Updated on: Feb 21, 2023 | 8:20 AM
ನಟಿ ವೇದಿಕಾ ಅವರು ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದವರಿಗೆ ಪರಿಚಿತರು. ಅವರಿಗೆ ಇಂದು (ಫೆ.21) ಬರ್ತ್ಡೇ ಸಂಭ್ರಮ. ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ನಟಿಗೆ ಶುಭಾಶಯ ಕೋರುತ್ತಿದ್ದಾರೆ.
ವೇದಿಕಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಸಂಗಮ’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ಶಿವರಾಜ್ಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ಉಪೇಂದ್ರ ಅವರ ‘ಹೋಂ ಮಿನಿಸ್ಟರ್’ ಚಿತ್ರದಲ್ಲೂ ವೇದಿಕಾ ಬಣ್ಣ ಹಚ್ಚಿದ್ದರು.
ವೇದಿಕಾ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಂದಿಗೂ ಅವರು ತಮ್ಮ ದೇಹದ ಅಂದವನ್ನು ಹಾಳುಮಾಡಿಕೊಳ್ಳಲು ಬಿಟ್ಟಿಲ್ಲ.
ಈ ಕಾರಣದಿಂದ ವೇದಿಕಾ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. 2022ರಲ್ಲಿ ಅವರ ನಟನೆಯ ‘ಹೋಂ ಮಿನಿಸ್ಟರ್’ ಸಿನಿಮಾ ರಿಲೀಸ್ ಆಯಿತು. ಈಗ ಅವರ ಕೈಲಿ ನಾಲ್ಕೈದು ಸಿನಿಮಾಗಳಿವೆ.