ಸರ್ಚ್ ಮಾಡುವ ಮೂಲಕ ಕಾಂಟಾಕ್ಟ್ ಕ್ರಿಯೆಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಕಾಂಟಾಕ್ಟ್ ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿರುವ 'ಸರ್ಚ್' ಐಕಾನ್‌ಗೆ ಹೋಗಿ. ಕಾಂಟಾಕ್ಟ್ ಹೆಸರನ್ನು ನಮೂದಿಸಿ. ಅಸ್ತಿತ್ವದಲ್ಲಿರುವ ಕಾಂಟಾಕ್ಟ್ ಇಲ್ಲದಿದ್ದರೆ, ಕ್ರಿಯೆಟ್ ಕಾಂಟಾಕ್ಟ್ ಮೇಲೆ ಕ್ಲಿಕ್ ಮಾಡಿ. ಇದು ನಮೂದಿಸಿದ ಹೆಸರಿನೊಂದಿಗೆ ಅಟೊಮೆಟಿಕ್ ಆಗಿ ಕಾಂಟಾಕ್ಟ್ ರಚಿಸುತ್ತದೆ. ನಂತರ ಬೇಕಾದ ಮಾಹಿತಿ ಸೇರಿಸಿ ಸೇವ್ ಕೊಡಿ.