ಹೊಸ ಮೈಲಿಗಲ್ಲು ಸೃಷ್ಟಿಸಿದ ಅನಿರುದ್ಧ-ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ

ಆರ್ಯವರ್ಧನ್ ಆಗಿ ಅನಿರುದ್ಧ ಜಟ್ಕರ್ ಹೆಚ್ಚು ಜನಪ್ರಿಯರಾದರು. ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ಮನೆ ಮಾತಾದರು.

ಹೊಸ ಮೈಲಿಗಲ್ಲು ಸೃಷ್ಟಿಸಿದ ಅನಿರುದ್ಧ-ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ
ಮೇಘಾ ಶೆಟ್ಟಿ ಮತ್ತು ಅನಿರುದ್ಧ್​

Updated on: Apr 21, 2021 | 4:40 PM

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಈಗ ಹೊ ದಾಖಲೆ ಸೃಷ್ಟಿಸಿದೆ. ಧಾರಾವಾಹಿ 400 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ವಿಶೇಷ ಎಂದರೆ ಟೈಟಲ್ ಸಾಂಗ್ ಯೂಟ್ಯೂಬ್​ನಲ್ಲಿ 2.4 ಕೋಟಿಗೂ ಹೆಚ್ಚು ವೀಕ್ಷಣೆ ಕಂಡು ದಾಖಲೆ ಸೃಷ್ಟಿಸಿದೆ. ಕನ್ನಡದ ಯಾವ ಧಾರಾವಾಹಿಯ ಟೈಟಲ್​ ಸಾಂಗ್​ ಇಷ್ಟೊಂದು ವೀಕ್ಷಣೆ ಕಂಡಿಲ್ಲ.

ಮಧ್ಯವಯಸ್ಕ ಯಶಸ್ವಿ ಉದ್ಯಮಿ ಆರ್ಯವರ್ಧನ್, ಯುವತಿ ಅನು ಸಿರಿಮನೆ ಪ್ರೇಮಕಥೆ ಧಾರಾವಾಹಿಯ ಹೈಲೈಟ್​ .ಇವರಿಬ್ಬರ ಪ್ರೇಮಕಥೆ ಶುರುವಾಗಿ ಹಲವು ಅಡ್ಡಿ ಆತಂಕಗಳನ್ನು ಎದುರಿಸಿ ಗೆಲ್ಲುತ್ತದೆ. ಈಗ ಆರ್ಯವರ್ಧನ್ ಮದುವೆಯಾಗಲು ಅನು ಒಪ್ಪಿದ್ದಾಳೆ. ಆದರೆ ಅವರ ಮದುವೆ ಸುಸೂತ್ರವಾಗುತ್ತಿಲ್ಲ. ಮುಂದೇನು ನಡೆಯುತ್ತದೆ ಎನ್ನುವುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಈ ಧಾರಾವಾಹಿಯು ವಯಸ್ಸು, ಜೀವನಶೈಲಿ ಹಾಗೂ ಅಂತಸ್ತಿನಲ್ಲಿ ಆಕಾಶ ಹಾಗೂ ಭೂಮಿಯಷ್ಟು ಅಂತರವಿರುವ ನಾಯಕ, ನಾಯಕಿ ಪ್ರೇಮಕಥೆ ಎಲ್ಲರ ಮನ ಗೆದ್ದಿದೆ.

ಆರ್ಯವರ್ಧನ್ ಆಗಿ ಅನಿರುದ್ಧ ಜಟ್ಕರ್ ಹೆಚ್ಚು ಜನಪ್ರಿಯರಾದರು. ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ಮನೆ ಮಾತಾದರು. ಈ ಇಬ್ಬರ ಜೋಡಿಯೂ ಕನ್ನಡ ಕಿರುತೆರೆ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಈ ಧಾರಾವಾಹಿಗೆ ಈಗ 400 ಕಂತುಗಳನ್ನು ಪೂರೈಸಿದ ಸಂಭ್ರಮ.

ಜೊತೆ ಜೊತೆಯಲಿ ಧಾರಾವಾಹಿ ತಂಡ ಮೊಟ್ಟಮೊದಲ ಬಾರಿಗೆ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್​​ನಲ್ಲಿ ಅದ್ದೂರಿಯಾಗಿ ಟ್ರೈಲರ್ ಬಿಡುಗಡೆ ಮಾಡಿಕೊಂಡಿತ್ತು. ಈ ಮೂಲಕ ಅಪಾರ ಕುತೂಹಲ, ಜನಪ್ರಿಯತೆ ಗಳಿಸಿಕೊಂಡಿತ್ತು.

ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟಿ ವಿಜಯಲಕ್ಷ್ಮಿ ಸಿಂಗ್ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಶಾರದಾ ದೇವಿಯಾಗಿ ನಟಿಸಿದ್ದಾರೆ. ಅವರು ಆರ್ಯವರ್ಧನ್ ತಾಯಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಇದನ್ನೂ ಓದಿ: ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us