ್ದು ನೇರ ನಿಷ್ಠುರವಾದಂತಹ ವ್ಯಕ್ತಿತ್ವ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ಇನ್ನು, ಗ್ಲಾಮರಸ್​ ಆದಂತಹ ಪಾತ್ರಗಳ ಆಯ್ಕೆಯಲ್ಲಿ ಅವರು ಎಂದಿಗೂ ಮುಜುಗರಪಟ್ಟುಕೊಂಡಿಲ್ಲ. ಅಮಲಾ ಪೌಲ್​ ಅವರು ಮೂಲತಃ ಕೇರಳದವರು. ಬಹುಭಾಷೆಯಲ್ಲಿ ಫೇಮಸ್​ ಆಗಿದ್ದಾರೆ. ಹಾಗಾಗಿ ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಈಗ ಅವರೊಂದು ಕಿಸ್ಸಿಂಗ್​ ದೃಶ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಆಡು ಜೀವಿತಂ’ (Aadujeevitham) ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​ (Prithviraj Sukumaran​) ಜೊತೆಗೆ ಅಮಲಾ ಪೌಲ್​ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ನಲ್ಲಿರುವ ಚುಂಬನದ ದೃಶ್ಯದ ಬಗ್ಗೆ ಅವರೀಗ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಲೆಸ್ಸಿ ಅವರು ‘ಆಡು ಜೀವಿತಂ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಒಂದಷ್ಟು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್​ ಲೀಕ್​ ಆಯಿತು. ಸಿನಿಮೋತ್ಸವದ ಸಲುವಾಗಿ ಸಿದ್ಧಪಡಿಸಿದ್ದ ಟ್ರೇಲರ್​ ಸೋರಿಕೆ ಆಗಿದ್ದರಿಂದ ಚಿತ್ರತಂಡಕ್ಕೆ ಬೇಸರ ಆಯಿತು. ಟ್ರೇಲರ್​ ನೋಡಿದ ಬಹುತೇಕರು ಚರ್ಚೆ ಮಾಡಿದ್ದು ಅಮಲಾ ಪೌಲ್​ ಮತ್ತು ಪೃಥ್ವಿರಾಜ್​ ಸುಕುಮಾರನ್​ ನಡುವಿನ ಕಿಸ್ಸಿಂಗ್​ ದೃಶ್ಯದ ಬಗ್ಗೆ.

ಮಲಯಾಳಂನ ‘ಆಡು ಜೀವಿತಂ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಮರಳುಭೂಮಿಯಲ್ಲಿ ಕಷ್ಟಪಡುವ ವ್ಯಕ್ತಿಯ ಕುರಿತಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಪೃಥ್ವಿರಾಜ್​ ಸುಕುಮಾರನ್​​ ಅವರು ಡಿಫರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ಅಮಲಾ ಪೌಲ್​ ನಟಿಸಿದ್ದಾರೆ. ಒಂದು ಇಂಟಿಮೇಟ್​ ದೃಶ್ಯದಲ್ಲಿ ಇಬ್ಬರೂ ಲಿಪ್​ ಲಾಕ್​ ಮಾಡಿದ್ದಾರೆ.

ಇದನ್ನೂ ಓದಿ: Amala Paul: ‘ಹೆಬ್ಬುಲಿ’ ನಟಿಯ ಹಾಟ್​ ಅವತಾರ; ಪಡ್ಡೆಗಳ ನಿದ್ದೆ ಕೆಡಿಸಿದ ಅಮಲಾ ಪೌಲ್​ ಫೋಟೋಸ್​

‘ಸಿನಿಮಾದ ಕಥೆಗೆ ಈ ದೃಶ್ಯ ಅವಶ್ಯಕವಾಗಿತ್ತು. ಅದಕ್ಕೆ ಅನುಗುಣವಾಗಿ ನಾನು ನಟಿಸಿದ್ದೇನೆ’ ಅಂತ ಅಮಲಾ ಪೌಲ್​ ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾಗೆ ಎ.ಆರ್​. ರೆಹಮಾನ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತ ರಸೂಲ್​ ಪೂಕುಟ್ಟಿ ಅವರು ಸೌಂಡ್​ ಡಿಸೈನ್​ ಮಾಡಿದ್ದಾರೆ.

ಇದನ್ನೂ ಓದಿ: Amala Paul: ದೇವರ ಮೊರೆ ಹೋದ ಅಮಲಾ ಪೌಲ್​; ಪವಿತ್ರ ನೀರಲ್ಲಿ ಮಿಂದೆದ್ದ ನಟಿ

‘ಆಡು ಜೀವಿತಂ’ ಸಿನಿಮಾದ ಬಹುತೇಕ ದೃಶ್ಯಗಳ ಶೂಟಿಂಗ್​ ಮರುಭೂಮಿಯಲ್ಲಿ ನಡೆದಿದೆ. ಅದಕ್ಕಾಗಿ ಚಿತ್ರತಂಡ ಬಹಳ ಕಷ್ಟಪಟ್ಟಿದೆ. ಪೃಥ್ವಿರಾಜ್​ ಸುಕುಮಾರನ್​ ಅವರು ಸುಡುವ ಬಿಸಿಲಿನಲ್ಲಿ ನಟಿಸಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ಈ ಚಿತ್ರತಂಡದವರು 70 ದಿನಗಳ ಕಾಲ ಜೋರ್ಡನ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇಷ್ಟೆಲ್ಲ ಕಷ್ಟಪಟ್ಟು ಮಾಡಿದ ಸಿನಿಮಾದ ಟ್ರೇಲರ್​ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:54 pm, Tue, 25 April 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us