Amala Paul: ದೇವರ ಮೊರೆ ಹೋದ ಅಮಲಾ ಪೌಲ್; ಪವಿತ್ರ ನೀರಲ್ಲಿ ಮಿಂದೆದ್ದ ನಟಿ
ಫೆ.18 ಮಹಾ ಶಿವರಾತ್ರಿ ಆಚರಿಸಲಾಯಿತು. ಭಕ್ತರು ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಟಿ ಅಮಲಾ ಪೌಲ್ ಅವರು ಇಂಡೋನೇಷ್ಯಾದ ಬಾಲಿಯಲ್ಲಿದ್ದರು. ಅಲ್ಲಿ ಅವರು ತಮ್ಮದೇ ಶೈಲಿಯಲ್ಲಿ ಪೂಜೆ ಸಲ್ಲಿಕೆ ಮಾಡಿದ್ದಾರೆ.
Updated on: Feb 21, 2023 | 12:36 PM

ನಟಿ ಅಮಲಾ ಪೌಲ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕನ್ನಡ, ತಮಿಳು ಸೇರಿ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ನಟಿ ಪವಿತ್ರ ನೀರಲ್ಲಿ ಮಿಂದೆದ್ದಿದ್ದಾರೆ.

ಫೆ.18 ಮಹಾ ಶಿವರಾತ್ರಿ ಆಚರಿಸಲಾಯಿತು. ಭಕ್ತರು ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಟಿ ಅಮಲಾ ಪೌಲ್ ಅವರು ಇಂಡೋನೇಷ್ಯಾದ ಬಾಲಿಯಲ್ಲಿದ್ದರು. ಅಲ್ಲಿ ಅವರು ತಮ್ಮದೇ ಶೈಲಿಯಲ್ಲಿ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಪವಿತ್ರ ನೀರಲ್ಲಿ ಅಮಲಾ ಮಿಂದೆದ್ದಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳಿಗೋಸ್ಕರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನನಗೆ ಶಕ್ತಿ ಕೊಡು ಎಂದು ಅವರು ದೇವರಲ್ಲಿ ಕೋರಿದ್ದಾರೆ.

ಕೆರೆಯ ಸಮೀಪದ ಮೂರ್ತಿಗೆ ಅಮಲಾ ಹೂವಿನಿಂದ ಅರ್ಚನೆ ಮಾಡಿದ್ದಾರೆ. ಈ ಚಿತ್ರಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಅಮಲಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2009ರಲ್ಲಿ. ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲಿ ಅಮಲಾ ನಟಿಸಿದರು. ಇದು ಅವರು ನಟಿಸಿದ ಮೊದಲ ಕನ್ನಡ ಸಿನಿಮಾ. ಆ ಬಳಿಕ ಅವರು ಸ್ಯಾಂಡಲ್ವುಡ್ಗೆ ಮರಳಿಲ್ಲ.