‘ಗಮ್ ಕೊಡ್ರೋ’; ವೇದಿಕೆ ಮೇಲೆ ಮಾತನಾಡುವಾಗಲೇ ಕಳಚಿತು ಬಾಲಯ್ಯ ಮೀಸೆ

ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನಟ ಬಾಲಕೃಷ್ಣ ಅವರ ಮೀಸೆ ಕಳಚಿ ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ‘ಅಖಂಡ 2’ ಚಿತ್ರದ ಪ್ರಚಾರದ ವೇಳೆ ಈ ಘಟನೆ ನಡೆದಿದ್ದು, ಅವರು ತಕ್ಷಣ ಸಿಬ್ಬಂದಿಯ ಸಹಾಯ ಪಡೆದು ಮೀಸೆಯನ್ನು ಸರಿಪಡಿಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ

‘ಗಮ್ ಕೊಡ್ರೋ’; ವೇದಿಕೆ ಮೇಲೆ ಮಾತನಾಡುವಾಗಲೇ ಕಳಚಿತು ಬಾಲಯ್ಯ ಮೀಸೆ
ಬಾಲಯ್ಯ

Updated on: Jun 14, 2025 | 12:24 PM

ನಟ ಬಾಲಯ್ಯ (Balayya) ಅವರು ವೇದಿಕೆ ಮೇಲೆ ಮಾತನಾಡಲು ನಿಂತರೆ ಒಂದೇ ಸಮನೆ ಮಾತನಾಡುತ್ತಲೇ ಇರುತ್ತಾರೆ. ಅವರಿಗೆ ಸರಿಸಾಟಿಯಾಗಿ ಯಾರೂ ನಿಲ್ಲೋಕೆ ಸಾಧ್ಯವಿಲ್ಲ. ಅದರಲ್ಲೂ ವೇದಿಕೆ ಮೇಲೆ ಅವರು ಮಾತನಾಡುವಾಗ ಯಾರದರೂ ಅಡಚಣೆ ಮಾಡಿದರೆ ಬಾಲಯ್ಯ ಅವರಿಗೆ ಸಿಟ್ಟೇ ಬಂದು ಬಿಡುತ್ತದೆ. ಈಗ ವೇದಿಕೆ ಒಂದರ ಮೇಲೆ ಅವರು ಮಾತನಾಡುವಾಗ ಮುಖಕ್ಕೆ ಅಂಟಿಸಿದ್ದ ಮೀಸೆ ಕಳಚಿ ಬೀಳೋಕೆ ಆರಂಭಿಸಿದೆ. ಇದರಿಂದ ಅವರು ಮುಜುಗರಕ್ಕೆ ಒಳಗಾದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಬಾಲಯ್ಯ ಅವರು ಇತ್ತೀಚೆಗೆ ತಮ್ಮ 65ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಹೈದರಾಬಾದ್​ನ ಬಸವತಾರಕಂ ಆಸ್ಪತ್ರೆಯಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವರು ವೇದಿಕೆ ಏರಿ ಮಾತನಾಡಿದರು. ಭಾಷಣ ಮಾಡುವಾಗ ರೋಷದಲ್ಲಿ ಮಾತನಾಡುತ್ತಿದ್ದರು. ಆದರೆ, ಈ ವೇಳೆ ಅವರ ಬಲಭಾಗದ ಮೀಸೆ ಸ್ವಲ್ಪ ಕಳಚಿದೆ. ಇದರಿಂದ ಅವರು ಆತಂಕಗೊಂಡರು. ತಕ್ಷಣ ಚೇತರಿಸಿಕೊಂಡು ಸಿಬ್ಬಂದಿಗೆ ಗಮ್ ನೀಡುವಂತೆ ಕೂಗಿದರು. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಇದನ್ನೂ ಓದಿ
ಸಲ್ಮಾನ್ ಖಾನ್​ ವೃತ್ತಿ ಜೀವನದ ಅತಿ ಕೆಟ್ಟ ಚಿತ್ರಗಳಿವು..
ದಾಖಲೆ ಬೆಲೆಗೆ ‘ಘಾಟಿ’ ಚಿತ್ರದ ಹಕ್ಕು ಮಾರಾಟ
‘ಸರಿಗಮಪ’ ಗೆಲುವಿನ ಬಳಿಕೆ ಮರೆಯದೇ ಪುನೀತ್ ಸಮಾಧಿಗೆ ಭೇಟಿ ನೀಡಿದ ಶಿವಾನಿ
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಗಮ್ ಕೊಟ್ಟ ತಕ್ಷಣ ಮೀಸೆಯನ್ನು ಸರಿಯಾಗಿ ಅಂಟಿಸಿಕೊಂಡು ಭಾಷಣ ಮುಂದುವರಿಸಿದರು. ಈ ವಿಡಿಯೋ ಈಗ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಇದನ್ನು ಮೀಮ್ ಮಾಡುತ್ತಿದ್ದಾರೆ. ಇದಕ್ಕೆ ನಾನಾ ಕಮೆಂಟ್​ಗಳು ಬರುತ್ತಿವೆ. ‘ಮುಂದೊಂದು ದಿನ ತಲೆಗೆ ಹಾಕಿದ ಟೋಪನ್ ಕೂಡ ಕಳಚಬಹುದು. ಆ ಬಗ್ಗೆ ಗಮನ ಇರಲಿ’ ಎಂದು ಕೆಲವರು ಹೇಳಿದ್ದಾರೆ. ‘ಸಿನಿಮಾಗಳಲ್ಲೇನೋ ಮೀಸೆ ಅಂಟಿಸಿಕೊಳ್ಳುವುದು ಅನಿವಾರ್ಯ. ಆದರೆ, ನಿಜ ಜೀವನದಲ್ಲಿ ಇದೆಲ್ಲ ಬೇಕೇ’ ಎಂದು ಕೆಲವರು ಕೇಳಿದ್ದಾರೆ.

ಇದನ್ನೂ ಓದಿ: ‘ಅಖಂಡ 2’ ಟೀಸರ್: ಊಹಿಸಿದ್ದಕ್ಕಿಂತಲೂ ಹೆಚ್ಚಾಯಿತು ಬಾಲಯ್ಯ ಮಾಸ್ ಅವತಾರ

ಬಾಲಯ್ಯ ಅವರು ‘ಅಖಂಡ 2’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಸಾಮಾನ್ಯವಾಗಿ ಬಾಲಯ್ಯ ಸಿನಿಮಾಗಳಲ್ಲಿ ಮಾಸ್ ಅಂಶ ಹೆಚ್ಚೇ ಇರುತ್ತದೆ. ಆದರೆ, ‘ಅಖಂಡ 2’ ಚಿತ್ರದಲ್ಲಿ ಮಾಸ್ ಅಂಶ ಮಿತಿ ಮೀರಿದೆ ಎನ್ನಲಾಗುತ್ತಿದೆ. ಈ ಟೀಸರ್​​ನ ಅನೇಖರು ಮೀಮ್​ಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us