‘ಮೆಟ್ರೋ ಗೋಲ್ಡ್ವಿನ್ ಮೇಯರ್’ ಈ ನಿರ್ಮಾಣ ಸಂಸ್ಥೆ ಹೆಸರನ್ನು ಬಹುತೇಕರು ಕೇಳಿಯೇ ಇರುತ್ತಾರೆ. ಈ ಸಂಸ್ಥೆಯ ಲೋಗೋ ಸಾಕಷ್ಟು ಫೇಮಸ್. ಅಷ್ಟೇ ಅಲ್ಲ, ಈ ನಿರ್ಮಾಣ ಸಂಸ್ಥೆಯಿಂದ ಮೂಡಿ ಬಂದ ಚಿತ್ರಗಳ ಸಂಖ್ಯೆ 4000 ದಾಟಿದೆ, 17 ಸಾವಿರಕ್ಕೂ ಅಧಿಕ ಟಿವಿ ಶೋಗಳನ್ನು ನಿರ್ಮಾಣ ಮಾಡಿದೆ. ಇಂಥ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯನ್ನು ಅಮೇಜಾನ್ ಸಂಸ್ಥೆ ಖರೀದಿಸಿದೆ. ಅದೂ ಬರೋಬ್ಬರಿ 61,467 ಕೋಟಿ ರೂಪಾಯಿಗೆ (8.45 ಬಿಲಿಯನ್) ಅನ್ನೋದು ವಿಶೇಷ.
ಎಂಜಿಎಂ ಅಮೆರಿಕದ ಸಿನಿಮಾ ಸ್ಟುಡಿಯೋ. ಜೇಮ್ಸ್ ಬಾಂಡ್ ಫ್ರಾಂಚೈಸಿಯ ಹಕ್ಕನ್ನು ಎಂಜಿಎಂ ಹೊಂದಿದೆ. ಈ ಡೀಲ್ನಿಂದಾಗಿ ಅಮೇಜಾನ್ ಪ್ರೈಮ್ ಸಿನಿಮಾ ಲೈಬ್ರರಿ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಲಿದೆ. ಅಲ್ಲದೆ, ನೆಟ್ಫ್ಲಿಕ್ಸ್ ಹಾಗೂ ಡಿಸ್ನಿ+ ಹಾಟ್ಸ್ಟಾರ್ ಸೇರಿ ಸಾಕಷ್ಟು ಒಟಿಟಿಗಳಿಗೆ ಇದು ಭಾರೀ ದೊಡ್ಡ ಮಟ್ಟದಲ್ಲಿ ಕಾಂಪಿಟೇಷನ್ ಕೊಡಲಿದೆ.
ನೆಟ್ಫ್ಲಿಕ್ಸ್ನಲ್ಲಿ ಸಿಕ್ಕಷ್ಟು ಇಂಗ್ಲಿಷ್ ಹಾಗೂ ವೆಬ್ ಸೀರಿಸ್ಗಳು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎನ್ನುವ ಮಾತು ಪ್ರಚಲಿತದಲ್ಲಿದೆ. ಈಗ, ಅಮೇಜಾನ್ ಕೈಗೊಂಡಿರುವ ಈ ನಿರ್ಧಾರದಿಂದ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಅಲ್ಲದೆ, ಪ್ರೈಮ್ನಲ್ಲಿ ಸಿನಿಮಾಗಳ ಸಂಖ್ಯೆ ಹೆಚ್ಚಲಿದೆ.
ಇತ್ತೀಚಿನ ದಿನಗಳಲ್ಲಿ ಒಟಿಟಿಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಲಾಕ್ಡೌನ್ನಿಂದಾಗಿ ಈ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಒಟಿಟಿಗೆ ಬೇಡಿಕೆ ಮತ್ತಷ್ಟು ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಮೇಜಾನ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಎಂಜಿಎಂ ಕೇಬಲ್ ಟಿವಿ ಹಾಗೂ ಆ್ಯಪ್ ಕೂಡ ಹೊಂದಿದೆ. ಈ ಡೀಲ್ನಿಂದ ಇದು ಕೂಡ ಅಮೇಜಾನ್ ಪಾಲಾಗಿದೆ. ಕಳೆದ ಕೆಲ ತಿಂಗಳ ಹಿಂದೆಯೇ ಎಂಜಿಎಂ ಸೇಲ್ಗೆ ಇಡಲಾಗಿತ್ತು. ಇದನ್ನು ಖರೀದಿಸಲು ಸಾಕಷ್ಟು ಸಂಸ್ಥೆಗಳು ಮುಂದೆ ಬಂದಿದ್ದವು. ಕೊನೆಗೆ ಅಮೇಜಾನ್ ಜತೆ ಡೀಲ್ ಕುದುರಿದೆ. ಈ ಡೀಲ್ ಅಂತಿಮ ಆಗಲು ಸಮಯ ಸಿಗಲಿದೆ.
ಇದನ್ನೂ ಓದಿ: ಮತ್ತೆ ವಿವಾದ ಮಾಡಿಕೊಳ್ಳಲಿದೆಯೇ ಅಮೇಜಾನ್ ಪ್ರೈಮ್? ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ಗೆ ವಿಘ್ನ
Published On - 8:58 pm, Wed, 26 May 21